ಸ್ನಾನದ ಮನೆ ಪಕ್ಕದಲ್ಲಿ ದೇವರ ಕೋಣೆ ಇದ್ದರೆ ಏನಾಗುತ್ತೆ ಗೊತ್ತೇ!

ದೇವರ ಕೋಣೆ ಸ್ನಾನ ಕೋಣೆ ಪಕ್ಕ ಇರಬಾರದು. ದೇವರ ಮನೆ ಎಂದರೆ ತುಂಬಾ ಪವಿತ್ರ. ಹೀಗಾಗಿ ದೇವರ ಮನೆ ಪಕ್ಕದಲ್ಲಿ ಅಥವಾ ದೇವರ ಕೋಣೆ ಗೋಡೆ ತಾಗಿ ಶೌಚಾಲಯ ಸ್ನಾನ ಗೃಹ ಅಥವಾ ಕೈ ಕಾಲು ತೊಳೆಯುವ ಸಿಂಕ್ ಗಳನ್ನು ಇಡಬಾರದು. ಅದು ವಾಸ್ತು ಪ್ರಕಾರ ದೋಷವನ್ನು ಉಂಟು ಮಾಡುವುದು. ಅಲ್ಲದೆ ಕಾಲು ಕೈ ತೊಳೆಯದೆ ದೇವರ ಮನೆಯನ್ನು ದಾಟಿಯೇ ಮುಂದೆ ಹೋಗುವಂತೆ ಇರಬಾರದು. ದೇವರ ಮನೆಗೆ ಒಂದು ವಾಸ್ತು ಪಟ್ಟಿ ಹೊಂದಿರುವ ಕೋಣೆ ಅಥವಾ ಕೊಠಡಿ ಇರಬೇಕು. ದೇವರ ಪೂಜೆ ಅಥವಾ ಧ್ಯಾನಕ್ಕಾಗಿ ಮಾತ್ರ ದೇವರ ಮನೆಯ ಒಳಗೆ ಪ್ರವೇಶಿಸುವಂತೆ ಇರಬೇಕು.

ಪೂಜಾ ಕೊಠಡಿ ಬಾಗಿಲು ಮತ್ತು ಕಿಟಕಿಗಳು ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಮಾತ್ರ ಇರಬೇಕು. ಅಲ್ಲದೆ ದೇವರ ಕೋಣೆಯು ತ್ರಿಭುಜ ಅಥವಾ ತೆರೆದಂತಹ ವಿನ್ಯಾಸದಲ್ಲಿ ಇರಬಾರದು. ಪೂಜಾ ಕೋಣೆಗೆ ಚೌಕಕರ ಅಥವಾ ಆಯತಾಕರದಲ್ಲಿ ಮಾತ್ರ ಇರಬೇಕು. ದೇವರ ಮನೆಗೆ ಅಮೃತ ಶಿಲೆಯ ಕಲ್ಲುಗಳನ್ನು ಬಳಸಿದರೆ ಅತ್ಯಂತ ಶ್ರೇಷ್ಠವಾದದ್ದು.

ಪೂಜಾ ಕೋಣೆಗೆ ಬಿಳಿ ನಿಂಬೆ ಹಳದಿ ಕಡಲೆ ಹಿಟ್ಟಿನ ಬಣ್ಣಗಳನ್ನು ಮಾತ್ರ ಹಚ್ಚಬೇಕು. ದೇವರ ಮನೆಯ ಒಳಗೆ ದೇವರಿಗಾಗಿ ತಾಮ್ರದ ಪಾತ್ರೆಯಲ್ಲಿ ನೀರನ್ನು ಸದಾ ಕಾಲ ಇಡಬೇಕು. ಪ್ರತಿದಿನ ಮುಂಜಾನೆ ಸ್ನಾನದ ನಂತರ ಆ ಪಾತ್ರೆಯನ್ನು ಸ್ವಚ್ಛಗೊಳಿಸಿ ಹೊಸ ನೀರನ್ನು ತುಂಬಿಡಬೇಕು.

ದೇವರ ಪೂಜೇಗೆ ದೀಪ ಬೆಳಗಲು ಅಕ್ಷತೆ ಇಡಲು ಹೀಗೆ ಅಗತ್ಯತೆಗೆ ತಾಮ್ರದ ಪಾತ್ರೆಗಳನ್ನು ಬಳಸುವುದು ಶ್ರೇಷ್ಠ. ದೇವರ ಮನೆಯ ಲ್ಲಿ ನಿತ್ಯವೂ ನಂದ ದೀಪ ಬೆಳಗುವಂತೆ ನೋಡಿಕೊಂಡರೆ ಮನೆಯಲ್ಲಿ ಸಮೃದ್ಧಿ ಹಾಗು ಸಂತೋಷ ನೆಲೆಸುವುದು ಎಂದು ಹೇಳಲಾಗುತ್ತದೆ.

Leave a Comment