ಮುಖ್ಯದ್ವಾರ ಯಾವ ಸ್ಥಾನದಲ್ಲಿ ಇರಬೇಕು ಅದಕ್ಕೆ ಬಳಕೆ ಮಾಡುವಂತ ವಸ್ತು ಗಳು ಯಾವು ಆಗಿರಬೇಕು. ಹಾಗೆ ಅದಕ್ಕೆ ವಾಸ್ತು ಶಾಸ್ತ್ರದ ಪ್ರಕಾರ ನಾವು ಏನು ಮಾಡಬೇಕಾಗುತ್ತೆ. ಹಾಗೆ ಏನ್ ಮಾಡಬಾರದು.
ಮೊದಲನೇದಾಗಿ ಮುಖ್ಯದ್ವಾರ ಯಾವಾಗಲೂ ಉತ್ತರ ಈಶಾನ್ಯ ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡಬೇಕು. ಈ ನಿದರ್ಶನಗಳನ್ನು ಶುಭ ಅಂತ ಪರಿಗಣಿಸಲಾಗುತ್ತದೆ. ದಕ್ಷಿಣ ನೈರುತ್ಯ ವಾಯುವ್ಯ. ಅಥವಾ ಆಗ್ನೇಯ ಈ ದಿಕ್ಕುಗಳಲ್ಲಿ ಮುಖ್ಯ ದ್ವಾರ ಇರೋದನ್ನ ತಪ್ಪಿಸಬೇಕು. ಒಂದು ಬಾಗಿಲು ದಕ್ಷಿಣ ಅಥವಾ ನೈರುತ್ಯ ದಿಕ್ಕಿನಲ್ಲಿದ್ರೆ ಅದನ್ನು ಸೀಸದ ಲೋಹದ ಪಿರಮಿಡ್ ಮತ್ತು ಸೀಸದ ಎಲಿಕ್ಸ್ ಬಳಸಿ ನಿರ್ಮಿಸಬಹುದು.
ಒಂದು ಬಾಗಲು ವಾಯುವ ದಿಕ್ಕಿನಲ್ಲಿ ಇದ್ರೆ ಹಿತ್ತಾಳೆ ಪಿರಮಿಡ್ ಮತ್ತು ಹಿತ್ತಾಳೆ ಎಲೆಕ್ಕ್ಸ್ ಬಳಸಬಹುದು. ಆಗ್ನೇಯ ದಿಕ್ಕಿನಲ್ಲಿ ಒಂದು ಬಾಗಿಲು ಇದ್ದರೆ. ತಾಮ್ರದ ಎಲೆಕ್ಸ್ ಬಳಸಬಹುದು. ಮುಖ್ಯದ್ವಾರ ಮನೆಯ ಇತರೆ ಬಾಗಲುಗಳಿಗೆ ಗಿಂತ ದೊಡ್ಡದಿರಬೇಕು. ಮತ್ತು ಅದು ಪ್ರದಕ್ಷಣಕಾರವಾಗಿ ತೆರೆಯಬೇಕು. ಮುಖ್ಯ ಬಾಗಿಲಿಗೆ ಸಮಾನಂತರವಾಗಿ ಒಂದು ಸಾಲಿನಲ್ಲಿ ಮೂರು ಬಾಗಿಲುಗಳನ್ನು ಹೊಂದುವುದನ್ನು ತಪ್ಪಿಸಬೇಕು. ಯಾವುದೇ ಕಾರಣಕ್ಕೂ ಇರಬಾರದು .
ಯಾಕಂದ್ರೆ ಇದು ಗಂಭೀರವಾಸ್ತುದೋಷ ಎಂದು ಪರಿಗಣಿಸಲಾಗುತ್ತದೆ. ಮತ್ತು ಮನೆಯ ಸಂತೋಷದ ಮೇಲೆ ಇದು ತುಂಬಾ ಪರಿಣಾಮ ಬೀರುತ್ತೆ ಅಂತ ಹೇಳಬಹುದು.ಇನ್ನು ಮುಖ್ಯ ದ್ವಾರಕ್ಕೆ ಬಳಸುವ ಅಂತ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ. ಮರದ ಬಾಗಿಲನ್ನು ಮುಖ್ಯ ದ್ವಾರಕ್ಕೆ ಬಹಳ ಶುಭ ಅಂತ ಪರಿಗಣಿಸಲಾಗುತ್ತೆ. ಇನ್ನು ಮನೆಯ ಮುಖ್ಯದ್ವಾರ ದಕ್ಷಿಣ ದಿಕ್ಕಿಗೆ ಇದ್ದರೆ ಬಾಗಿಲಿನ ಮರ ಮತ್ತು ಲೋಹದ ಸಂಯೋಜನೆಯನ್ನು ಹೊಂದಿರಬೇಕು. ಇನ್ನು ಪಶ್ಚಿಮ ದಿಕ್ಕಾಗಿದ್ರೆ. ಇದು ಲೋಹದ ಕೆಲಸಗಳನ್ನು ಹೊಂದಿರಬೇಕು. ಇನ್ನು ಉತ್ತರ ಬಾಗಿಲಾಗಿದ್ರೆ ಇದು ಹೆಚ್ಚು ಬೆಳ್ಳಿಯ ಬಣ್ಣವನ್ನು ಹೊಂದಿರಬೇಕು. ಹಾಗೆ ಪೂರ್ವ ದಿಕ್ಕಲ್ಲಿದ್ರೆ. ಇದನ್ನು ಮರದಿಂದ ಮಾಡಬೇಕು . ಮತ್ತು ಸೀಮಿತ ಲೋಹದ ಪರಿಕಾರಗಳಿಂದ ಅಲಂಕರಿಸ್ ಇರಬೇಕು.
ಮುಖ್ಯದ್ವಾರದ ಸುತ್ತಲಿನ ಪ್ರದೇಶವನ್ನು ಅಲಂಕರಿಸಬೇಕು ಮನೆಯ ಧನಾತ್ಮಕ ಶಕ್ತಿ ಈ ಮುಖ್ಯದ್ವಾರ ಆಕರ್ಷಿಸುತ್ತದೆ. ಹಾಗಾಗಿ ಡಸ್ಟ್ ಬಿನ್ ಗಳು ಮುರಿದ ಕುರ್ಚಿಗಳು ಅಥವಾ ಇನ್ಯಾವುದೋ ವಸ್ತುಗಳನ್ನು ಅಲ್ಲಿ ಇಡುಕೂಡದು. ಯಾಕಂತಂದ್ರೆ ಇದು ಶುಭ ಅಲ್ಲ ಅಂತ ಹೇಳಲಾಗುತ್ತದೆ. ಮುಖ್ಯ ಬಾಗಿಲಿನ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಕೊಂಡಿರಬೇಕು. ಹಾಗೆ ಮುಖ್ಯ ದ್ವಾರ ಎದುರು ಕನ್ನಡಿಯನ್ನು ಎಂದಿಗೂ ಇಡಬಾರದು.
ಅದು ಮುಖ್ಯ ಬಾಗಿಲನ್ನು ಪ್ರತಿಬಿಂಬಿಸುತ್ತದೆ ಮತ್ತು ಅದು ಶಕ್ತಿಯನ್ನು ಒಳಗೆ ಬರುವುದಕ್ಕೆ ಬಿಡುವುದಿಲ್ಲ . ಮತ್ತು ಮುಖ್ಯ ಬಾಗಿಲು ಯಾವಾಗಲೂ ಅಮೃತಶಿಲೆ ಅಥವಾ ಮರವನ್ನು ಹೊಂದಿರಬೇಕು. ಯಾಕಂದ್ರೆ ಇದು ನಕಾರಾತ್ಮಕ ಕಂಪನಗಳನ್ನು ಹೀರಿಕೊಳ್ಳುತ್ತೆ. ಮತ್ತು ಸಕಾರಾತ್ಮಕ ಶಕ್ತಿಯನ್ನು ಮಾತ್ರ ಹಾದು ಹೋಗಲು ಬಿಡುತ್ತೆ. ಹಾಗಾಗಿ ಮುಖ್ಯ ಬಾಗಿಲನ್ನು ಓಂ ಸ್ವಸ್ತಿಕ್ ಮುಂತಾದ ದೈವಿಕ ಚಿನ್ನೆಗಳಿಂದ ಅಲಂಕರಿಸಿ ಮತ್ತು ರಂಗೋಲಿಗಳನ್ನು ನೆಲದ ಮೇಲೆ ಹಾಕಬೇಕು. ಹೀಗೆ ಇವುಗಳನ್ನು ಶುಭ ಅಂತ ಪರಿಗಣಿಸಲಾಗಿದೆ. ಮತ್ತು ಅದೃಷ್ಟವನ್ನು ಆಹ್ವಾನಿಸುತ್ತೆ ಅಂತ ಹೇಳಬಹುದು.
ವೀಕ್ಷಕರೆ ಈಗ ಮುಖ್ಯದ್ವಾರದ ವಾಸ್ತುವಿಗೆ ಏನ್ ಮಾಡಬೇಕು ಮತ್ತು ಏನ್ ಮಾಡಬಾರದು. ಅಂತ ತಿಳ್ಕೊಳೋಣ.
ಮುಖ್ಯ ದ್ವಾರದಲ್ಲಿ ಯಾವಾಗಲೂ ಪ್ರಕಾಶಮಾನವಾದ ಬೆಳಕು ಹೊಂದಿರಬೇಕು. ಆದ್ರೆ ಕೆಂಪು ದೀಪಗಳನ್ನು ತಪ್ಪಿಸಬೇಕು. ಮುಖ್ಯ ಬಾಗಿಲು ಸಂಜೆ ಹೊತ್ತು ಚೆನ್ನಾಗಿ ಬೆಳಗಬೇಕು. ಮುಖ್ಯ ಬಾಗಿಲನ ಎದುರು ಕನ್ನಡಿಯನ್ನು ಎಂದಿಗೂ ಇಡಬಾರದು. ಸ್ಥಳವಿದ್ರೆ ಹಸಿರು ಸಸ್ಯದಿಂದ ಪ್ರವೇಶ ದ್ವಾರವನ್ನು ಅಲಂಕರಿಸಬೇಕು. ದಾರಿಯಲ್ಲಿ ಯಾವುದೇ ಅಡೆತಡೆ ಗಳಿಲ್ಲದೆ. ಮುಖ್ಯ ಬಾಗಿಲು 90 ಡಿಗ್ರಿಗಳಲ್ಲಿ ತೆರೆಯಬೇಕು ಅದು ಪ್ರದಕ್ಷಣಕಾರವಾಗಿ. ತೆರೆಯುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತದೆ.
ಇಂಜುಗಳನ್ನು ನಿಯಮಿತವಾಗಿ ಎಣ್ಣೆ ಮತ್ತು ಬಾಗಿಲಿನ ಬಿಡಿ ಭಾಗಕ್ಕೆ ಒಳಿಪು ಮಾಡಲಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಪ್ರವೇಶ ದ್ವಾರದಲ್ಲಿ ಯಾವುದೇ ಮುರಿದ ಅಥವಾ ಕತ್ತರಿಸಿದ ಮರ ಮೊಳೆಗಳು ಇರಕೂಡದು ಯಾವಾಗ್ಲೂ ನಾಮಫಲಕವನ್ನು ಇರಿಸಬೇಕು. ಬಾಗಿಲು ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿದ್ರೆ ಲೋಹದ ನಾಮಫಲಕವನ್ನು ಹಾಕಿದ್ರೆ ಒಳ್ಳೆಯದು ಅಂತ ಹೇಳಬಹುದು.
ಇನ್ನು ಬಾಗಿಲು ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿದ್ದರೆ ಮರದ ನಾಮಫಲಕಗಳನ್ನು ಬಳಸಬೇಕು. ಉತ್ತಮ ಗುಣಮಟ್ಟದ ಮರವನ್ನು ಮಾತ್ರ ಬಳಸಬೇಕು ಮತ್ತು ನಿಮ್ಮ ಮನೆಯ ಇತರೆ ಬಾಗಿಲು ಗಳಿಗಿಂತ ಮುಖ್ಯ ಬಾಗಿಲನ ಎತ್ತರ ಹೆಚ್ಚಿರಬೇಕು ಅನ್ನೋದನ್ನ ಗಮನದಲ್ಲಿ ಇಟ್ಟುಕೊಳ್ಳಬೇಕು.
ಸ್ನಾನಗೃಹಗಳನ್ನು ಮುಖ್ಯ ಬಾಗಿಲಿನ ಹತ್ತಿರ ಇರಿಸ್ಕೂಡದು. ಪ್ರಾಣಿಗಳ ಪ್ರತಿಮೆಗಳು ಮತ್ತು ಇತರೆ ವ್ಯಕ್ತಿಗಳ ಅಥವಾ ಕಾರಂಜಿಗಳು ಅಥವಾ ನೀರಿನ ಅಂಶಗಳನ್ನು ಮುಖ್ಯ ಬಾಗಿಲಿನ ಬಳಿ ತಪ್ಪಿಸಬೇಕು. ಮುಖ್ಯ ಬಾಗಿಲನ್ನು ಕಪ್ಪು ಬಣ್ಣದಲ್ಲಿ ಚಿತ್ರಿಸಬಾರದು.
ವೀಕ್ಷಕರೆ ಮುಖ್ಯ ಬಾಗಿಲನ್ನು ನಿರ್ಮಿಸುವುದಕ್ಕೆ ಉತ್ತಮವಾದ ಸ್ಥಾನಗಳು ಯಾವುವು ಅಂತ ತಿಳಿದುಕೊಳ್ಳೋಣ.
ಮುಖ್ಯ ಬಾಗಿಲನ್ನು ಇರ್ಸೋದಕ್ಕೆ ಉತ್ತಮ ಸ್ಥಾನ ಯಾವುದು ಅಂದ್ರೆ . ಅತ್ಯುತ್ತಮ ಸ್ಥಾನಕ್ಕಾಗಿ ಒಂದು ನಿಲುವು ಮತ್ತು ಉಳಿದವುಗಳನ್ನು ಚಿತ್ರದಲ್ಲಿ ಗುರುತಿಸಲಾಗುತ್ತದೆ. ಇದರಲ್ಲಿ ಈಶಾನ್ಯ ನಿಮ್ಮ ಮುಖ್ಯ ಬಾಗಿಲನ್ನು ನಿರ್ಮಿಸುವುದಕ್ಕೆ ಬಂದಾಗ ಈಶಾನ್ಯವು ತುಂಬಾ ಅನುಕೂಲಕರ ದಿಕ್ಕಾಗಿದೆ. ಬೆಳಗ್ಗೆ ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ. ಇದು ಅಪಾರ ಶಕ್ತಿಯನ್ನು ಪಡೆಯುವ ದಿಕ್ಕಾಗಿದೆ. ಇದು ಮನೆಗೆ ಚೈತನ್ಯ ಮತ್ತು ಶಕ್ತಿಯನ್ನು ನೀಡುತ್ತದೆ.
ಇನ್ನು ಉತ್ತರ ಈ ಸ್ಥಾನವು ಕುಟುಂಬಕ್ಕೆ ಸಂಪತ್ತು ಮತ್ತು ಅದೃಷ್ಟವನ್ನು ತರುತ್ತೆ. ಅಂತ ಹೇಳಲಾಗುತ್ತಿದೆ. ಮತ್ತು ನಿಮ್ಮ ಮುಖ್ಯ ಬಾಗಿಲು ಅಥವಾ ಪ್ರವೇಶ ದ್ವಾರವನ್ನು ನಿರ್ಮಿಸುವ ಎರಡನೇ ಅತ್ಯುತ್ತಮ ಸ್ಥಾನ ಅಂತ ಹೇಳಬಹುದು.
ಮುಂದಿನದು ಪೂರ್ವ ಈ ಪ್ರದೇಶ ತುಂಬಾ ಸೂಕ್ತವಲ್ಲ ಆದರೆ ಅದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತೆ ಅಂತ ಹೇಳಬಹುದು.ಮುಂದಿನದು ಆಗ್ನೇಯ ನೈರುತ್ಯಕ್ಕೆ ಎಂದಿಗೂ ನೆಲೆಗೊಳಬಾರದು. ಬೇರೆ ಆಯ್ಕೆ ಇಲ್ಲದಿದ್ದರೆ. ಆಗ್ನೇಯವನ್ನು ಆರಿಸಿಕೊಳ್ಳಬೇಕಾಗುತ್ತದೆ.ಮುಂದಿನದು ವಾಯುವ್ಯ ಬೇರೆ ಆಯ್ಕೆ ಇಲ್ಲದಿದ್ದರೆ. ಮತ್ತು ನೀವು ಉತ್ತರ ದಿಕ್ಕಿನಲ್ಲಿ ಪ್ರವೇಶವನ್ನು ಹೊಂದಿರಬೇಕು. ಅದು ವಾಯುವ್ಯ ದಿಕ್ಕಿನಲ್ಲಿ ಇದೆ ಎಂದು ಖಚಿತ ಪಡಿಸಿಕೊಳ್ಳಬೇಕು. ಸಂಜೆಯ ಸೂರ್ಯ ಮತ್ತು ಸಮೃದ್ಧಿಯ ಪ್ರಯೋಜನವನ್ನು ಈ ರೀತಿ ಸ್ವಾಗತಿಸಬೇಕು.