ಹಿಂದಿನ ಜನ್ಮದ ದ್ವೇಷ, ಬಾಕಿ ಋಣ! ಈ ಜನ್ಮದಲ್ಲಿ ನಮ್ಮನ್ನು ಹೇಗೆ ಕಾಡುತ್ತದೆ ಗೊತ್ತಾ!

ಹಿಂದಿನ ಜನ್ಮದಲ್ಲಿ ನಾವು ಯಾರಿಗಾದರೂ ಬಾಕಿ ಇದ್ದು ಅಥವಾ ಋಣಿಯಾಗಿದ್ದಾರೆ ಆ ಋಣ ತೀರಿಸುವುದಕ್ಕೆ ಈ ಜನ್ಮದಲ್ಲಿ ನಾವು ಅವರ ಗಂಡನಗೋ ಅಥವಾ ಹೆಂಡತಿ ಆಗಿ ಅಥವಾ ಮಕ್ಕಳಾಗಿ ಅಕ್ಕ ತಂಗಿ ತಂದೆ ತಾಯಿಯಾಗಿ, ಸ್ನೇಹಿತರಾಗಿ ಅಕ್ಕ ತಮ್ಮ ಹೀಗೆ ಯಾವುದೊ ಒಂದು ಸಂಬಂಧದಿಂದ ಅವರಿಗೆ ಹತ್ತಿರವಾಗುತ್ತಿವಿ. ಬಾಕಿ ಅಥವಾ ಋಣ ತೀರಿದ ಕೂಡಲೇ ಅವರಿಂದ ದೂರ ಆಗುವುದು ಅಥವಾ ಸಾವನ್ನಪ್ಪುವುದು ಕೂಡ ಆಗುತ್ತದೆ. ಈ ಚಿಕ್ಕ ವಿಷಯವನ್ನು ನಾವು ಅರ್ಥ ಮಾಡಿಕೊಂಡರೆ ಈ ಜನ್ಮದಲ್ಲಿ ಅಥವಾ ಜೀವನದ ಮೇಲೆ ಯಾರ ಮೇಲು ಅತೀ ಪ್ರೀತಿ ಅಥವಾ ವ್ಯಾಮೋಹ ಬರುವುದಿಲ್ಲ.

ಹಿಂದಿನ ಜನ್ಮ ಋಣವನ್ನು ಈ ಜನ್ಮದಲ್ಲಿ ತೀರಿಸುತ್ತೇವೆ ಎಂದರೆ ನಾವು ಪೂರ್ವ ಜನ್ಮದಲ್ಲಿ ಒಬ್ಬರಿಂದ ಉಚಿತವಾಗಿ ಹಣ ಅಥವಾ ಯಾವುದಾದರು ವಸ್ತುಗಳನ್ನು ತೆಗೆದುಕೊಂಡಿದ್ದಾರೆ ಅಥವಾ ಉಚಿತವಾಗಿ ಅವರಿಂದ ಸೇವೆ ಮಾಡಿಸಿಕೊಂಡಿದ್ದರೆ ಆ ಭಾಗ್ಯ ತೀರಿಸೋದಕ್ಕೆ ಈ ಜನ್ಮದಲ್ಲಿ ಕೂತು ತಿನ್ನು ಖರ್ಚು ಮಾಡುವ ಹೆಂಡತಿಯಾಗಿ ಹೆತ್ತವರ ಸಂಪಾದನೆಯಲ್ಲಿ ಬದುಕುವ ಮಕ್ಕಳಾಗಿ ಅಥವಾ ಯಾವಾಗಲು ಒಬ್ಬರಿಗೆ ಸೇವೆ ಮಾಡುತ್ತ ಬದುಕುತ್ತಿವಿ.

ಅತ್ತೆ ಮಾವನಿಗೆ ಸೇವೆ ಮಾಡುವ ಸೊಸೆಯಾಗಿ ಅಥವಾ ಅಳಿಯನಾಗಿ ಹೀಗೆ ಜನ್ಮ ಪಡೆಯುತ್ತೀವಿ.ದ್ವೇಷ ಅನ್ನೋದು ಕೂಡ ಒಂದು ಬಾಕಿನೇ. ಪೂರ್ವ ಜನ್ಮದಲ್ಲಿ ನಮ್ಮ ಮೇಲಿನ ಸೇಡು ಅಥವಾ ದ್ವೇಷ ತೀರಿಸಿಕೊಳ್ಳುವುದಕ್ಕೆ ಈ ಜನ್ಮದಲ್ಲಿ ನಮಗೆ ಹಿಂಸೆ ಕೊಡುವ ಯಜಮಾನನೊಂದಿಗೆ ಅಥವಾ ನಮ್ಮ ಪೀಡಿಸುವ ಮಕ್ಕಳಾಗೆ ಜನಿಸುತ್ತಾರೆ.

ಪೂರ್ವ ಜನ್ಮದಲ್ಲಿ ನಾವು ಯಾರಿಗಾದರೂ ತಪ್ಪು ಮಾಡಿದರೆ ಈ ಜನ್ಮದಲ್ಲಿ ನಮಗೆ ಅಪಕಾರ ಮಾಡುವ ಹಾಗೆ ಹುಟ್ಟುತ್ತಾರೆ ಮತ್ತು ಶತ್ರುಗಳಾಗಿ ಜನಿಸುತ್ತಾರೆ. ಒಂದು ವೇಳೆ ನೀವು ಒಳ್ಳೆಯ ಉಪಕಾರ ಮಾಡಿದ್ದರೆ ಈ ಜನ್ಮದಲ್ಲಿ ಸ್ನೇಹಿತ ಗಂಡನಾಗಿ ಜನಿಸುತ್ತಾರೆ.

ನಿಜವಾಗಿ ನಡೆದ ಕಥೆ
ಕೊಲ್ಲೂರು ಮುಕಾಂಬಿಕೆ ದೇವಸ್ಥಾನದ ಹತ್ತಿರ ಒಬ್ಬ ಕುಂಟ ಭಿಕ್ಷುಕ ಬೆಳಗ್ಗೆ 6:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೂ ಭಿಕ್ಷೆ ಬೇಡುತಿದ್ದ. ಭಿಕ್ಷೆ ಬೇಡುತ್ತಲೇ ತಿಂಗಳಿಗೆ 10000 ಹಣ ಸಂಪಾದನೆ ಮಾಡುತ್ತಿದ್ದ. ಅದರೆ ಒಳ್ಳೆಯ ಬಟ್ಟೆ ಮನೆ ಇದ್ದರೆ ಯಾರು ಕೂಡ ಅವನಿಗೆ ಭಿಕ್ಷೆ ಹಾಕುವುದಿಲ್ಲ ಅಂತ ಅರಿದು ಹೋದ ಬಟ್ಟೆಗಳನ್ನು ಹಾಕಿಕೊಂಡು ಯಾರದ್ದೋ ಮನೆಯ ಜಗಿಲಿ ಮುಂದೆ ಮಲಗುತ್ತಾ ಮುಕಾಂಬಿಕಾ ದೇವಸ್ಥಾನದಲ್ಲಿ ಉಚಿತವಾಗಿ ಸಿಗುವ ಪ್ರಸಾದ ಸೇವನೆ ಮಾಡುತ್ತ ಬದುಕುತಿದ್ದ.

ಈ ರೀತಿ ಭಿಕ್ಷೆ ಬೇಡಿ ಕೂಡಿಟ್ಟ ಹಣದಿಂದ ಅವನ ಇಬ್ಬರ ಮಕ್ಕಳನ್ನು ಓದಿಸುತ್ತ ಇದ್ದ. ಒಂದು ದಿನ ದೇವಸ್ಥಾನಕ್ಕೆ ಒಬ್ಬ ಸನ್ಯಾಸಿ ಬಂದು ಆ ಭಿಕ್ಷುಕನನ್ನು ನೋಡಿ ಪೂರ್ವ ಜನ್ಮದಲ್ಲಿ ನೀನು ಇಬ್ಬರ ಹತ್ತಿರ ಹಣ ಪಡೆದುಕೊಂಡು ಅವರು ತುಂಬಾ ಕಷ್ಟದಲ್ಲಿ ಇರುವಾಗ ನೀನು ಸಾಲ ಕೊಡುವ ಸ್ಥಿತಿಯಲ್ಲಿದ್ದರು ಕೊಡಲಿಲ್ಲ. ಇದರಿಂದ ಈ ಜನ್ಮದಲ್ಲಿ ಕಷ್ಟಪಟ್ಟು ದುಡಿತ ಇದ್ದರು ನೀನು ಮಾತ್ರ ಸುಖ ಅನುಭವಿಸದೆ ಮಕ್ಕಳನ್ನು ಓದಿಸುತ್ತ ಅವರ ಋಣವನ್ನು ತೀರಿಸುತ್ತ ಇದ್ದೀಯ ಎಂದು ಹೇಳುತ್ತಾರೆ.

ಈ ರೀತಿ ತಿಳಿದು ತಿಳಿಯದೆ ಮಾಡುವ ತಪ್ಪುಗಳಿಂದ ನಾವು ಯಾವ ಶಿಕ್ಷೆ ಅನುಭವಿಸಬೇಕು ಎಂದು ತಿಳಿಸುವ ಕಥೆ ನೀವು ಯಾವ ವಸ್ತುವನ್ನು ದುರ್ಬಳಕೆ ಮಾಡುತ್ತಿರೋ ಮುಂದಿನ ಜನ್ಮದಲ್ಲಿ ನೀವು ಅದು ಸಿಗದೇ ಇರುವ ಜಾಗದಲ್ಲಿ ಹುಟ್ಟುತ್ತೀರಾ ಎಂದು ಸನ್ಯಾಸಿ ಹೇಳಿದರು. ಹಾಗಾಗಿ ಯಾರಿಂದಲೂ ಏನು ಕೆಲಸವನ್ನು ಮಾಡಿಸಿಕೊಳ್ಳಬೇಡಿ ಮತ್ತು ಉಚಿತವಾಗಿ ಯಾವುದನ್ನೂ ತೆಗೆದುಕೊಳ್ಳುಬಾರದು. ಈ ಸೇವೆಯಿಂದ ಮುಂದಿನ ಜನ್ಮದಲ್ಲಿ ನೀವು ಕೆಲವು ಸಮಸ್ಸೆಗಳನ್ನು ಎದುರಿಸಬೇಕಾಗುತ್ತದೆ.

Leave a Comment