ಶಿವನ ಪೂಜೆಗೆ ಕೇದಗೆ ಹೂವನ್ನ ಯಾವುದೇ ಕಾರಣಕ್ಕೂ ಇಡಬೇಡಿ!

ಅಪರೂಪದ ಹೂವು ಕೇದಗೆ ಅಥವಾ ಕೇತಕಿ ಹೂ ಅಸಲಿಗೆ ಇದು ಹೂವಿನಂತೆ ಕಾಣಿಸುವುದೇ ಇಲ್ಲ. ಹಳದಿ ಬಣ್ಣದ ತೆಂಗಿನ ಗರಿಯಂತೆ ಇರುತ್ತದೆ. ಮುಳ್ಳು ಗಳಂತೆ  ಪೊದೆಯಂಥ ಮರದಲ್ಲಿ ಬೆಳೆಯುವ ಕೇದಗೆ ತನ್ನ ವಿಶಿಷ್ಟವಾದ ಸುಗಂಧದಿಂದ ಮನಸು ಉಲ್ಲಾಸಭರಿತವಾಗುತ್ತದೆ. ಇದರಿಂದ ಸುಗಂಧ ದ್ರವ್ಯ ಮತ್ತು ತೈಲಗಳಿಗೆ ಕೇದಗೆಯನ್ನ ಬಳಸುತ್ತಾರೆ ಕೇದಗೆ ಹೂವು ಬಿಟ್ಟಿದ್ದರೆ ಅದರ ಸುವಾಸನೆ ಇಡೀ ಊರಿಗೆ ವ್ಯಾಪಿಸುತ್ತದೆ. ನೈಜ ಕೇದಗೆ ಹೂ ಎಂದರೆ ಹೊಳೆಯ ಬದಿಯಲ್ಲಿ ಬೆಳೆಯುವ ತಾಳೆ ಹೂವಿನ ಮರದಲ್ಲಿ ಬಿಡುವ ಹೂ ಎತ್ತರಕ್ಕೆ ಬೆಳೆದ ದಟ್ಟ ಮುಳ್ಳು ಗಳು ಇರುವ ಎಲೆಗಳು ಹಾಗೂ ರಂಬೆಗಳಿಂದ ಅರಳುವ ಹೂ ನಿಜವಾದ ಹೂವೆ ಕೇದಗೆ ಹೂ ಆದರೆ ಇಂಥಹ ಹೂಗಳು ಅತ್ಯಂತ ವಿರಳ. ನಗರೀಕರಣದ ಪ್ರಭಾವದಿಂದ ಇಂತಹ ಹೂಗಳು ಸಿಗುವುದು ಅತ್ಯಂತ ಅಪರೂಪ. ಇದನ್ನ ಕೇದಗೆ ಹೂವು, ಕೇತಕಿ ಹೂ ಎಂದು ಕರೆಯಲಾಗುತ್ತದೆ. ಇದು ನಾಗ ದೇವರಿಗೆ ಅತ್ಯಂತ ಇಷ್ಟ ಎನ್ನುವುದು ನಂಬಿಕೆ.

ಹೀಗಾಗಿ ನಾಗರ ಪಂಚಮಿ ಸಂದರ್ಭದಲ್ಲಿ ಈ ಹೂವಿಗೆ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಸ್ವರ್ಣ ಕೇದಿಗೆ ನಾಗದೇವರಿಗೆ ಹೆಚ್ಚು ಒಲವು ಅಥವಾ ಪ್ರೀತಿ. ಕೇದಗೆಯಲ್ಲಿ ಕಡು ಹಳದಿ, ತಿಳಿ ಹಳದಿ ಹೀಗೆ ನಾನಾ ರೀತಿಯಲ್ಲಿ ಇರುತ್ತದೆ ಇನ್ನು ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲೂ ಲಕ್ಷ್ಮಿಗೆ ಈ ಹೂವನ್ನು ಸಮರ್ಪಿಸುತ್ತಾರೆ. ಆದರೆ ಕೇದಗೆ ಹೂವನ್ನು ಶಿವ ಪೂಜೆಗೆ ಬಳಸಬಾರದು ಎಂಬ ಆಚರಣೆ ಮತ್ತು ಸಂಪ್ರದಾಯವಿದೆ. ಅದಕ್ಕೆ ಹಿನ್ನೆಲೆಯಾಗಿ ಕಥೆ ಇದೆ ವಿಶ್ವ ಸೃಷ್ಟಿಯ ಸಂದರ್ಭದಲ್ಲಿ ವಿಷ್ಣು ಮತ್ತು ಬ್ರಹ್ಮನಿಗೆ ಒಂದು ಬೃಹತ್ ಆದ ಶಿವಲಿಂಗ ಗೋಚರವಾಗುತ್ತದೆ. ಇದರ ಆದಿ ಮತ್ತು ಅಂತ್ಯ ಎಲ್ಲಿವರೆಗೆ ಇದೆ ಎಂಬುದುನ್ನು ತಿಳಿಯಲು ಅವರು ಪಣತೊಟ್ಟರು. ವಿಷ್ಣು ವರಹ ರೂಪಿಯಗಿ  ಭೂಮಿಯನ್ನ ಅಗೆಯುತ್ತಾ.

ಶಿವಲಿಂಗದ ಮೂಲವನ್ನ ಹುಡುಕಲು ಹೊರಟ ಬ್ರಹ್ಮನು ಹಂಸ ರೂಪ ತಾಳಿ ಆಕಾಶದಲ್ಲಿ ಹಾರಾಡುತ್ತಾ ಶಿವಲಿಂಗದ ತುದಿಯನ್ನು ತಲುಪಲು ಹೊರಟ ಬಹಳಷ್ಟು ಪ್ರಯತ್ನ ಮಾಡಿದರು ತಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ.

ತನ್ನ ಪ್ರಯತ್ನ ವಿಫಲವಾದಾಗ ವಿಷ್ಣು ಶಿವನಿಗೆ ವಂದಿಸಿ ಆತ ನ್ನನ್ನು ಬ್ರಹ್ಮಾಂಡ ಸ್ವರೂಪಿ ಎಂದು ಒಪ್ಪಿಕೊಳ್ಳುತ್ತಾರೆ. ಬ್ರಹ್ಮನು ಶಿವಲಿಂಗನ ತುದಿಯನ್ನು ತಲುಪಲು ವಿಫಲನಾದರು ಸೋಲನ್ನು ಒಪ್ಪಿಕೊಳ್ಳಲು ಮನಸ್ಸು ಇಲ್ಲದಿದ್ದರೂ ಇನ್ನು ಹಾರಾಡುತ್ತಿರುವಾಗ ಆಕಾಶದಲ್ಲಿ ಒಂದು ಕೇದಕೆ ಹೂ ಮೇಲಿನಿಂದ ಕೆಳಕ್ಕೆ ಬರುವುದನ್ನು ಕಂಡನು ಕೇದಕೆ ತಾನು ಶಿವಲಿಂಗನ ಮೇಲೆ ಇರಿಸಲಾದ ಹೂ ಎಂದು ಹೇಳಿತು ಬ್ರಹ್ಮನು ತಾನು ಶಿವಲಿಂಗದ ಆದಿಯನ್ನು ತಲುಪುವುದರ ಬಗ್ಗೆ ಸಾಕ್ಷಿ ನುಡಿಯಬೇಕು ಎಂದು ಕೇದಕೆಗೆ ಹೇಳಿದನು. ಅವರು ಇಬ್ಬರು ಶಿವನ ಬಳಿ ಹೋದರು ಬ್ರಹ್ಮನು ತಾನು ಶಿವಲಿಂಗದ ತುದಿಯನ್ನು ತಲುಪಿದ್ದೇನೆ ಎಂದು ಹೇಳಿದನು. ಕೇದಕೆಯು ಇದನ್ನು ತಾನೇ ನೋಡಿದ್ದೇನೆ ಎಂದು ಸುಳ್ಳು ಸಾಕ್ಷಿ ನುಡಿಯಿತು.

ಎಲ್ಲವನ್ನು ತಿಳಿದ ಶಿವನು ಇವರ ಸುಳ್ಳು ಕಥೆಯನ್ನು ಕೇಳಿ ಶಿವನು ಕುಪಿತನಾಗಿ ಇನ್ನು ಮುಂದೆ ಬ್ರಹ್ಮನಿಗೆ ಎಲ್ಲಿಯೂ ಪೂಜೆ ಸಲ್ಲಿಸಬಾರದು. ಕೇದಕೆಯನ್ನ ಶಿವಪೂಜೆಗೆ ಬಳಸಬಾರದು ಎಂದು ಶಾಪವನ್ನು ನೀಡಿದನು. ಹೀಗೆ ಕೇದಕೆ ಹೂವು ಶಿವನ ಪೂಜೆಗೆ ನಿಷೇಧವಾಯಿತು.

https://youtu.be/VzNJZVchs-c?si=TX3FfUCEeVcqAZgJ

Leave a Comment