100% ಸಕ್ಕರೆ ಕಾಯಿಲೆಗೆ ಈ ವ್ಯಾಯಾಮ ಇವತ್ತೇ ಮಾಡಿ!

ಮಧುಮೇಹಿಗಳು ಬರೀ ತಮ್ಮ ಆಹಾರದ ಬಗ್ಗೆ ಮಾತ್ರವಲ್ಲ, ದೈಹಿಕ ಚಟುವಟಿಕೆಗಳ ಬಗ್ಗೆಯೂ ಗಮನಹರಿಸಬೇಕು ಆಗ ಮಾತ್ರ ಶುಗರ್ ಕಂಟ್ರೋಲ್‌ನಲ್ಲಿರಲು ಸಾಧ್ಯ.ಮಧುಮೇಹವನ್ನು ಸಾಂಕ್ರಾಮಿಕ ಎಂದು ಕರೆಯುವುದು ತಪ್ಪಾಗುವುದಿಲ್ಲ, ಏಕೆಂದರೆ ಅದರ ಲಕ್ಷಾಂತರ ರೋಗಿಗಳು ಪ್ರತಿ ದೇಶದಲ್ಲಿಯೂ ಇದ್ದಾರೆ. ಇದು ಗುಣಪಡಿಸಲಾಗದ ಕಾಯಿಲೆಯಾಗಿದ್ದು, ಇದರಲ್ಲಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಮೀರುತ್ತದೆ.

ಮಧುಮೇಹ ರೋಗಿಗಳು ಅದನ್ನು ನಿಯಂತ್ರಿಸಲು ಔಷಧಿಗಳನ್ನು ಮತ್ತು ನಂತರ ಇನ್ಸುಲಿನ್ ಚುಚ್ಚುಮದ್ದನ್ನು ಆಶ್ರಯಿಸುತ್ತಾರೆ. ಅದರ ಬದಲು ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್‌ಗೆ ತರಬಹುದು.

​ಮಧುಮೇಹಿಗಳು ಮಾಡಲೇ ಬೇಕಾದ ವ್ಯಾಯಮಗಳು​:–ದೈಹಿಕ ಚಟುವಟಿಕೆ ಮತ್ತು ವ್ಯಾಯಾಮವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ವೇಗವಾಗಿ ನಡೆಯುವುದು..ಗುಡಿಸುವಂತಹ ಮನೆಕೆಲಸಗಳು..ಉದ್ಯಾನದಲ್ಲಿ ವಾಕಿಂಗ್ ಮಾಡುವುದು..ಡ್ಯಾನ್ಸ್ ಮಾಡುವುದು..ಈಜುವುದು…ಸೈಕ್ಲಿಂಗ್ಆಟವಾಡುವುದು

ಮಧುಮೇಹ ನಿಯಂತ್ರಣಕ್ಕೆ ಟಿಪ್ಸ್:ವಿಶ್ವ ಮಧುಮೇಹ ದಿನ 2022: ಮಧುಮೇಹ ನಿಯಂತ್ರಿಸಬಹುದು ಭಯ ಬೇಡ!

​ವ್ಯಾಯಾಮದ ಇತರ ಪ್ರಯೋಜನಗಳು​:–ತೂಕ ಸಮತೋಲನದಲ್ಲಿರುತ್ತದೆ….ಬೊಜ್ಜು ಕಡಿಮೆಯಾಗುತ್ತದೆ…ಚೆನ್ನಾಗಿ ನಿದ್ದೆ ಬರುತ್ತದೆ…ನೆನಪು ಚುರುಕಾಗಿರುತ್ತದೆ…ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ…ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ…ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ

​ಮಧುಮೇಹವನ್ನು ಹೇಗೆ ನಿಯಂತ್ರಿಸಲಾಗುತ್ತದೆ?​

ಈ ವ್ಯಾಯಾಮಗಳನ್ನು ಮಾಡುವುದರಿಂದ ದೇಹದ ಎಲ್ಲಾ ಪ್ರಮುಖ ಸ್ನಾಯುಗಳು ಸಕ್ರಿಯವಾಗುತ್ತದೆ. ನೀವು ವಾರದಲ್ಲಿ 150 ನಿಮಿಷಗಳ ಕಾಲ ವ್ಯಾಯಾಮ ಮಾಡಿದರೆ, ದೇಹವು ಇನ್ಸುಲಿನ್ ಹಾರ್ಮೋನ್ ಅನ್ನು ಉತ್ತಮ ರೀತಿಯಲ್ಲಿ ಬಳಸಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ, ಔಷಧಿಗಳು ಮತ್ತು ಇನ್ಸುಲಿನ್ ಚುಚ್ಚುಮದ್ದುಗಳು ಉತ್ತಮ ಪರಿಣಾಮವನ್ನು ತೋರಿಸುತ್ತವೆ.

​ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರ ಸೇವಿಸಿ​

ಮಧುಮೇಹಿಗಳು ಆಹಾರದ ಬಗ್ಗೆ ಸಂಪೂರ್ಣ ಗಮನ ನೀಡಬೇಕು. ಏಕೆಂದರೆ ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯು ಬಹಳ ವೇಗವಾಗಿ ಹೆಚ್ಚಾಗುತ್ತದೆ. ನಿಮ್ಮ ಆಹಾರದಲ್ಲಿ ನೀವು ಹಸಿರು ಎಲೆಗಳ ತರಕಾರಿಗಳು, ಧಾನ್ಯಗಳು, ಕುಂಬಳಕಾಯಿ ಬೀಜಗಳನ್ನು ಸೇವಿಸಬೇಕು.

Leave a Comment