ನಮ್ಮ ಪೂರ್ವಿಕರು ದೀರ್ಘಾಯುಶಿಗಳು. ವೃದ್ಧಾಪ್ಯ ಬಂದರೂ ಸಾಕಷ್ಟು ದೃಢವಾಗಿ, ಆರೋಗ್ಯವಾಗಿ ಇರುತ್ತಿದ್ದರು. ಇದಕ್ಕೆ ಅವರು ನಿತ್ಯ ಔಷಧ ಗುಣಗಳನ್ನು ಹೊಂದಿರುವ ಆಹಾರ ತೆಗೆದುಕೊಳ್ಳುತ್ತಿದ್ದ ಕಾರಣ ಅವರು ಹೆಚ್ಚಿನ ಕಾಲ ಜೀವಿಸುತ್ತಿದ್ದರೆಂದು ಆಯುರ್ವೇದ ತಜ್ಞರು ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಯಸ್ಸನ್ನು ಹೆಚ್ಚಿಸುವ ಐದು ಆಹಾರಗಳನ್ನು ಇಲ್ಲಿ ನೀಡುತ್ತಿದ್ದೇವೆ. ಇವನ್ನು ಆಹಾರದಲ್ಲಿ ಹಿತಮಿತವಾಗಿ ಬಳಸಿದರೆ ಉತ್ತಮ. ಅವು ಏನು ಎಂದು ತಿಳಿದುಕೊಂಡು, ನಿಮ್ಮ ಗೆಳೆಯರ ಜತೆಗೂ ಹಂಚಿಕೊಳ್ಳಿ.
ಬೆಟ್ಟದ ನೆಲ್ಲಿಕಾಯಿ
ಇದರಲ್ಲಿ ವಿಟಮಿನ್ ಸಿ ಇದೆ. ದೇಹವನ್ನು ಸೋಂಕುಗಳಿಂದ, ರೋಗಗಳಿಗೆ ತುತ್ತಾಗದಂತೆ ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ಪೋಷಿಸುತ್ತದೆ. ಇದರಲ್ಲಿ ಸಮೃದ್ಧವಾಗಿ ಇರುವ ಆ್ಯಂಟಿ ಆಕ್ಸಿಡೆಂಟ್‍ಗಳು ಹೆಚ್ಚು ಕಾಲ ಜೀವಿಸಲು ಉಪಯೋಗಕ್ಕೆ ಬರುತ್ತವೆ.
ಜೇನುತುಪ್ಪ
ಜೇನಿನಲ್ಲಿ ಸಹಜಸಿದ್ಧವಾದ ಖನಿಜ ಲವಣಗಳು ಹೇರಳವಾಗಿ ಇರುತ್ತವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಿತ್ಯ ಒಂದು ಟೀಸ್ಫೂನ್ ಜೇನು ತೆಗೆದುಕೊಂಡರೆ ದೇಹ ದೃಢವಾಗಿ, ಶಕ್ತಿಯುತವಾಗಿ ಇರುತ್ತದೆ.
ಲವಂಗ
ಲವಂಗ ಆ್ಯಂಟಿ ಫಂಗಲ್, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಸೆಪ್ಟಿಕ್, ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಸಾಕಷ್ಟು ಔಷಧಿ ಗುಣಗಳಿವೆ.
ಓಂಕಾಳು
ಓಂಕಾಳಿನಲ್ಲಿ ಇರುವ ನಿಯಾಸಿನ್, ಥಮೋಲ್ ಹೃದ್ರೋಗಗಳಿಂದ ರಕ್ಷಿಸುತ್ತದೆ. ಇದು ಸಹಜ ಆ್ಯಂಟಿ ಬಯೋಟಿಕ್ ಆಗಿ ಕೆಲಸ ಮಾಡುತ್ತದೆ.