ನವದೆಹಲಿ: ಇಂದು ಅನೇಕರು ಅಕಾಲಿಕ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಿಳಿ ಕೂದಲು ವಯಸ್ಸಾಗುವಿಕೆಯ ಸಂಕೇತ ಅಂತಾ ಹೇಳ್ತಿದ್ದ ಕಾಲವೊಂದಿತ್ತು.ಆದರೆ ಇಂದು 25 ರಿಂದ 30 ವರ್ಷ ವಯಸ್ಸಿನ ಯುವಕರು ಕೂಡ ಬಿಳಿ ಕೂದಲಿನಿಂದ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇದರ ಹಿಂದೆ ಆನುವಂಶಿಕ ಕಾರಣವೂ ಇರಬಹುದು, ಆದರೆ ಇದು ಸಾಮಾನ್ಯವಾಗಿ ಹದಗೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಉಂಟಾಗುತ್ತದೆ.
ನಮ್ಮ ಕೂದಲಿನಲ್ಲಿ ಮೆಲನಿನ್ ಎಂಬ ವರ್ಣದ್ರವ್ಯವಿದೆ. ಈ ವರ್ಣದ್ರವ್ಯವು ಕಡಿಮೆಯಾದಂತೆ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆ ತರುವುದು ಮುಖ್ಯ. ಆಗ ಮಾತ್ರ ನೀವು ಬಯಸಿದ ಫಲಿತಾಂಶ ಪಡೆಯಬಹುದು. ಕೆಲವು ಕೆಟ್ಟ ಚಟಗಳಿಂದ ಕೂದಲು ಬೇಗ ಬಿಳಿಯಾಗುತ್ತವೆ. ಹೀಗಾಗಿ ಯುವ ಜನರು ಈ ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು.
ಇದನ್ನೂ ಓದಿ: ಭಕ್ತರು ನೋಡ ನೋಡುತ್ತಿದ್ದಂತೆ ಕಣ್ಮರೆಯಾಗುತ್ತೆ ಈ ಶಿವಮಂದಿರ: ಪುರಾಣದಲ್ಲಿ ಹೇಳಿರೋದೇನು?
ಬಿಳಿ ಕೂದಲು ಸಮಸ್ಯೆಗೆ ಪರಿಹಾರ ಇಲ್ಲಿದೆ
1. ನಿಮ್ಮ ಬಿಳಿ ಕೂದಲ ಸಮಸ್ಯೆಗೆ ನೆಲ್ಲಿಕಾಯಿ ಮತ್ತು ದಾಸವಾಳದ ಹೂ ರಾಮಬಾಣ. ಇದಕ್ಕಾಗಿ ನೆಲ್ಲಿಕಾಯಿ ಮತ್ತು ದಾಸವಾಳದ ಜೊತೆಗೆ ಕೆಲವು ಹನಿ ಎಳ್ಳು ಮತ್ತು ತೆಂಗಿನ ಎಣ್ಣೆಯನ್ನು ಚೆನ್ನಾಗಿ ಬೆರೆಸಿ ಪೇಸ್ಟ್ ತಯಾರಿಸಿ. ಈಗ ಈ ಪೇಸ್ಟ್ ಅನ್ನು ಕೂದಲಿನ ಬೇರುಗಳಿಗೆ ಮಸಾಜ್ ಮಾಡಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ಬಿಳಿ ಕೂದಲು ಮತ್ತೆ ಕಪ್ಪಾಗುತ್ತದೆ.
2. ಈರುಳ್ಳಿ ಕೂಡ ಕೂದಲಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ಮಿಕ್ಸರ್ ಗ್ರೈಂಡರ್ನಲ್ಲಿ ಸ್ವಲ್ಪ ಈರುಳ್ಳಿ ತುಂಡುಗಳನ್ನು ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಇದರ ರಸವನ್ನು ಹತ್ತಿ ಬಟ್ಟೆಯಿಂದ ಫಿಲ್ಟರ್ ಮಾಡಿ ಒಂದು ಬಟ್ಟಲಿನಲ್ಲಿ ಸಂಗ್ರಹಿಸಿ. ಈಗ ಅದನ್ನು ನೆತ್ತಿಯ ಮೇಲೆ ಸರಿಯಾಗಿ ಮಸಾಜ್ ಮಾಡಿರಿ.
3. ಆರೋಗ್ಯಕರ ಆಹಾರವಿಲ್ಲದೆ ನೀವು ಆರೋಗ್ಯಕರ ಕೂದಲನ್ನು ಊಹಿಸಲು ಸಾಧ್ಯವಿಲ್ಲ. ಕೂದಲಿಗೆ ಸರಿಯಾದ ಪೋಷಣೆ ಪಡೆಯಲು ಬಯಸಿದರೆ, ಇದಕ್ಕಾಗಿ ನೀವು ನಿಯಮಿತವಾಗಿ ಪೌಷ್ಟಿಕ ಆಹಾರ ತೆಗೆದುಕೊಳ್ಳಬೇಕು. ಇದು ಕೂದಲಿಗೆ ಆಂತರಿಕವಾಗಿ ಪ್ರಯೋಜನವನ್ನು ನೀಡುತ್ತದೆ.
4. ಕೂದಲಿನ ಬೇರುಗಳು ಗಟ್ಟಿಯಾಗಲು ಎಣ್ಣೆ ಮಸಾಜ್ ತುಂಬಾ ಮುಖ್ಯ. ಹೀಗಾಗಿ ಬಾದಾಮಿ ಎಣ್ಣೆ ಮತ್ತು ತೆಂಗಿನ ಎಣ್ಣೆಯು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ.
5. ಗೋರಂಟಿ ಮತ್ತು ಮೆಂತ್ಯವನ್ನು ಚೆನ್ನಾಗಿ ರುಬ್ಬುವ ಮೂಲಕ ಪೇಸ್ಟ್ ತಯಾರಿಸಿ. ನಂತರ ಅದರಲ್ಲಿ ತೆಂಗಿನ ಎಣ್ಣೆ ಮತ್ತು ಬೆಣ್ಣೆ ಹಾಲು ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಕೂದಲಿನ ಬೇರುಗಳಿಗೆ ಮಸಾಜ್ ಮಾಡಿ. ಇದರ ಪ್ರಯೋಜನಗಳು ಕೆಲವೇ ದಿನಗಳಲ್ಲಿ ಗೋಚರಿಸುತ್ತವೆ.
ಇದನ್ನೂ ಓದಿ: ಅತ್ಯಂತ ಕಡಿಮೆ ಸಮಯದಲ್ಲಿ ಉದ್ದನೆಯ ಕೂದಲು ಪಡೆಯಲು ಐದು ಸರಳ ಟಿಪ್ಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.