ಎಲ್ಲಾ ವಿಷಯಕ್ಕೂ ಕೊರಗುತ್ತಿದ್ದೀರಾ?ನಿಮ್ಮ ಚಿಂತೆ ಹೊರಟು ಹೋಗುತ್ತೆ

ಒಂದು ಊರಲ್ಲಿ ಒಬ್ಬ ಯುವಕನಿದ್ದ ಅವನದು ತುಂಬಾ ಮೃದುವಾದಂತ ಮನಸ್ ತತ್ವ ಯಾರಾದರೂ ಏನಾದರೂ ಅಂದರು ಅಥವಾ ಯಾವುದೇ ಚಿಕ್ಕ ವಿಷಯ ಅಥವಾ ಸಂಘಟನೆ ಅವನನ್ನು ನೋಯಿಸಿದರು. ತುಂಬಾನೇ ಕೊರಗುತ್ತಿದ್ದ. ಅವನಿಗೆ ನಡೆಯುತ್ತಿದ್ದ ಪ್ರತಿ ಸಂಘಟನೆಗೂ ಕಾರಣ ಆ ಭಗವಂತ ಅಥವಾ ಅವನ ದುರದೃಷ್ಟ ಅಂತ ನಂಬುತ್ತಿದ್ದ. ಅದೇ ರೀತಿ ಅವನಿಗೆ ನೋವುಂಟು ಮಾಡಿದಂತ ವ್ಯಕ್ತಿಯ ಮೇಲೆ ಹೇಗಾದರೂ ಸೇಡು ತೀರಿಸಿಕೊಳ್ಳಬೇಕೆಂದು. ದಿನವಿಡೀ ಯೋಚಿಸುತ್ತಿದ್ದ. ಪ್ರತಿ ಚಿಕ್ಕ ವಿಷಯಕ್ಕೂ ಕೊರಗುತ್ತಿದುದರಿಂದ. ಅವನು ಯಾರೊಂದಿಗೂ ಸರಿಯಾಗಿ ಬೆರೆಯುತ್ತಿರಲಿಲ್ಲ ಹಾಗೆ ಅವನು ಮಾಡುವಂತ ಕೆಲಸದ ಮೇಲು ಗಮನ ಹರಿಸುತ್ತಿರಲಿಲ್ಲ . ಯಾವಾಗಲೂ ಅಶಾಂತಿಯಿಂದ ಇರುತ್ತಿದ್ದ.

ದಿನೇ ದಿನೇ ಕುಗ್ಗಿ ಹೋಗುತ್ತಿದ್ದ. ಅವನ ಈ ಸ್ಥಿತಿಯನ್ನು ಗಮನಿಸಿದಂತ ಅವನ ಸ್ನೇಹಿತನೊಬ್ಬ ಒಂದು ಸಲಹೆ ಕೊಟ್ಟ ಹತ್ತಿರದಲ್ಲಿಒಂದು ಆಶ್ರಮದಲ್ಲಿ ಒಬ್ಬ ಸನ್ಯಾಸಿ ಇದ್ದಾನೆ. ನೀನು ಅವರನ್ನು ಭೇಟಿಯಾಗು ನಿನ್ನ ಸಮಸ್ಯೆಗೆ ಖಂಡಿತ ಪರಿಸ್ಕಾರ ಸಿಗುತ್ತದೆ ಎಂದು ಹೇಳಿದ. ಹಾಗಾಗಿ ಆ ಯುವಕ ಸನ್ಯಾಸಿಯ ಹತ್ತಿರ ಹೋಗಿ ಸ್ವಾಮಿ ನಾನು ಎಷ್ಟೋ ಬಾರಿ ಯಾವ ವಿಷಯದ ಬಗ್ಗೆಯು ಕೊರಗಬಾರದು. ಯಾವುದರ ಬಗ್ಗೆಯೂ ಯೋಚಿಸಬಾರದು. ಯಾರ ಮೇಲೂ ದ್ವೇಷ ತೋರಬಾರದು. ಚಿಂತೆ ಇಲ್ಲದೆ ಸಂತೋಷವಾಗಿ ನಗುನಗುತ್ತಾ ಇರಬೇಕೆಂದು ಪ್ರಯತ್ನಿಸಿದೆ. ಆದರೆ ನನ್ನಿಂದ ಕೋ ಸಾದ್ಯ ವಾಗುತ್ತಿಲ್ಲ.
ಪ್ರತಿ ಚಿಕ್ಕ ವಿಷಯಕ್ಕೂ ಕೋಪ ಬರುತ್ತಿದೆ. ಆ ಕೋಪ ದ್ವೇಷದಂತೆ ಬದಲಾಗುತ್ತಿದೆ. ನನಗೆ ಯಾರ ಮೇಲು ನಂಬಿಕೆ ಬರುತ್ತಿಲ್ಲ. ಹೀಗಾಗಿ ಪ್ರತಿ ಚಿಕ್ಕ ವಿಷಯಕ್ಕೂ ಕೊರಗಿ ಕೊರಗಿ ನಾನು ದಿನೇ ದಿನೇ ಕುಗ್ಗಿ ಹೋಗುತ್ತಿದ್ದೇನೆ. ನೀವೇ ಹೇಗಾದರೂ ಈ ಸಮಸ್ಯೆಯಿಂದ ನನ್ನನ್ನು ಪಾರು ಮಾಡಬೇಕೆಂದು ಕೇಳಿಕೊಂಡ. ಆ ಯುವಕನ ಮಾತನ್ನು ಕೇಳಿ ಸಿಕೊಡ ಸನ್ಯಾಸಿ ಒಂದು ಮಾತು ಆಡದೆ. ಆಶ್ರಮದೊಳಗೆ ಹೊರಟು ಹೋದರು. ಅದನ್ನು ನೋಡಿದ ಯುವಕ ಆಶ್ಚರ್ಯಗೊಂಡ. ಅವನಿಗೆ ಆ ಸನ್ಯಾಸಿ ಯ ಮೇಲೆ ವಿಪರೀತವಾದ ಕೋಪ ಬಂತು ಅದರ ನಂತರ ಏಕೆ ಇರಬಹುದು ಎಂಬ ಅನುಮಾನ ಶುರುವಾಯಿತು. ಅದರ ಬಗ್ಗೆ ಯೋಚಿಸುತ್ತಾ ಅಲ್ಲೇ ಕುಳಿತುಕೊಂಡ ಸ್ವಲ್ಪ ಹೊತ್ತು ಬಿಟ್ಟು. ಸನ್ಯಾಸಿ ಆಶ್ರಮದಿಂದ ನೀರು ತುಂಬಿರುವಂತಹ ಒಂದು ಚಿಕ್ಕ ಮಣ್ಣಿನ ಪಾತ್ರೆ ಹಿಡಿದು ಹೊರಬಂದು.

ಹಾ ಯುವಕ ನನ್ನ ಕರೆದು ಕುಮಾರ ಈ ಪಾತ್ರೆಯ ಬಾರ ಎಷ್ಟಿರಬಹುದು. ಕೇಳಿದರು ಅದಕ್ಕೆ ಯುವಕ ಸರಿಯಾಗಿ ಹೇಳಕ್ಕಾಗಲ್ಲ. ಆದರೆ ಅಷ್ಟೊಂದು ಭಾರ ಏನು ಇರಲ್ಲ ಅಂದು ಹೇಳಿದ ಅದಕ್ಕೆ ಸನ್ಯಾಸಿ ಸರಿ ಹಾಗಾದರೆ. ನಾನು ಸ್ವಲ್ಪ ಹೊತ್ತು ಈ ಪಾತ್ರೆಯನ್ನು ಹೀಗೆ ಕೈಯಲ್ಲಿ ಹಿಡಿದುಕೊಂಡು ನಿಂತಿದ್ದರೆ ಏನಾಗುತ್ತದೆ. ಏನಾಗುತ್ತೆ ಏನು ಆಗಲ್ಲ ಸ್ವಾಮಿಜಿ ಅಂದ ಯುವಕ ಸರಿ ಒಂದು ಗಂಟೆಯ ಕಾಲ ಈ ಪಾತ್ರೆಯನ್ನು ಕೈಲಿ ಹಿಡಿದುಕೊಂಡು ನಿಂತಿದ್ದರೆ ಏನಾಗುತ್ತೆ ಅಂದರು ಸನ್ಯಾಸಿ. ಆಗ ನಿಮ್ಮ ಕೈ ನೋವಾಗುತ್ತೆ ಅಂತ ಅಂದ ಹಾ ಯುವಕ.

ಒಂದು ವೇಳೆ ನಾನು ಇದೇ ಪಾತ್ರೆಯನ್ನು ದಿನವಿಡೀ ಹಿಡಿದುಕೊಂಡು ನಿಂತರೆ ಏನಾಗುತ್ತೆ. ಆಗ ನಿಮಗೆ ತಾಳಲಾರದಷ್ಟು ನೋವಾಗುತ್ತದೆ. ನಿಮ್ಮ ಕೈ ಊದಿಕೊಳ್ಳುತ್ತದೆ. ಜೋಮ್ ಹಿಡಿಯುತ್ತದೆ ರಕ್ತ ಸಂಚಾರ ಆಗುವುದಿಲ್ಲ ಎಂದ ಯುವಕ ಕುಮಾರ ಗಮನವಿಟ್ಟು ಕೇಳಿಸಿಕೋ. ನಾನು ಎಷ್ಟು ಹೊತ್ತು ಈ ಪಾತ್ರೆಯನ್ನು ಹಿಡಿದುಕೊಂಡರು ಇದರ ಬಾರ ಹೆಚ್ಚಾಯ್ತಾ ಇದ್ದರು. ಸನ್ಯಾಸಿ ಇಲ್ಲ ನನ್ನ ಕೈಗೇಕೆ ನೋವಾಗುತ್ತಿದೆ ಎಂದರು. ಸನ್ಯಾಸಿ ಅಂದ್ರೆ ತುಂಬಾ ಹೊತ್ತು ಹಾಗೆ ಹಿಡಿದುಕೊಂಡಿರುತ್ತೀರಾ. ಅಲ್ವಾ ಅದಕ್ಕೆ ಎಂದ ಯುವಕ . ಹಾಗಾದರೆ ನನಗೆ ನೋವಾಗಬಾರದು ಅಂದರೆ ನಾನು ಏನು ಮಾಡಬೇಕು ಎಂದರು ಸನ್ಯಾಸಿ. ಆಗ ನೀವು ಆ ಪಾತ್ರೆಯನ್ನು ಕೆಳಗಿಡಬೇಕು ಎಂದ ಆ ಯುವಕ

ಅದಕ್ಕೆ ಸನ್ಯಾಸಿ ಕುಮಾರ ಈಗ ನೀನು ಸರಿಯಾದ ದಾರಿಗೆ ಬಂದಿರುವೆ. ನೀನು ಹೇಳಿದ್ದು ಸತ್ಯ ನಮ್ಮ ಜೀವನದಲ್ಲಿ ಬರುವಂತ ಸಮಸ್ಯೆಗಳು ಕೂಡ ಇದೇ ರೀತಿ ಇರುತ್ತವೆ. ನಮಗಿರುವಂತ ಸಮಸ್ಯೆಗಳು ನಮಗೆ ಬರುವಂತ ಸಮಸ್ಯೆಗಳ ಬಗ್ಗೆ ನಾವು ಸ್ವಲ್ಪ ಹೊತ್ತು ಯೋಚಿಸಿ ಸುಮ್ಮನಾದರೆ. ಏನು ಆಗುವುದಿಲ್ಲ ಅದೇ ನಾವು ದಿನವಿಡಿ ಯೋಚಿಸಿತ್ತ ಕುಳಿತರೆ ಅವು ನಮ್ಮನ್ನು ತುಂಬಾನೇ ನೋಯಿಸುತ್ತವೆ. ಅದೇ ನೀನು ದಿನಗಳ ಗಟ್ಟಲೆ ಅದರ ಬಗ್ಗೆ ಯೋಚಿಸುತ್ತಾ ಕುಳಿತರೆ. ಅದೇ ಸಮಸ್ಯೆಗಳು ನಮ್ಮಲ್ಲಿ ಭಯ ಹಾಗೂ ಶಾಂತಿಯನ್ನುಂಟು ಮಾಡುತ್ತವೆ.

ನಮ್ಮ ಜೀವನದಲ್ಲಿ ನಡೆದಂತ ಸಂಘಟನೆಗಳು ನಾವು ಮಾಡಿದಂತ ತಪ್ಪುಗಳನ್ನು ನಾವು ಯೋಚಿಸಲೇಬೇಕು. ಆಗಲೇ ನಾವು ಮತ್ತೊಂಮೇ ತಪ್ಪು ಮಾಡಲು ಹೋಗುವುದಿಲ್ಲ. ಅವುಗಳಿಂದ ಪಾಠ ಕಲಿತ್ತುಕೊಂಡು ಮುದೆ ಸಾಗಬೇಕು ಆಗತ ನೀನು ಅದೇ ಕೆಲಸ ಎಂಬತ್ತೇ ಒಂದೇ ವಿಷಯದ ಬಗ್ಗೆ ಯೋಚಿಸುತ್ತಾ ಕುಳಿತರೆ ಅದು ಕೂಡ ಈ ಮಣ್ಣಿನ ಪಾತ್ರೆಯಂತೆ ನಿನ್ನ ಮನಸ್ಸಿಗೆ ನೋವು ಉಂಟು ಮಾಡುತ್ತದೆ. ನೀನು ಕಳೆದು ಹೋದವಿಷಯದ ಬಗ್ಗೆ ಯೋಚಿಸುತ್ತಾ ಕುಳಿತ್ತಿದ್ದಾರೆ ಪ್ರಸುತ್ತ ಕಾಲ ಈ ದಿನ ನಿನ್ನ ಕೈ ತಪ್ಪಿ ಹೋಗುತ್ತದೆ. ಆಗ ಭವಿಷ್ಯತ್ತಿನಲ್ಲಿ ಮತ್ತೆ ಕಳೆದು ಹೋದ ಈದಿನದ ಬಗ್ಗೆ ನಿನು ಕೊರಗಬೇಕಾಗುತ್ತದೆ.

ಹಾಗಾಗಿ ನೀನು ಭವಿಷ್ಯತ್ತಿನಲ್ಲಿ ಯಾವ ರೀತಿ ಇರಬೇಕೆಂದು ಆಸೆ ಪಡುತ್ತೀ ದಿಯೋ. ಅದಕ್ಕಾಗಿ ಹಿಂದಿನಿಂದಲ್ಲೆ ಶ್ರಮ ಪಡಬೇಕು. ನೀನು ಈ ಹಿಂದೆ ಮಾಡಿದಂತ ತಪ್ಪುಗಳನ್ನು ಮುಂದೆ ಮಾಡಬೇಡ ಕೊರಗುವುದನ್ನು ಬಿಟ್ಟು ಮುಂದೆ ಸಾಗು. ಯಾವ ಕೆಲಸ ಮಾಡಬೇಕು ಎಂಬುದರ ಬಗ್ಗೆ ಮಾತ್ರ ಯೋಚಿಸು ಏಕಂದರೆ ನೋವು ಎಂಬುದು ಮನುಷ್ಯನನ್ನು ಎಲ್ಲಿಯವರೆಗಾದರು ಕರೆದು ಹೋಗುತ್ತೇ ಒಬ್ಬರನ್ನು ಕೋಲುವವರೆಗೂ ಅಥವಾ ನೀನೆ ಸಾಯವ ವರೆಗೂ ಚಿಂತೆ ಮಾತ್ರ ನಿನ್ನನು ಬಿಡುವುದಿಲ್ಲ ಹಾಗಾಗಿ ಯೋಚಿಸಿ ಹಾಳಗ ಬೇಡ ಎಂದರು ಸನ್ಯಾಸಿ.

Leave a Comment