ಹೊಸ ವರ್ಷ ಅಥವಾ ವಿಶೇಷವಾಗಿ ಯಾವುದೇ ಹಬ್ಬ ಬಂದಾಗ ಆದಷ್ಟು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ವಿಶೇಷವಾಗಿ ಹಿಂದೂ ಸಂಪ್ರದಾಯದ ಪ್ರಕಾರ ಹೊಸವರ್ಷ ಎಂದು ಹೇಳಲಾಗುತ್ತದೆ. ಹಾಗಾಗಿ ಹೊಸ ವರ್ಷ ಬಂದಾಗ ಮನೆಯಲ್ಲಿರುವ ಹಳೆಯ ವಸ್ತುಗಳನ್ನು ತೆಗೆದುಹಾಕಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಮನೆಗೆ ಲಕ್ಷ್ಮಿ ಮನೆಗೆ ಪ್ರವೇಶ ಮಾಡುತ್ತಳೆ.ಸ್ವಚ್ಛವಾಗಿ ಇರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ.ಹಾಗಾಗಿ ಹೊಸ ವರ್ಷ ಬರುವ ಮುನ್ನ ಈ ಕೆಲವೊಂದು ವಸ್ತುಗಳನ್ನು ಮನೆಯಿಂದ ಆಚೆ ಹಾಕಬೇಕು.
1, ಹಳೆಯ ಪೂಜೆ ಸಾಮಗ್ರಿಗಳನ್ನು ಮನೆಯಿಂದ ಹೊರಗೆ ಹಾಕಬೇಕು. ಅಂದರೆ ಹಳೆಯ ಪೂಜಾ ವಸ್ತುಗಳನ್ನು ಅರಳಿ ಮರದ ಕೆಳಗೆ ಇಡಬಹುದು.ನಂತರ ಹೊಸ ವಸ್ತುಗಳನ್ನು ತೆಗೆದುಕೊಂಡು ಬಂದರೆ ತುಂಬಾ ಒಳ್ಳೆಯದು.ಇದರಿಂದ ಮನೆಯಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ.
2,ಇನ್ನು ಹಳೆಯ ಬಟ್ಟೆಗಳನ್ನು ಮತ್ತು ಧರಿಸದೆ ಇರುವ ಬಟ್ಟೆಗಳನ್ನು ಆದಷ್ಟು ಮನೆಯಿಂದ ಹೊರಗೆ ಹಾಕಿ. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.ಆದಷ್ಟು ಈ ಸಮಯದಲ್ಲಿ ಹೊಸ ಬಟ್ಟೆಯನ್ನು ಹಾಕಬೇಕು.ಹೊಸ ವರ್ಷದಲ್ಲಿ ಮನೆಗೆ ಏನಾದರು ತಂದರೆ ಸಾಕಷ್ಟು ಒಳ್ಳೆಯದು ಆಗುತ್ತದೆ.
3, ಇನ್ನು ಹಳೆಯ ಪೊರಕೆಯನ್ನು ಮನೆಯಿಂದ ಹೊರಗೆ ಹಾಕಬೇಕು. ನಂತರ ಹೊಸ ಪೊರಕೆಯನ್ನು ಬಳಸಬೇಕು.
4, ಹಳೆಯ ಪಾತ್ರೆಗಳನ್ನು ಮನೆಯಿಂದ ಆಚೆ ಹಾಕಬೇಕು. ನಂತರ ಹೊಸ ಪಾತ್ರೆಗಳನ್ನು ಬಳಸಿ.
5,ಮನೆಯಲ್ಲಿ ಜೇಡರ ಬಲೆ ಕಟ್ಟಿದ್ದಾರೆ ಅದನ್ನು ಕೂಡ ಹೊಸ ವರ್ಷ ಮೊದಲು ಸ್ವಚ್ಛ ಮಾಡಬೇಕು.ಮನೆಯಲ್ಲಿ ಯಾವುದೇ ರೀತಿಯ ಜೇಡರ ಬಲೆ ದೂಳು ಸಹ ಇರಬಾರದು.ಸಾಧ್ಯವಾದರೆ ಮನೆ ಪೇಯಿಂಟ್ ಮಾಡಿಸುವುದು ತುಂಬಾನೇ ಒಳ್ಳೆಯದು.
6, ಇನ್ನು ಹೊಸ ವರ್ಷ ಸಮಯದಲ್ಲಿ ಚಿನ್ನಭರಣ ತೆಗೆದುಕೊಂಡು ಬರುವುದು ತುಂಬಾ ಒಳ್ಳೆಯದು.
7, ಇನ್ನು ಲಕ್ಷ್ಮಿ ವಿಗ್ರಹ ತೆಗೆದುಕೊಂಡು ಬರುವುದು ತುಂಬಾನೇ ಒಳ್ಳೆಯದು.ಹಾಗಾಗಿ ಚಿಕ್ಕದಾದ ವಿಗ್ರಹವನ್ನು ತೆಗೆದುಕೊಂಡು ಬಂದರೆ ಸಾಕಷ್ಟು ಒಳ್ಳೆಯ ಉಪಯೋಗ ಎನ್ನುವುದು ಆಗುತ್ತದೆ.
8, ಇನ್ನು ಗ್ಯಾಜೆಟ್ಸ್ ತೆಗೆದುಕೊಂಡು ಬಂದರೆ ಒಳ್ಳೆಯದು. ಅಂದರೆ ಮೊಬೈಲ್ ಲ್ಯಾಪ್ ಟಾಪ್ ಗಳನ್ನು ಖರೀದಿ ಮಾಡಬಹುದು. ವರ್ಷದ ಮೊದಲ ದಿನ ಈ ರೀತಿ ಖರೀದಿ ಮಾಡಿದರೆ ವರ್ಷ ಪೂರ್ತಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರುತ್ತದೆ.
9,ಹಳೆಯ ಬೂಟುಗಳು ಮತ್ತು ಚಪ್ಪಲಿಗಳು–ನವರಾತ್ರಿಯ ಸಮಯದಲ್ಲಿ ಹಳೆಯ ಪಾದರಕ್ಷೆಗಳು ಅಥವಾ ಚಪ್ಪಲಿಗಳು, ಒಡೆದ ಗಾಜಿನ ಸಾಮಾನುಗಳನ್ನು ಮನೆಯಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಅವನ್ನು ಎಸೆಯಿರಿ. ಬಳಕೆಗೆ ಬಾರದ ಅವುಗಳ ಮೇಲೆ ಅನಗತ್ಯ ಮೋಹ ಬೇಡ.