ಕೈಯಲ್ಲಿ ಊಟ ಮಾಡಿದರೆ ತೂಕ ಕಡಿಮೆಯಾಗುತ್ತದೆ. ಆಯುರ್ವೇದ ಪ್ರಕಾರ ಪ್ರತಿ ಬೆರಳುಗಳು ಒಂದೊಂದು ಪಂಚಭೂತ ಅಂಶಗಳನ್ನು ಒಳಗೊಂಡಿದೆ.
ಹೆಬ್ಬೆರಳು ಆಕಾಶವನ್ನು ಸೂಚಿಸುತ್ತದೆ. ಹೆಬ್ಬೆರಳನ್ನು ಚೀಪುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ.
ತೋರು ಬೆರಳು ವಾಯುವನ್ನು ಸೂಚಿಸುತ್ತದೆ
ಮಧ್ಯ ಬೆರಳು ಅಗ್ನಿಯನ್ನು ಸೂಚಿಸುತ್ತದೆ.
ಉಂಗುರದ ಬೆರಳು ಭೂಮಿಯನ್ನು ಸೂಚಿಸುತ್ತದೆ
ಕಿರು ಬೆರಳು ನೀರನ್ನು ಸೂಚಿಸುತ್ತದೆ.
ಈ ಅಂಶಗಳಲ್ಲಿ ಯಾವುದೇ ಹೆಚ್ಚು ಕಡಿಮೆಯಾದರು ರೋಗಗಳಿಗೆ ಕಾರಣವಾಗುತ್ತದೆ. ನಾವು ಕೈಗಳಿಂದ ಊಟ ಮಾಡಿದಾಗ ಎಲ್ಲಾ ಐದು ಅಂಶಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಾಧ್ಯ. ಹಾಗಾಗಿ ಅಚ್ಚುಕಟ್ಟಾಗಿ ತೃಪ್ತಿಯಿಂದ ಕೈಯಲ್ಲಿ ಊಟ ಮಾಡಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ.