ನಿಮ್ಮ ಬಹುದಿನದ ಆಸೆಗಳು ಈಡೇರಬೇಕಾದರೆ ಶ್ರಾವಣ ಮಾಸದಲ್ಲಿ ಶಿವನ ದೇವಾಲಯದಲ್ಲಿ ಈ ಚಿಕ್ಕ ಕೆಲಸ ಮಾಡಿ!

ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಜೋರಾಗಿ ಇರುತ್ತದೆ. ಶಿವನ ಭಕ್ತರು ಶಿವನ ಪೂಜೆಗೆ ತಯಾರಿ ನಡೆಸುತ್ತಾರೆ.ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ವಿಶೇಷವಾದ ಮಾನ್ಯತೆ ಇದೆ.ಉಳಿದ ದಿನಗಳಿಗಿಂತ ಶ್ರಾವಣ ಮಾಸದಲ್ಲಿ ಶಿವನ ಆರಾಧನೇ ಮಾಡಿದರೆ ಈಶ್ವರ ಬೇಗ ಒಲಿಯುತ್ತಾನೆ ಎಂಬ ನಂಬಿಕೆ ಇದೆ.

ಶಿವನ ಕೃಪೆಗೆ ಗುರಿಯಾಗಲು ಭಕ್ತರಿ ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಶಿವನಿಗೆ ವಿಶೇಷ ಪೂಜೆ ಜೊತೆ ಅಭಿಷೇಕ ಮಾಡಿದರೆ ಶಿವ ಒಲಿದೆ ಒಲಿಯುತ್ತಾನೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಗಲಾಟೆ ನಡೆಯುತ್ತಿದ್ದಾರೆ ಶ್ರಾವಣ ಮಾಸದಲ್ಲಿ ಶಿವನಿಗೆ ಹಾಲಿನ ಅಭಿಷೇಕ ಮಾಡಿ. ಇದರಿಂದ ಗಲಾಟೆ ಕಡಿಮೆ ಆಗುತ್ತದೆ.ಜೊತೆಗೆ ಮಂದ ಬುದ್ಧಿ ಕಡಿಮೆ ಆಗುತ್ತದೆ.

ಶುದ್ಧ ನೀರಿನಿಂದ ಶಿವ ಲಿಂಗಕ್ಕೆ ಅಭಿಷೇಕ ಮಾಡಿದರೆ ಅನೇಕ ಆಸೆಗಳು ಈಡೇರುತ್ತದೆ. ಪ್ರತಿದಿನ ಶಿವ ಲಿಂಗಕ್ಕೆ ನಿರೀನ ಅಭಿಷೇಕ ಮಾಡಿದರೆ ಮನಸ್ಸು ಶಾಂತವಾಗುತ್ತದೆ.ಇದರಿಂದ ಶಿವ ಖುಷಿ ಆಗುತ್ತಾನೆ.

ಮನೆಯಲ್ಲಿ ಅನಾರೋಗ್ಯ ಕಾಡುತ್ತಿದ್ದರೆ ಶುದ್ಧ ತುಪ್ಪವನ್ನು ಭಗವಂತನಿಗೆ ಅರ್ಪಿಸಬೇಕು. ಶುದ್ಧ ಹಸುವಿನ ತುಪ್ಪದ ಅಭಿಷೇಕ ಮಾಡಬೇಕು. ತುಪ್ಪದ ಅಭಿಷೇಕ ಮಾಡಿದರೆ ಶಿವ ಪ್ರಸನ್ನಗುತ್ತಾನೆ. ರೋಗ ಗುಣ ಆಗುತ್ತದೆ ಎಂದು ನಂಬಲಾಗಿದೆ.

ಶಿವಲಿಂಗಕ್ಕೆ ಬಿಲ್ವ ಪತ್ರೆಯಿಂದ ಅಭಿಷೇಕ ಮಾಡಿದರೆ ನಿಮ್ಮ ಇಷ್ಟರ್ಥಗಳು ಈಡೇರುತ್ತದೆ.

Leave a Comment