3 ಚಿಕ್ಕ ಕೆಲಸ ಮಾಡಿದರೆ ಹಣ ಆಕರ್ಷಣೆ !

ಚಂದ್ರನನ್ನು ಭಾವನೆಗಳ ಸೂಚಕ ಮತ್ತು ಸ್ತ್ರೀಲಿಂಗ ಸೂಚಕವು ಹೌದು. ಚಂದ್ರನು ಎಲ್ಲಾ ಚಿಹ್ನೆಗಳಿಗಿಂತ ಹೆಚ್ಚು ಭಾವನಾತ್ಮಕವಾಗಿ ಸೂಕ್ಷ್ಮವಾಗಿರುವ ಕಟಕ ರಾಶಿಯನ್ನು ಹಾಳುತ್ತಾನೆ. ಇವರಿಗೆ ಸಂಬಂಧಿಸಿದ ಸಾಕಾರತ್ಮಕ ಗುಣಗಳು ಎಂದರೆ ತಾಳ್ಮೆ ಸಹನುಭೂತಿ ಉತ್ತಮ ಸ್ಮರಣೆ ಕಾಳಜಿ ಮತ್ತು ಗ್ರಹಿಕೆ. ನಕಾರಾತ್ಮಕ ಗುಣಗಳು ಎಂದರೆ ಭಾವನಾತ್ಮಕ ಅಸ್ತಿರತೆ ಮನಸ್ಥಿತಿ ಬದಲಾವಣೆಗಳು ಸ್ಪರ್ಶ ಮತ್ತು ಚಿಂತೆ. ಸಂಬಂಧಗಳ ಮೇಲೆ ಪ್ರಭಾವ ಬಿರುವವರು ಎಂದು ಹೇಳಬಹುದು.

ಹುಣ್ಣಿಮೆ ದಿನ ಸೂರ್ಯ ಮತ್ತು ಚಂದ್ರ ಪರಸ್ಪರ ವಿರುದ್ಧವಾಗಿ ಇರುವುದರಿಂದ ಚಂದ್ರನು ಪ್ರಬಲ ಸ್ಥಾನವನ್ನು ಪಡೆದುಕೊಳ್ಳುತ್ತಾನೆ. ಹಾಗಾಗಿ ಪ್ರಕೃತಿ ಮೇಲೆ ಪರಿಣಾಮ ಅಘಾತವಾಗಿ ಇರುತ್ತದೆ. ಚಂದ್ರನನ್ನು ಅಳುವ ದೇವತೆ ಪಾರ್ವತಿ ದೇವಿ. ಹುಣ್ಣಿಮೆ ದಿನ ಪಾರ್ವತಿ ದೇವಿ ಪ್ರಾರ್ಥನೆ ಮಾಡುವುದು ಪ್ರೀತಿಯ ಮತ್ತು ಶಾಶ್ವತವಾದ ಸಂಬಂಧಗಳನ್ನು ಉಳಿಸಿಕೊಳ್ಳುವುದಕ್ಕೆ ಅತ್ಯುತ್ತಮ ಫಲಿತಾಂಶ ನೀಡುತ್ತದೆ. ಇದು ಮುರಿದ ಸಂಬಂಧಗಳನ್ನು ಸರಿ ಪಡಿಸುವುದಕ್ಕೆ ಸಾಮರಸ್ಯ ಉತ್ತೇಜಿಸುವುದಕ್ಕೆ ಮತ್ತು ಜೀವನದಲ್ಲಿ ಶಾಂತಿ ಮತ್ತು ಯೋಗ ಕ್ಷಮವನ್ನು ಪುನಃಸ್ಥಾಪಿಸುವುದಕ್ಕೆ ಸಹಾಯ ಮಾಡುತ್ತದೆ. ವಿವಾಹಿತರು ಅಥವಾ ಸಂಗತಿಯೋದಿಗೆ ಇರುವವರೂ ಪಾರ್ವತಿಯನ್ನು ಪ್ರಾರ್ಥನೆ ಮಾಡುವ ಮೂಲಕ ತಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಬಹುದು.

ಪಾರ್ವತಿ ದೇವಿ ಮಂತ್ರವನ್ನು 21,54 ಹಾಗು 108 ಬಾರಿ ಜಪಿಸಿದರೆ ಅದು ನಮ್ಮಲ್ಲಿ ಸುತ್ತ ಮುತ್ತ ಧನತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ. ಸಂಬಂಧಗಳಲ್ಲಿ ಸಾಮರಸ್ಯವನ್ನು ಉತ್ತೆಜಿಸುವುದಕ್ಕೆ ಸಹಾಯವನ್ನು ಮಾಡುತ್ತದೆ. ಈ ಒಂದು ಪರಿಹಾರ ಮಾಡಿಕೊಳ್ಳುವುದರಿಂದ ಜೀವನದಲ್ಲಿ ಏಳಿಗೆ ಆಗುತ್ತದೆ.

ಮೊದಲು ಈ ಪರಿಹಾರವನ್ನು ಶುಕ್ರವಾರ ಅಥವಾ ಹುಣ್ಣಿಮೆ ದಿನ ಮಾಡಿಕೊಳ್ಳಬೇಕು.ಇನ್ನು 11 ಕವಡೆ, ಕೆಂಪು ವಸ್ತ್ರ, ಅರಿಶಿನ ದಾರ ಮತ್ತು ಒಂದು ಬೋಟ್ಟಲಿನಲ್ಲಿ ಅರಿಶಿನ ಪುಡಿ ಮತ್ತು ನೀರನ್ನು ತೆಗೆದುಕೊಳ್ಳಿ. ಕವಡೆಯನ್ನು ಶುದ್ಧ ನೀರಿನಲ್ಲಿ ತೊಳೆಯಬೇಕು. ನಂತರ ಬಟ್ಟೆ ತೆಗೆದುಕೊಂಡು ಬಟ್ಟೆಯನ್ನು ಸರಿಯಾಗಿ ವರೆಸಬೇಕು. ಕವಡೆಯನ್ನು ಕೆಂಪು ಬಟ್ಟೆಯಲ್ಲಿ ಹಾಕಬೇಕು. ನಂತರ ಅರಿಶಿನ ಕುಂಕುಮ ಅಕ್ಷತೆಯನ್ನು ಹಾಕಬೇಕು. ಹೂವನ್ನು ಹಾಕಿ ನಿಮ್ಮ ಮನಸ್ಸಿನಲ್ಲಿ ನಿಮ್ಮ ಇಷ್ಟರ್ಥಗಳನ್ನು ಹೇಳಿಕೊಂಡು ಅದಷ್ಟು ಬೇಗ ಫಲಿತಾಂಶ ಸಿಗಲಿ ಎಂದು ಬೇಡಿಕೊಳ್ಳಿ. ನಂತರ ಅರಿಶಿನ ದಾರವನ್ನು ತೆಗೆದುಕೊಂಡು ಬಟ್ಟೆಯ ನಾಲ್ಕು ಮೂಲೆ ಹಿಡಿದು ಮೂರು ಗಂಟು ಕಟ್ಟಬೇಕು. ಈ ರೀತಿ ಪ್ರತಿ ತಿಂಗಳು ಪರಿಹಾರವನ್ನು ಮಾಡಿಕೊಳ್ಳಬೇಕು. ಇದನ್ನು ದೇವರ ಮನೆಯಲ್ಲಿ ಇಡಬೇಕು.

ಆರ್ಥಿಕ ಸಮಸ್ಸೆ ಇದ್ದರೆ ಹಣಕಾಸು ಇಡುವ ಜಾಗದಲ್ಲಿ ಇಡಬೇಕು ಅಥವಾ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಆಗಿದ್ದರೆ ಅಲ್ಲಿ ಕೂಡ ಇಡಬಹುದು.ಈ ಒಂದು ಪರಿಹಾರವನ್ನು ಯಾರು ಬೇಕಾದರೂ ಮಾಡಬಹುದು. ಇದರಿಂದ ಲಕ್ಷ್ಮಿ ದೇವಿ ಅನುಗ್ರಹ ನಿಮಗೆ ಸಿಗುತ್ತದೆ.

ಹುಣ್ಣಿಮೆ ದಿನ ಈ ತಪ್ಪುಗಳನ್ನು ಮಾಡಬೇಡಿ
ಇನ್ನು ಹುಣ್ಣಿಮೆ ದಿನ ಮನೆಯ ದೂಳು ತೆಗೆಯುವ ಕೆಲಸ ಮತ್ತು ದೇವರ ಮನೆ ಸ್ವಚ್ಛ ಮಾಡುವ ಕೆಲಸವನ್ನು ಸಹ ಮಾಡಬಾರದು.

ಇನ್ನು ಹುಣ್ಣಿಮೆ ದಿನ ಸಾಲವನ್ನು ತೆಗೆದುಕೊಳ್ಳಬಾರದು ಹಾಗು ಹಣವನ್ನು ಕೊಡಬಾರದು. ಹಾಗಾಗಿ ಹುಣ್ಣಿಮೆ ದಿನ ಹಣದ ವ್ಯವಹಾರ ಮಾಡಬೇಡಿ.

ಹುಣ್ಣಿಮೆ ದಿನ ಲಕ್ಷ್ಮಿ ಸ್ವರೂಪ ಆಗಿರುವ ಯಾವುದೇ ವಸ್ತುವನ್ನು ಬೇರೆಯವರಿಗೆ ಕೊಡಬಾರದು.

ಹುಣ್ಣಿಮೆ ದಿನ ಯಾರು ಇಲ್ಲದೆ ಇರುವ ಜಾಗಕ್ಕೆ ಹೋಗಬಾರದು. ಒಂದು ವೇಳೆ ಹೋದರೆ ನಕಾರಾತ್ಮಕ ಶಕ್ತಿ ಪ್ರಭಾವ ಉಂಟಾಗುತ್ತದೆ.

ಹುಣ್ಣಿಮೆ ದಿನ ಹೆಣ್ಣು ಮಕ್ಕಳು ಮನೆಯಲ್ಲಿ ಕೂದಲು ಬಿಟ್ಟುಕೊಂಡು ಓಡಾಡಬಾರದು ಮತ್ತು ಮಧ್ಯಾಹ್ನ ಮಲಗಬಾರದು.ಹಾಗಾಗಿ ಹುಣ್ಣಿಮೆ ದಿನ ಈ ತಪ್ಪುಗಳನ್ನು ಮಾಡಬಾರದು.

Leave a Comment