ಹಣ್ಣು ತರಕಾರಿಗಳು ನಮ್ಮ ಆರೋಗ್ಯಕ್ಕೆ ಅದ್ಭುತವಾದ ಆಹಾರಗಳು. ನೈಸರ್ಗಿಕ ಸ್ವರೂಪದ ಇವುಗಳನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ತುಂಬಾ ಒಳ್ಳೆಯದು. ಅಡ್ಡ ಪರಿಣಾಮಗಳು ಕಡಿಮೆ ಇರುವುದರಿಂದ ದಿನದ ಯಾವುದೇ ಸಂದರ್ಭದಲ್ಲಿ ಬೇಕಾದರೂ ಸೇವಿಸಬಹುದು. ಹಣ್ಣು ತರಕಾರಿಗಳಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಬೇಸಿಗೆ ದಿನಗಳಲ್ಲಿ ನಮ್ಮ ಆರೋಗ್ಯದ ಮೇಲೆ ಇವು ಅದ್ಭುತವಾಗಿ ಕೆಲಸ ಮಾಡುತ್ತವೆ.
ಪೌಷ್ಟಿಕಾಂಶಗಳ ಪ್ರಮಾಣ
ಪೌಷ್ಟಿಕಾಂಶಗಳ ಪ್ರಮಾಣ ಹೇರಳವಾಗಿ ಕಂಡು ಬರುವ ಹಣ್ಣುಗಳಲ್ಲಿ ದಾಳಿಂಬೆ ಹಣ್ಣು ಕೂಡ ಒಂದು. ದಾಳಿಂಬೆ ಹಣ್ಣಿನ ಆರೋಗ್ಯಕರ ಗುಣಗಳು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿದರೆ ಸಿಗುವಂತಹ ಪ್ರಯೋಜನಗಳು ಅಪಾರ.ಪ್ರತಿದಿನ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನಮ್ಮ ಆರೋಗ್ಯದಲ್ಲಿ ಸಾಕಷ್ಟು ಒಳ್ಳೆಯ ಬದಲಾವಣೆಗಳು ಉಂಟಾ ಗುತ್ತವೆ.ಬಿಸಿಲಿನ ಕಾಲದಲ್ಲಿ ದೇಹಕ್ಕೆ ಒಳ್ಳೆಯ ನೀರಿನ ಅಂಶ ಸಿಗುವುದರ ಜೊತೆಗೆ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ನಮ್ಮ ಇಡೀ ದಿನ ತಾಜಾ ಆಗಿರಲು ಇದು ನೆರವಾಗುತ್ತದೆ. ದಿನಾ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿದರೆ…..
ಹೃದಯಕ್ಕೆ ಬಹಳ ಒಳ್ಳೆಯದು
ಈ ನಿಟ್ಟಿನಲ್ಲಿ ನಡೆದ ಹಲವಾರು ಸಂಶೋಧನೆಗಳು ನೀಡಿರುವ ವರದಿಯ ಪ್ರಕಾರ ದಾಳಿಂಬೆ ಹಣ್ಣಿನ ಜ್ಯೂಸ್ ಪ್ರತಿದಿನ ಸೇವನೆ ಮಾಡುವುದರಿಂದ ನಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ.ಇದರಿಂದ ರಕ್ತದ ಒತ್ತಡ ಕೂಡ ಕಡಿಮೆಯಾಗಿ ಹೃದಯದ ಅಪ ಧಮನಿಗಳಿಗೆ ರಕ್ತ ಸಂಚಾರ ಹೆಚ್ಚಾಗುತ್ತದೆ. ಹೀಗಾಗಿ ಇದು ನಮ್ಮ ಹೃದಯವನ್ನು ಬಲಪಡಿಸುತ್ತದೆ ಜೊತೆಗೆ ಹೃದಯಕ್ಕೆ ಸಂಬಂಧ ಪಟ್ಟಂತೆ ಇರುವಂತಹ ಸಮಸ್ಯೆಗಳನ್ನು ದೂರ ಮಾಡುತ್ತೆ.
ಜೀರ್ಣಶಕ್ತಿ ಹೆಚ್ಚಾಗುತ್ತದೆ
ಮನೆ ಮದ್ದುಗಳ ರೂಪದಲ್ಲಿ ಕೂಡ ದಾಳಿಂಬೆ ಹಣ್ಣಿನ ಜ್ಯೂಸ್ ಕೆಲಸ ಮಾಡುತ್ತದೆ. ನಮ್ಮ ಕೆಟ್ಟು ಹೋದ ಜೀರ್ಣಾಂಗ ವ್ಯವಸ್ಥೆಯನ್ನು ಸರಿ ಪಡಿಸುವಲ್ಲಿ ದಾಳಿಂಬೆ ಹಣ್ಣಿನ ಜ್ಯೂಸ್ ನಿರಂತರವಾಗಿ ಕಾರ್ಯ ನಿರ್ವಹಿಸುತ್ತದೆ. ಉತ್ತಮ ಜೀರ್ಣಾಂಗ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ದಾಳಿಂಬೆ ಹಣ್ಣು ಕೆಲಸ ಮಾಡುತ್ತದೆ.
ರೋಗ ನಿರೋಧಕ ಶಕ್ತಿ
ದಾಳಿಂಬೆ ಹಣ್ಣಿನಲ್ಲಿ ನಿಂಬೆಹಣ್ಣಿನಂತೆ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗಿ ಯಾವುದೇ ತರಹದ ಸಣ್ಣ ಪುಟ್ಟ ಸೋಂಕುಗಳು ಹಾಗೂ ಇನ್ನಿತರ ವೈರಸ್ ಪ್ರಭಾವದಿಂದ ನಮ್ಮನ್ನು ರಕ್ಷಿಸುತ್ತದೆ.
ಆಂಟಿ ಇಂಪ್ಲಮೆಟರಿ ಲಕ್ಷಣಗಳಿವೆ
ದಾಳಿಂಬೆ ಹಣ್ಣಿನಲ್ಲಿ ಅಪಾರ ಪ್ರಮಾಣದ ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ಆಂಟಿ ಇಂಫ್ಲಾಮೇಟರಿ ಲಕ್ಷಣಗಳು ಸಿಗುತ್ತವೆ. ಇವು ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವಲ್ಲಿ ನೆರವಾಗುತ್ತವೆ.ಕೆಲವೊಂದು ಸಂಶೋಧನೆ ಹೇಳುವ ಹಾಗೆ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಕ್ಯಾನ್ಸರ್ ಅಭಿವೃದ್ಧಿಯಾಗುವುದು ಕೂಡ ತಪ್ಪುತ್ತದೆ.
ರಕ್ತದ ಒತ್ತಡ ಕಡಿಮೆಯಾಗುತ್ತದೆ
ರಕ್ತನಾಳಗಳ ಮೇಲೆ ರಕ್ತದ ಒತ್ತಡ ಕಡಿಮೆಯಾಗುವುದು ಮಾತ್ರವಲ್ಲದೆ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ರಕ್ತ ಸಂಚಾರ ಕೂಡ ಹೆಚ್ಚಾಗುತ್ತದೆ. ಇದು ರಕ್ತದ ಒತ್ತಡ ನಿಯಂತ್ರಣದಲ್ಲಿ ಸಹಾಯ ಮಾಡುವುದು ಮಾತ್ರವಲ್ಲದೆ ಆರೋಗ್ಯಕರವಾದ ಹೃದಯ ನಮ್ಮದಾಗುವಂತೆ ಮಾಡುತ್ತದೆ.
ಕೊನೆ ಮಾತು
ದಾಳಿಂಬೆ ಹಣ್ಣು ಪೌಷ್ಟಿಕಾಂಶಗಳನ್ನು ಒಳಗೊಂಡ ಒಂದು ಆಹಾರ ಪದಾರ್ಥವಾಗಿದ್ದು ನಮ್ಮ ಹೃದಯ ಸೇರಿದಂತೆ ಇಡೀ ನಮ್ಮ ದೇಹಕ್ಕೆ ಒಳ್ಳೆಯ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ.ಇದರಿಂದ ಬೇಸಿಗೆ ಕಾಲದಲ್ಲಿ ನಮ್ಮ ದೇಹವನ್ನು ನಿರ್ಜಲೀಕರಣ ಸಮಸ್ಯೆ ಯಿಂದ ಪಾರು ಮಾಡಿಕೊಳ್ಳಬಹುದು. ಬೆಳಗ್ಗೆ, ಮಧ್ಯಾಹ್ನ ಅಥವಾ ಸಂಜೆ ಯಾವುದೇ ಸಂದರ್ಭದಲ್ಲಿ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿದು ಇದರ ಸಂಪೂರ್ಣ ಪ್ರಯೋಜನಗ ಳನ್ನು ನಾವು ನಮ್ಮದಾಗಿಸಿಕೊಳ್ಳಬಹುದು.