ಕಾರ್ತಿಕ ಮಾಸ ಅತ್ಯಂತ ವಿಶೇಷವಾದದ್ದು. ಮೂವತ್ತು ದಿನಗಳ ಪುಣ್ಯ ಫಲಗಳು ಲಭ್ಯವಾಗುತ್ತದೆ. ಕಾರ್ತಿಕ ಮಾಸಕ್ಕೂ ಮೊದಲು ಬರುವ ಪ್ರಮುಖ ದೈವ ಸಂಗತಿಗಳಲ್ಲಿ ಧನ್ತೆರಸ್ಸಿನ ಕುಬೇರನ ಪೂಜೆಗೆ ಮಹತ್ವದ ಸ್ಥಾನವಿದೆ. ನಂತರ ನರಕ ಚತುರ್ದಶಿ ದಿನ ಪಿತೃ ದೇವತಾ ಪೂಜೆ ಮಾಡುವುದು ಅತ್ಯುತ್ತಮ. ದಸರ ಆಗುವ ಮುನ್ನ ಬರುವ ಮಹಾಲಯ ಅಮಾವಾಸ್ಯೆ ಅಷ್ಟೇ ಅಲ್ಲ ನರಕ ಚತುರ್ದರ್ಶಿ ಅಮಾವಾಸ್ಯೆ ವೇಳೆಯೂ ಪಿತೃ ಸ್ಮರಣೆ ಮಾಡಿದ್ದಲ್ಲಿ ಬದುಕು ಇನ್ನಷ್ಟು ಹಸೀನಾಗುತ್ತದೆ. ಇನ್ನು ದೀಪಾವಳಿ ದಿನ ಲಕ್ಷ್ಮಿ ಪೂಜೆ ಅತ್ಯಂತ ಮಹತ್ವದದ್ದು. ಏಕೆಂದರೆ ದೀಪಾವಳಿ ದಿನದಂದು ಲಕ್ಷ್ಮಿ ದೇವಿಯನ್ನು ಆಕರ್ಷಣೆ ಮಾಡುವ ಶಕ್ತಿ ಇರುತ್ತದೆ.
ಲಕ್ಷ್ಮಿ ದೇವಿಗೆ ಶೋಡೋಉಪಚಾರ ಮಾಡಿಕೊಳ್ಳಿ. ನಂತರ ನಿಮ್ಮಲ್ಲಿ ಇರುವ ಸಂಪತ್ತನ್ನು ಲಕ್ಷ್ಮಿ ಮುಂದೆ ಇಟ್ಟು ಎಲ್ಲಾ ಕಾಲಕ್ಕೂ ನಿನ್ನ ಆಶೀರ್ವಾದವೇ ಮೂಲ ಸದಾಕಾಲ ನಿನ್ನ ಕೃಪೆ ಹೀಗೆ ಇರಲಿ ಅಮ್ಮ ಎಂದು ಬೇಡಿಕೊಳ್ಳಿ. ಇಷ್ಟು ಮಾಡಿದರೆ ಸಾಕು ನಿಮ್ಮ ಬದುಕಲಿ ಮತ್ತೆ ಗಳಿಸಲು ದಾರಿಗಳು ಸಿಗುತ್ತವೆ ಎನ್ನುವ ನಂಬಿಕೆ.
ಕಾರ್ತಿಕ ಮಾಸದಲ್ಲಿ ಮಾಡಿಕೊಳ್ಳಬೇಕಾದ ಕೆಲಸ
ಕಾರ್ತಿಕ ಮಾಸದ ಎರಡನೇ ದಿನ ಭಜನೆ ಹಾಗು ಭೋಜನ ವಿಶೇಷತೆ ಒಂದಿದೆ. ಆ ದಿನ ಮನೆಯಲ್ಲಿ ಅಣ್ಣ ತಮ್ಮಂದಿರು ಇದ್ದರೆ ಕರೆದು ಊಟ ಹಾಕಿ. ಹೆಂಗಸರು ಕೈಯಾರೆ ಅಡುಗೆ ಮಾಡಿ ಬಡೀಸಿ ಆರತಿ ಮಾಡಿದರೆ ನಿಮ್ಮ ಸಹೋದರನ ಆಯುಷ್ಯ ವೃದ್ಧಿ ಆಗುತ್ತದೆ.
ಇನ್ನು ಕಾರ್ತಿಕ ಮಾಸದಲ್ಲಿ ಬರುವ ನಾಗ ಚೌತಿ ದಿನ ನಾಗೇಂದ್ರನ ಆರಾಧನೆ ಮಾಡುವುದನ್ನು ಮರೆಯಬೇಡಿ. ನಾಗರ ಕಲ್ಲಿಗೆ ಹುತ್ತಕ್ಕೆ ಹಾಲು ಎರೆಡು ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡಿ. ಇದರಿಂದ ನಾಗರದೋಷಗಳ ಪ್ರಭಾವ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿ ನೆಲೆಸುವುದಕ್ಕೆ ಅನುಕೂಲ ಆಗುತ್ತದೆ.
ಇನ್ನು ಕಾರ್ತಿಕ ಮಾಸದಲ್ಲಿ ಬರುವ ಪಂಚಮಿಗೆ ಅತ್ಯಂತ ಮಹತ್ವವಿದೆ. ಕಾರ್ತಿಕ ಪಂಚಮಿ ಮಹಾ ಲಕ್ಷ್ಮಿ ಮಾತೇ ಮತ್ತೆ ಸಾತ್ವಿಕ ರೂಪದಲ್ಲಿ ಅರವಿಂಭಾವಿಸಿದ್ದ ದಿನ.ರಘುಮುನಿಯ ಲೋಕ ಕಲ್ಯಾಣದಿಂದ ವೈಕುಂಠ ತೊರೆದಿದ್ದ ಮಾತೇ ದೀರ್ಘ ತಪಸ್ಸಿನ ಬಳಿಕ ಋಷಿ ಮುನಿಗಳ ಕೋರಿಕೆ ಹಿನ್ನಲೆಯಲ್ಲಿ ಕೊಲ್ಲಸುರನನ್ನು ಹೊದಿಸಿ ಕೊಲ್ಲಾಪುರದಲ್ಲಿ ನೆಲೆಸಿದರು. ಹೀಗಾಗಿ ಪದ್ಮಾವತಿ ಕಲ್ಯಾಣದ ಬಳಿಕ ಶ್ರೀನಿವಾಸ ಸ್ವಾಮಿ ಕೊಲ್ಲಾಪುರಕ್ಕೆ ಬಂದು ತಪ್ಪಾಸ್ಸು ಮಾಡಿ ಲಕ್ಷ್ಮಿ ದರ್ಶನ ಕೋರಿದರು ಸಿಗಲಿಲ್ಲ. ನಂತರ ತ್ರಿಚಾರಲೂರಿನ ಪದ್ಮವತಿ ದೇಗುಲ ಇರುವ ಜಾಗದಲ್ಲಿ ಪದ್ಮ ಸರೋವರದ ಮುಂದೆ ತಪಸ್ಸು ಮಾಡಿದ ಶ್ರಿವಾರಿ. ಈ ತಪ್ಪಾಸಿನ ನಂತರವೇ ಇಲ್ಲಿನ ಕೊಳದ ಕಮಲದಲ್ಲಿ ಉದ್ಭವಿಸಿದಳು ಮಾತೇ. ಈ ಕಾರಣಕ್ಕೆ ಪ್ರತಿ ವರ್ಷ ಕಾರ್ತಿಕ ಪಂಚಮಿಯೊಂದು ತಿರುಮಲದ ಆರಂಭ ನಿಲಯದಿಂದ ತಿರುಚಲೂರಿನ ಪದ್ಮವತಿ ದೇಗುಲಕ್ಕೆ ವಿಶೇಷ ಸೀರೆಯೊಂದು ಬರುತ್ತದೆ ಅಮ್ಮನವರಿಗಾಗಿ.ಈ ದಿನ ಲಕ್ಷ್ಮಿ ದೇವಿ ನೆನೆದು ಪೂಜೆ ಮಾಡಿದರೆ ನಿಮಗೂ ಅನುಕೂಲ.
ಇನ್ನು ಕಾರ್ತಿಕ ವನ ಭೋಜನ . ಇದನ್ನು ಕಾರ್ತಿಕ ಮಾಸದ ಅಷ್ಟಮಿ ದಿನ ಮಾಡಿದರೆ ಉತ್ತಮ.ಕಾರ್ತಿಕ ಸೋಮವರ ದಿನ ಮೊದಲು ಗೋ ಪೂಜೆ ಮಾಡಿ. ನಂತರ ಮನೆಯವರು ಎಲ್ಲಾದರೂ ಹೊರಗೆ ಹೋಗೀ ವನ ಭೋಜನ ಮಾಡಿದರೆ ಉತ್ತಮ ಎಂದು ಹೇಳಿದೆ ಶಾಸ್ತ್ರ.
ಇನ್ನು ಕಾರ್ತಿಕ ಮಾಸದಲ್ಲಿ ಬರುವ ಏಕಾದಶಿ ಅನ್ನು ಉದ್ದಾನಾ ಏಕಾದಶಿ ಎಂದು ಕರೆಯುತ್ತಾರೆ. ವರ್ಷದಲ್ಲಿ ಬರುವ 24 ಏಕಾದಶಿಗಳಲ್ಲಿ ಮಹತ್ವ ಎಂದು ಅನಿಸಿಕೊಂಡಿರುವ ಏಕಾದಶಿ ಪೈಕಿ ಈ ಉದ್ದಾನಾ ಏಕಾದಶಿ ಯೂ ಒಂದು. ಈ ದಿನ ವಿಷ್ಣು ಪೂಜೆ ಮಾಡಿದರೆ ಉತ್ತಮ. ಈ ಏಕಾದಶಿಯಿಂದ ಮುಂದಿನ ಹುಣ್ಣಿಮೆ ತನಕ ಬರುವ 5 ದಿನಗಳು ಕೂಡ ವಿಶೇಷವಾದದ್ದು. ಈ ಸಮಯವನ್ನು ಬಿಷ್ಮ ಪಂಚಕ ವ್ರತ ಎಂದು ಕರೆಯಲಾಗುತ್ತದೆ.