ಮನೆಯಲ್ಲಿ ರಾತ್ರಿ ಉಳಿದ ಅನ್ನದಿಂದ ಹೀಗೆ ಮಾಡಿ ಅದೃಷ್ಟ ಒಂದೇ ವಾರದಲ್ಲಿ ನಿಮ್ಮದಾಗುತ್ತದೆ!

ಪ್ರತಿಯೊಬ್ಬರ ಮನೆಯಲ್ಲೂ ಸಹ ಪ್ರತಿನಿತ್ಯವು ರಾತ್ರಿ ವೇಳೆ ಸ್ವಲ್ಪವಾದರೂ ಅನ್ನವು ಉಳಿದುಕೊಂಡಿರುತ್ತದೆ, ಉಳಿದುಕೊಂಡಿರುವ ಅನ್ನವನ್ನು ಹೊರಗೆ ಎಸೆಯುವ ಬದಲು ನಾವು ಹೇಳುವ ಈ ಒಂದು ಕೆಲಸವನ್ನು ಮಾಡಿದರೆ ನಿಮ್ಮ ಮನೆಗೆ ಮಹಾಲಕ್ಷ್ಮಿ ದೇವಿಯ ಅನುಗ್ರಹವು ಪ್ರಾಪ್ತಿಯಾಗುತ್ತದೆ ಇದರಿಂದ ನಿಮ್ಮ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತದೆ, ಅನ್ನಪೂರ್ಣೇಶ್ವರಿ ದೇವಿಯು ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ, ಮಹಾಲಕ್ಷ್ಮಿ ದೇವಿಯ ಅನುಗ್ರಹವು ಪ್ರಾಪ್ತಿಯಾಯಿತು ಎಂದರೆ ಯಾವುದೇ ಕಾರಣಕ್ಕೂ ಹಣದ ಸಮಸ್ಯೆಯೂ ಉಂಟಾಗುವುದಿಲ್ಲ. ಸಾಮಾನ್ಯವಾಗಿ ನಾವು ಹಲವಾರು ಲೇಖನದಲ್ಲಿ ತಿಳಿಸಿರುವಂತೆ ರಾತ್ರಿ ಎಲ್ಲರ ಊಟವಾದ ನಂತರ ಮಲಗುವ ಮುಂಚೆ ಒಂದು ತುತ್ತು ಅನ್ನ ವಾದರೂ ಅಡುಗೆ ಮನೆಯಲ್ಲಿ ಇಡಬೇಕು ಎಂದು, ಹಾಗೆಯೇ ಪ್ರತಿಯೊಬ್ಬರೂ ಸಹ ಒಂದು ತುತ್ತು ಅನ್ನ ವಾದರೂ ನಿಮ್ಮ ಅಡುಗೆಮನೆಯಲ್ಲಿ

ನೀವು ರಾತ್ರಿಯ ಸಮಯದಲ್ಲಿ ಇಡಬೇಕು ಯಾಕೆ ಈ ಕೆಲಸವನ್ನು ಮಾಡಬೇಕು ಎಂದರೆ ನಮ್ಮ ಹಿಂದಿನ ಕಾಲದಿಂದಲೂ ಹಿರಿಯರು ಕೆಲವೊಂದು ನಂಬಿಕೆಯನ್ನು ಇಟ್ಟುಕೊಂಡು ಬಂದಿದ್ದಾರೆ ರಾತ್ರಿ ಎಲ್ಲರೂ ಮಲಗಿದ ನಂತರ ಮನೆಗೆ ಪೂರ್ವಿಕರು ಹಿರಿಯರು ಮನೆಗೆ ಬಂದು ಅಡುಗೆ ಕೋಣೆಯನ್ನು ನೋಡುತ್ತಾರೆ ಎಂಬ ನಂಬಿಕೆಯಿದೆ, ಅವರು ಬಂದು ನೋಡಿದಾಗ ಮನೆಯಲ್ಲಿ ನೀವು ಮಾಡಿದಂತಹ ಅಡಿಗೆಯು ಸಂಪೂರ್ಣವಾಗಿ ಖಾಲಿಯಾಗಿರಬಾರದು ಆದ್ದರಿಂದ ಒಂದು ತುತ್ತು ಅನ್ನ ವನ್ನಾದರೂ ಅಡುಗೆ ಮನೆಯಲ್ಲಿ ಇರಬೇಕು ಎಂದು ಹೇಳಲಾಗುತ್ತದೆ.

ಇದರ ಜೊತೆಗೆ ರಾತ್ರಿಯ ವೇಳೆ ಮಹಾಲಕ್ಷ್ಮಿದೇವಿಯು ಸಂಚರಿಸುವಾಗ ಏನಾದರೂ ಮನೆಗೆ ಬಂದು ಅಡುಗೆ ಮನೆಯನ್ನು ನೋಡಿದಾಗ ಅಲ್ಲಿ ಏನಾದರೂ ಒಂದು ತುತ್ತು ಅನ್ನ ವಾದರು ಸಹ ಇರಬೇಕು ಎಂದು ಹೇಳಲಾಗುತ್ತದೆ. ಇನ್ನು ರಾತ್ರಿ ಈ ರೀತಿಯಾಗಿ ನೀವು ಇದ್ದಂತಹ ಆಹಾರ ಪದಾರ್ಥ ಅಥವಾ ಅನ್ನವನ್ನು ಬೆಳಿಗ್ಗೆ ಏನು ಮಾಡಬೇಕು

ಎಂದರೆ ಮೊದಲು ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ಬಂದ ಆಹಾರವನ್ನು ತೆಗೆದು ನಿಮ್ಮ ಮನೆಯ ಮುಂದೆ ಇರುವಂತಹ ಯಾವುದಾದರೂ ಪ್ರಾಣಿಗಳಿಗೆ ತಿನ್ನಲು ಕೊಡಬೇಕು, ಹೀಗೆ ತಿನ್ನಲು ಕೊಟ್ಟಾಗ ಪ್ರಾಣಿಗಳು ಅದನ್ನು ತಿಂದು ನಂತರ ನಿಮಗೆ ಒಳ್ಳೆಯದಾಗಲಿ ಎಂದು ಆಶಿಸುತ್ತವೆ ಎಂಬ ವಿಶೇಷವಾದ ನಂಬಿಕೆಯೂ ಇದೆ. ಈ ಒಂದು ಪದ್ಧತಿಯನ್ನು ಈಗಾಗಲೇ ಹಲವಾರು ಜನರು ಪಾಲಿಸುತ್ತಾ ಬಂದಿದ್ದಾರೆ ನೀವು ಸಹ ಈ ಪದ್ಧತಿಯನ್ನು ಪಾಲಿಸಿದರೆ ಒಳ್ಳೆಯದು.

ಹೀಗೆ ಉಳಿದ ಆಹಾರದಿಂದ ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಇಂತಹ ನಿಯಮಗಳನ್ನು ಪಾಲಿಸಿದರೆ ಮಹಾಲಕ್ಷ್ಮಿ ದೇವಿಯ ಅನುಗ್ರಹವು ಪ್ರಾಪ್ತಿಯಾಗುತ್ತದೆ, ಅನ್ನಪೂರ್ಣೇಶ್ವರಿ ಆಶೀರ್ವಾದವೂ ದೊರೆಯುತ್ತದೆ, ಮನೆಯಲ್ಲಿ ಎಂತಹ ಸಂಕಷ್ಟಗಳು ಇದ್ದರೂ ಸಹ ಅದು ನಿವಾರಣೆಗೊಂಡು ಎಲ್ಲ ರೀತಿಯಿಂದಲೂ ಸಮಸ್ಯೆಗಳು ದೂರವಾಗುತ್ತದೆ, ನಿಮಗೆ ಮತ್ತು ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಗಳು ನಡೆಸುತ್ತೇವೆ.

Leave a Comment