ಅಕ್ಷಯ ತೃತೀಯ ದಿನ ಈ ತಪ್ಪುಗಳು ಆಗದಂತೆ ಎಚ್ಚರವಹಿಸಿ ಇಲ್ಲವಾದಲ್ಲಿ ಈ ಅಕ್ಷಯ ತೃತೀಯ ಪೂಜೆ ಫಲ ಲಭಿಸದು!

ಅಕ್ಷಯ ತೃತೀಯ ಎಂದರೆ ಮೊದಲು ನೆನಪು ಆಗುವುದು ಏನಾದರು ಅಮೂಲ್ಯವಾದ ವಸ್ತು ತೆಗೆದುಕೊಂಡು ಬಂದರೆ ಅಕ್ಷಯ ಆಗುತ್ತದೆ ಎನ್ನುವ ನಂಬಿಕೆ. ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಲಕ್ಷ್ಮಿ ಅನುಗ್ರಹ ಆಗುತ್ತದೆ.

ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದಕ್ಕಾಗಿ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಆದರೆ, ಅಕ್ಷಯ ತೃತೀಯದ ವೇಳೆ ಮನೆಯಲ್ಲಿ ಈ ವಸ್ತುಗಳಿದ್ದರೆ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುವುದಿಲ್ಲ ಎನ್ನುವ ನಂಬಿಕೆಯಿದೆ. ಧನ, ಸಮೃದ್ಧಿಗಾಗಿ ಅಕ್ಷಯ ತೃತೀಯಕ್ಕೂ ಮುನ್ನ ಮನೆಯಿಂದ ಯಾವೆಲ್ಲಾ ವಸ್ತುಗಳನ್ನು ಹೊರಹಾಕಬೇಕು ಗೊತ್ತೇ..? ಇವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲೇಬೇಡಿ.

ಅಕ್ಷಯ ತೃತೀಯ ದಿನವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುವುದು. ಈ ಬಾರಿ ಅಕ್ಷಯ ತೃತೀಯವನ್ನು ಮೇ 10 ರ ಶುಕ್ರವಾರದಂದು ಆಚರಿಸಲಾಗುವುದು. ಅಕ್ಷಯ ತೃತೀಯವು 2024ರ ವೈಶಾಖ ಮಾಸದ ಮೊದಲ ಹಬ್ಬ. ಈ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಆಚರಿಸಲಾಗುತ್ತದೆ. ಅಕ್ಷಯ ಎಂದರೆ ಎಂದಿಗೂ ಕಡಿಮೆಯಾಗದ ಎಂಬರ್ಥವನ್ನು ನೀಡುತ್ತದೆ.

ಈ ದಿನದಂದು ಹೋಮ, ಪಿತೃ ತರ್ಪಣ, ದಾನ – ಧರ್ಮ ಮಾಡುವುದು ಅತ್ಯಂತ ಪ್ರಯೋಜನಕಾರಿಯೆನ್ನುವ ನಂಬಿಕೆಯಿದೆ. ಅಕ್ಷಯ ತೃತೀಯದಂದು ಈ ಕೆಲಸಗಳನ್ನು ಮಾಡುವುದರಿಂದ ಯಶಸ್ಸು ಮತ್ತು ಅದೃಷ್ಟವು ಪ್ರಾಪ್ತವಾಗುತ್ತದೆ. ಅಕ್ಷಯ ತೃತೀಯಕ್ಕೂ ಮುನ್ನ ಕೆಲವೊಂದು ವಸ್ತುಗಳನ್ನು ಮನೆಯಿಂದ ಹೊರಹಾಕುವುದು ನಿಮಗೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು, ಸಮೃದ್ಧಿಯನ್ನು ತರುತ್ತದೆ. ಅಕ್ಷಯ ತೃತೀಯಕ್ಕೂ ಮುನ್ನ ನಾವು ಯಾವೆಲ್ಲಾ ವಸ್ತುಗಳನ್ನು ಮನೆಯಿಂದ ಹೊರಹಾಕಬೇಕು..?

ಪಾತ್ರೆಗಳು​
ಅಕ್ಷಯ ತೃತೀಯಕ್ಕೂ ಮುನ್ನ ನೀವು ನಿಮ್ಮ ಮನೆಯಿಂದ ಮುರಿದ ಅಥವಾ ತುಂಡಾದ ಪಾತ್ರೆಗಳನ್ನು ಹೊರಹಾಕಬೇಕು. ಏಕೆಂದರೆ ಇದು ಮನೆ ಮತ್ತು ಕುಟುಂಬದಲ್ಲಿ ಗೊಂದಲವನ್ನು ಉಂಟುಮಾಡುತ್ತದೆ. ಮುರಿದ ಪಾತ್ರೆಗಳು ಮನೆಯೊಳಗೆ ನಕಾರಾತ್ಮಕತೆಯನ್ನು ತರುತ್ತವೆ. ಆದ್ದರಿಂದ, ನೀವು ಮನೆಯಿಂದ ಮುರಿದ ಅಥವಾ ತುಂಡಾದ ಪಾತ್ರೆಗಳನ್ನು ಎಸೆಯುವುದು ಬಹಳ ಮುಖ್ಯ.

​ಕೊಳಕು ಬಟ್ಟೆಗಳು​

ಲಕ್ಷ್ಮಿ ದೇವಿಯು ಶುಚಿತ್ವಕ್ಕೆ ಬಹುಬೇಗ ಆಕರ್ಷಿತಳಾಗುತ್ತಾಳೆ. ಆದ್ದರಿಂದ ನೀವು ನಿಮ್ಮ ಬಟ್ಟೆಗಳನ್ನು ತೊಳೆದು ಶುಚಿಯಾಗಿಟ್ಟುಕೊಳ್ಳಬೇಕು ಮತ್ತು ನಿಮ್ಮ ದೈಹಿಕ ಶುಚಿತ್ವಕ್ಕೂ ಹೆಚ್ಚಿನ ಮಹತ್ವವನ್ನು ನೀಡಬೇಕು. ಹಾಗೆಯೇ ಅಕ್ಷಯ ತೃತೀಯ ದಿನದಂದು ಮನೆ ಮತ್ತು ಪಾತ್ರೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

​ಹರಿದ ಚಪ್ಪಲಿಗಳು​

ಹರಿದ ಬೂಟುಗಳು ಮತ್ತು ಚಪ್ಪಲಿಗಳು ಮನೆಗೆ ಬಡತನವನ್ನು ತರುತ್ತವೆ ಎನ್ನುವ ನಂಬಿಕೆಯಿದೆ. ಲಕ್ಷ್ಮಿ ದೇವಿಯು ನಿಮ್ಮ ಮನೆಯ ಮುಖ್ಯ ಬಾಗಿಲಿನ ಮೂಲಕ ಮನೆಗೆ ಪ್ರವೇಶಿಸುವುದರಿಂದ, ಮುಖ್ಯ ದ್ವಾರದಿಂದ ಹರಿದ ಚಪ್ಪಲಿ ಅಥವಾ ಬೂಟುಗಳನ್ನು ತೆಗೆದುಹಾಕುವುದು ಮುಖ್ಯ. ಅಲ್ಲದೆ, ಯಾವುದೇ ಬೂಟುಗಳು ಮತ್ತು ಚಪ್ಪಲಿಗಳನ್ನು ಮನೆಯೊಳಗೆ ಅಥವಾ ಮುಖ್ಯ ದ್ವಾರದಿಂದ ದೂರವಿಡಲು ಪ್ರಯತ್ನಿಸಿ.

ತುಂಡಾದ ಪೊರಕೆ​

ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಅಕ್ಷಯ ತೃತೀಯದಂದು ಮನೆಯಲ್ಲಿ ಮುರಿದ ಪೊರಕೆ ವಿನಾಶವನ್ನು ತರುತ್ತದೆ ಎಂದು ನಂಬಲಾಗಿದೆ. ಅಕ್ಷಯ ತೃತೀಯ ದಿನದಂದು, ಮನೆಯಲ್ಲಿ ಪೊರಕೆ ಮುರಿದರೆ, ಅದು ಮನೆಯ ಶಾಂತಿ ಮತ್ತು ಸಮೃದ್ಧಿಯನ್ನು ನಾಶಪಡಿಸುತ್ತದೆ ಎನ್ನುವ ನಂಬಿಕೆಯಿದೆ. ಆದ್ದರಿಂದ, ನೀವು ಈ ದಿನ ತುಂಡಾದ ಅಥವಾ ಮುರಿದ ಪೊರಕೆಯನ್ನು ಮನೆಯಿಂದ ಹೊರಹಾಕಬೇಕು.

ಜೇಡರ ಬಲೆ​

ಜೇಡರ ಬಲೆಯನ್ನು ಅಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಜೇಡರ ಬಲೆ ಇರುವುದರಿಂದ ಆ ಮನೆಯಲ್ಲಿ ಬಡತನ ತಲೆದೂರುತ್ತದೆ. ಸಾಲ ಬಾಧೆ ಹೆಚ್ಚಾಗುತ್ತಲೇ ಹೋಗುತ್ತದೆ. ಯಾವಾಗಲೂ ಮನೆಯಲ್ಲಿ ಜೇಡರ ಬಲೆ ಕಟ್ಟಲು ಬಿಡಬಾರದು.

Leave a Comment