ಈ ದಿನ ಅಪ್ಪಿತಪ್ಪಿ ಕೂಡ ತವರು ಮನೆಯಿಂದ ಗಂಡನ ಮನೆಗೆ ಹೋಗ್ಬಾರ್ದು. ಯಾಕೆ ಗೊತ್ತ? ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವಾಹಿತ ಮಹಿಳೆ ಬಹುತೇಕ ಆಚರಣೆ ವಿಚಾರ ಸಂಪ್ರದಾಯಗಳನ್ನು ಪಾಲಿಸಬೇಕು ಎನ್ನುವ ಮಾತಿದೆ.ಮದುವೆ ಆಗಿ ಮತ್ತೊಂದು ಮನೆಗೆ ಬಂದ ಹೆಣ್ಣು ಸಾಕ್ಷಾತ್ ಲಕ್ಷ್ಮಿಯ ರೂಪ ಆಗಿರುತ್ತಾಳೆ. ಆಕೆ ತೋರುವ ನಡುವಳಿಕೆಗಳು,ಮಾಡುವ ಕೆಲಸಗಳು, ಗಂಡನ ಮನೆ ಹಾಗೂ ತವರು ಮನೆ ಏಳಿಗೆಗೆ ಕಾರಣವಾಗುತ್ತದೆ.
ಹೆಣ್ಣನ್ನ ಲಕ್ಷ್ಮಿ ರೂಪ ಎಂದು ಪರಿಗಣಿಸಲಾಗುತ್ತದೆ.ಒಂದು ಮನೆಯಲ್ಲಿ ಹುಟ್ಟಿ ಇನ್ನೊಬ್ಬರ ಮನೆಯನ್ನು ಬೆಳಗುವುದಕ್ಕೆ ಆಕೆ ಹುಟ್ಟಿರುತ್ತಾಳೆ ಹೆಣ್ಣು ಕೆಲವೊಂದು ದಿನ ಗಂಡನ ಮನೆಗೆ ತೆರಳಿದರೆ ಅದು ಮಂಗಳಕರ ಎನ್ನುತ್ತಾರೆ. ಜ್ಯೋತಿಷ್ಯ ಪ್ರಕಾರ ಹೆಣ್ಣು ಶುಕ್ರ ಗ್ರಹದಿಂದ ಸಂಬಂಧ ಹೊಂದಿರುತ್ತಾರೇ. ಬುಧ ಮತ್ತು ಶನಿ ಗ್ರಹಗಳು ಶುಕ್ರ ಗ್ರಹಕ್ಕೆ ಬಹಳ ಆತ್ಮೀಯರಾಗಿರುತ್ತಾರೆ.
ಬುಧವಾರ ಮತ್ತು ಶನಿವಾರ ತವರು ಮನೆಗೆ ಹೋಗಬಹುದು.ನೀವು ತವರ ಮನೆಗೆ ಅಮವಾಸೆ ದಿನ ಮಾತ್ರ ಹೋಗಬೇಡಿ, ಅಲ್ಲದೆ ಅಮವಾಸೆ ಹಿಂದಿನ ಹಾಗೂ ಮುಂದಿನ ದಿನ ಸಹ ತವರುಮನೆಗೆ ಹೋಗಬಾರದು.