ಬೇಸಿಗೆ ಉರಿಬಿಸಿಲಿಗೆ ತಂಪಾದ ಆರೋಗ್ಯಕರ ಹೆಸರು ಪಾನಕ 1 ಲೋಟ ಸಾಕು!

ಹೆಸರುಕಾಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ತುಂಬಾ ಬಿಸಿಲು ಇರುವಾಗ ನಮ್ಮ ದೇಹಕ್ಕೆ ತಂಪಾಗಿ ಏನಾದರು ಬೇಕು ಅನಿಸುತ್ತದೆ. ಬಾಯಿಗೂ ಹಾಗು ರುಚಿಗೂ ಕೂಡ ತಂಪಾಗಿರಬೇಕು ಮತ್ತು ನಮ್ಮ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದಾಗಿರಬೇಕು. ಅದರಲ್ಲಿ ಒಂದು ಹೆಸರುಕಾಳು. ಹೆಸರುಕಾಳಿನ ಪಾನಕ ಹೇಗೆ ಮಾಡುವುದು ಎಂದು ತಿಳಿಸಿಕೊಡುತ್ತೇವೆ.

ಒಂದು ಕಪ್ಪು ಹೆಸರು ಕಾಳನ್ನು 4-6 ಗಂಟೆ ನೆನಸಿ ಇಟ್ಟುಕೊಳ್ಳಬೇಕು.ಇದನ್ನು ನಾವು ಮಿಕ್ಸಿ ಮಾಡಿಕೊಳ್ಳಬೇಕು. ನಂತರ ಇದನ್ನು ಶೋದಿಸಿಕೊಳ್ಳಿ. ಜೊತೆಗೆ ಇದಕ್ಕೆ ಚಿಟಿಕೆ ಕಲ್ಲು ಉಪ್ಪು ಹಾಗು ಒಂದು ಕಪ್ಪು ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಬೇಕು. ಇದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಹಾಕಬೇಕು. ಇದನ್ನು ಮಿಕ್ಸ್ ಮಾಡಿ ಪ್ರತಿ ದಿನ ಒಂದು ಲೋಟ ಕುಡಿಯಬಹುದು. ದೇಹದಲ್ಲಿ ಉಷ್ಣತೆ ಜಾಸ್ತಿ ಇದ್ದಾಗ ತಂಪು ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ.

ಬಿಸಿಲು ಜಾಸ್ತಿ ಆದಾಗ ದೇಹದಲ್ಲಿ ನಿರ್ಜಲಿಕರಣ ಆಗುತ್ತದೆ. ಇಂತಹ ಸಮಯದಲ್ಲಿ ಬೇರೆ ಯಾವುದೇ ಕೂಡ್ರಿಂಕ್ಸ್ ಕುಡಿಯುವುದರಿಂದ ಮನೆಯಲ್ಲಿ ಆರೋಗ್ಯಕರವಾದ ಈ ತರ ಪಾನಕ ಮಾಡಿ ಕುಡಿಯಬಹುದು.ಇನ್ನು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಇದು ಒದಗಿಸುತ್ತದೆ. ದೇಹದಲ್ಲಿ ತುಂಬಾ ಸುಸ್ತು ಇದ್ದರು ಕೂಡ ಇದನ್ನು ಸೇವನೆ ಮಾಡಿದರೆ ಸಾಕು ಸುಸ್ತು ನಿವಾರಣೆ ಆಗುತ್ತದೆ. ಹೆಸರು ಕಾಳಿನಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಜೀರ್ಣ ಕ್ರಿಯೆಗೆ ತುಂಬಾ ಒಳ್ಳೆಯದು. ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದಕ್ಕೆ ಇದು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆ ಸಮಸ್ಸೆಯನ್ನು ದೂರ ಮಾಡುತ್ತದೆ. ಇದರಿಂದ ರಕ್ತ ಹೀನತೆ ಸಮಸ್ಸೆ ಕೂಡ ಬರುವುದಿಲ್ಲ.

Leave a Comment