ವಟ ಸಾವಿತ್ರಿ ವ್ರತದ ಸಂಪೂರ್ಣ ಪೂಜಾ ವಿಧಿ ವಿಧಾನದ ಬಗ್ಗೆ ತಿಳಿಸಿಕೊಡುತ್ತೇವೆ.
ಈ ವ್ರತದ ಹಿನ್ನಲೆ ಏನು ಎಂದರೆ ಮೃತನಾದ ಪತಿಯನ್ನು ಯಮಧರ್ಮರಾಯನಿಂದ ಮರಳಿ ಪಡೆದ ಮಹಾ ಸತಿಯಾದ ಸಾವಿತ್ರಿಯ ಉಪವಾಸ ಮಾಡುವಂತಹ ವ್ರತ. ಅಂದರೆ ಪ್ರತಿಯೊಬ್ಬ ಮಹಿಳೆಯಾದ ಗೃಹಿಣಿ ತನ್ನ ಪತಿಯ ದೀರ್ಘ ಆಯಸ್ಸು ಜೊತೆಯಲ್ಲಿ ಅಕಾಲಿಕ ಮರಣದಿಂದ ತಪ್ಪಿಸಲು ಈ ವ್ರತವನ್ನು ಉಪಾವಾಸ ಇದ್ದು ಆಚರಣೆ ಮಾಡುತ್ತಾರೆ.ಪ್ರತಿ ವರ್ಷ ಜೇಷ್ಠ ಮಾಸದಲ್ಲಿ ಬರುವ ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನ ಈ ಹಬ್ಬವನ್ನು ನಾವು ಆಚರಣೆ ಮಾಡುತ್ತೇವೆ.
ಈ ವರ್ಷ ಮೇ 10 ಶುಕ್ರವಾರದ ದಿನ ವಟ ಸಾವಿತ್ರಿ ದಿನ ಬಂದಿದೆ.ಇದೆ ದಿನ ನೀವು ವ್ರತವನ್ನು ಮಾಡಬೇಕು. ಈ ವ್ರತ ಮಾಡುವವರು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮನೆ ಸ್ವಚ್ಛ ಮಾಡಿ ಮತ್ತು ಸ್ನಾನ ಮಾಡುವಾಗ ಹಸಿ ಹಾಲು ಅರಿಶಿಣ ಹಾಕಿ ಸ್ನಾನವನ್ನು ಮಾಡಿ.ಮುತೈದೆ ರೀತಿ ರೆಡಿ ಆಗಬೇಕು.ನಂತರ ಮೊದಲು ಸೂರ್ಯ ದೇವನಿಗೆ ಅರ್ಗ್ಯವನ್ನು ಬಿಡಬೇಕು.ಇನ್ನು ಇಡೀ ದಿನ ಉಪವಾಸ ಇದ್ದು ಗಂಡನಿಗೋಸ್ಕರ ಪೂಜೆಯನ್ನು ಮಾಡುತ್ತಿದ್ದೇನೆ ಎಂದು ಸಂಕಲ್ಪ ಮಾಡಿ ಸೂರ್ಯನಿಗೆ ಅರ್ಗ್ಯವನ್ನು ಬಿಟ್ಟು ಸೂರ್ಯನಿಗೆ ವಿನಂತಿ ಮಾಡಿ ನಮಸ್ಕಾರ ಮಾಡಿ.ನಂತರ ಮನೆ ಒಳಗೆ ಬಂದು ಗಣೇಶನಿಗೆ ನಮಸ್ಕಾರ ಮಾಡಿಕೊಳ್ಳಬೇಕು.ಮನೆಯಲ್ಲಿ ಪೂಜೆ ಮುಗಿಸಿ ದೇವಸ್ಥಾನಕ್ಕೆ ಹೋಗಬೇಕು.
ಆಲದ ಮರದ ಬಳಿ ಹೋಗಿ ನೀರನ್ನು ಹಾಕಿ ಸ್ವಚ್ಛ ಮಾಡಿಕೊಳ್ಳಬೇಕು.ನಂತರ ರಂಗೋಲಿ ಹಾಕಿ. ನಂತರ ಎರಡು ಎಲೆ ಇಟ್ಟು ಅರಿಶಿಣ ಕುಂಕುಮವನ್ನು ಹಚ್ಚಬೇಕು.ನಂತರ ಕಳಸಕ್ಕೆ ನೀರನ್ನು ತುಂಬಿ ಮರದ ಕೆಳಗೆ ಇಡಬೇಕು.ಕಳಸಕ್ಕೆ ಅರಿಶಿಣ ಕುಂಕುಮ ಅಕ್ಷತೆ ಹಾಗು ಹೂವನ್ನು ಹಾಕಬೇಕು.ನಂತರ ಕಳಸದ ಮುಂದೆ ಎರಡು ಎಲೆ ಇಟ್ಟು ಅರಿಶಿಣ ಉಂಡೆಯನ್ನು ಇಡಬೇಕು.ನಂತರ ಅರಿಶಿಣ ಕುಂಕುಮ ಶ್ರೀಗಂಧ ಹಚ್ಚಿ ಗೆಜ್ಜೆ ವಸ್ತ್ರವನ್ನು, ಅಂಗನೂಲುವನ್ನು ಹಾಕಬೇಕು.
ಕೊನೆಯಲ್ಲಿ ಅಲ್ಲಿ ಇರುವ ಮುತೈದೆಯರಿಗೆ ತಾಂಬೂಲವನ್ನು ಕೊಟ್ಟು ಆಶೀರ್ವಾದವನ್ನು ತೆಗೆದುಕೊಳ್ಳಬೇಕು.ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ರೀತಿಯ ಸಂಕಲ್ಪ ಈಡೇರುತ್ತದೆ. ಈ ದಿನ ನೀವು ದಾನ ಧರ್ಮವನ್ನು ಸಹ ಮಾಡಬಹುದು.