ನಾವು ಮನೆಯಲ್ಲಿ ದೇವರ ವಿಗ್ರಹಗಳನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ ಅದೇ ರೀತಿಯಾಗಿ ಕಾಮಧೇನುವಿನ ಫೋಟೋವನ್ನು ಇಟ್ಟುಕೊಂಡು ಪೂಜೆಯನ್ನು ಮಾಡುತ್ತೇವೆ ಆದರೆ ಪೂಜೆ ಕೋಣೆಯಲ್ಲಿ ಕಾಮಧೇನುವಿನ ವಿಗ್ರಹವನ್ನು ಈ ರೀತಿಯಾಗಿ ಇಟ್ಟು ಪೂಜೆಯನ್ನು ಮಾಡುವುದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಪುಣ್ಯ ಫಲಗಳು ಲಭಿಸುತ್ತದೆ ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸುತ್ತಾರೆ ಎಂದು ಹೇಳಲಾಗುತ್ತದೆ ಹಾಗಾಗಿ ಒಂದು ವಿಶೇಷವಾದ ಕಾಮಧೇನುವಿನ ಫೋಟೋವನ್ನು ಇಟ್ಟು ಪೂಜೆಯನ್ನು ಮಾಡುವುದರಿಂದ ಮುಕ್ಕೋಟಿ ದೇವರುಗಳ ಆಶೀರ್ವಾದ ನಮಗೆ ಲಭಿಸುತ್ತದೆ ಹಾಗಾದರೆ ಮನೆಯಲ್ಲಿ ಕಾಮಧೇನುವಿನ ಫೋಟೋವನ್ನು ಯಾವ ರೀತಿಯಾಗಿ ಇಟ್ಟು ಪೂಜೆ ಮಾಡಬೇಕು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ
ಪ್ರತಿದಿನವು ಮನೆಯಲ್ಲಿ ಕಾಮಧೇನುವಿನ ವಿಗ್ರಹವನ್ನು ಇಟ್ಟು ಪೂಜೆಯನ್ನು ಮಾಡಬಹುದು ಆದರೆ ಪೌರ್ಣಮಿಯ ದಿನ ಮತ್ತು ಶುಕ್ರವಾರದ ದಿನದಂದು ಕಾಮಧೇನುವಿನ ವಿಗ್ರಹಕ್ಕೆ ಅಭಿಷೇಕವನ್ನು ಹಾಗೂ ಪೂಜೆಯನ್ನು ಮಾಡಬೇಕು ಮೊದಲು ಒಂದು ಪೀಠವನ್ನು ಸಿದ್ಧಪಡಿಸಿಕೊಂಡು ಅದಕ್ಕೆ ರಂಗೋಲಿಯನ್ನು ಇಟ್ಟು ಅದರ ಮೇಲೆ ಒಂದು ತಟ್ಟೆಯನ್ನು ಇಟ್ಟು ಕಾಮಧೇನುವಿನ ವಿಗ್ರಹವನ್ನು ಅದರೊಳಗೆ ಇಡಬೇಕು ನಂತರ ಎರಡು ದೀಪಗಳನ್ನು ಪೀಠದ ಪಕ್ಕ ಇಡಬೇಕು ನಂತರ ಕಾಮಧೇನುವಿಗೆ ಹಾಲಿನಿಂದ ಅಭಿಷೇಕವನ್ನು ಮಾಡಬೇಕು ನಂತರ ಅಗರಬತ್ತಿ ಇಂದ ಪೂಜೆಯನ್ನು ಮಾಡಿಕೊಂಡು ಪುನಃ ಶುದ್ಧವಾದ ನೀರಿನಿಂದ ಅಭಿಷೇಕವನ್ನು ಮಾಡಬೇಕು
ಹೀಗೆ ಮಾಡಿಕೊಂಡು ಪುನಹ ಅದಕ್ಕೆ ಅಗರಬತ್ತಿ ಇಂದ ಪೂಜೆಯನ್ನು ಮಾಡಿ ನಂತರ ವಿಗ್ರಹವನ್ನು ಸ್ವಚ್ಛಗೊಳಿಸಿ ಅರಿಶಿನ-ಕುಂಕುಮವನ್ನು ಗಂಧವನ್ನು ಹೂವುಗಳಿಂದ ಅಲಂಕಾರವನ್ನು ಮಾಡಬೇಕು ಈಗ ಅಲಂಕಾರವನ್ನು ಮಾಡಿದ ನಂತರ ಪುನಹ ಅಗರಬತ್ತಿ ಇಂದ ಒಂದು ಧೂಪವನ್ನು ಆರತಿಯನ್ನು ಅಥವಾ ಕರ್ಪೂರದಿಂದ ಆರತಿಯನ್ನು ಬೆಳಗಿ ಕಾಮಧೇನುವಿಗೆ ನಮಸ್ಕರಿಸಬೇಕು ಹೀಗೆ ಈ ರೀತಿಯಾಗಿ ಮನೆಯಲ್ಲಿ ಒಂದು ಪುಟ್ಟದಾದಂತಹ ಕಾಮಧೇನುವಿನ ವಿಗ್ರಹವನ್ನು ಇಟ್ಟು ಪ್ರತಿದಿನ ಪೂಜೆಯನ್ನು ಮಾಡಿದರೆ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಋಣಾತ್ಮಕ ಶಕ್ತಿಗಳು ನಾಶವಾಗುತ್ತದೆ ಮನೆಯಲ್ಲಿ ದೈವಶಕ್ತಿ ಎನ್ನುವುದು ಹೆಚ್ಚಾಗುತ್ತದೆ
ನೀವು ಪ್ರತಿನಿತ್ಯ ಅಭಿಷೇಕ ಮಾಡುವ ಅಗತ್ಯವಿಲ್ಲ ಪ್ರತಿನಿತ್ಯ ದೇವರಿಗೆ ಪೂಜೆಯನ್ನು ಮಾಡಬೇಕಾದರೆ ಈ ಒಂದು ವಿಗ್ರಹಕ್ಕೂ ಕೂಡ ಪೂಜೆಯನ್ನು ಮಾಡಬೇಕು ಶುಕ್ರವಾರ ಮತ್ತು ಹುಣ್ಣಿಮೆಯ ದಿನ ಮಾತ್ರ ಅಭಿಷೇಕವನ್ನು ಮಾಡಬೇಕು ಇದು ಯಾರ ಮನೆಯಲ್ಲಿ ಸಂತಾನ ಇಲ್ಲವೋ ಆ ಮನೆಯಲ್ಲಿ ಕಾಮಧೇನುವನ್ನು ಈ ರೀತಿಯಾಗಿ ಆರಾಧಿಸುವುದರಿಂದ ಶೀಘ್ರವಾಗಿ ಸಂತಾನ ಫಲ ಪ್ರಾಪ್ತಿಯಾಗುತ್ತದೆ ಅಷ್ಟೇ ಅಲ್ಲದೆ ಗೋಮಾತೆಯನ್ನು ಆರಾಧಿಸುವುದರಿಂದ ಸಕಲ ದೋಷಗಳು ಸಕಲ ಪಾಪ ಕರ್ಮಗಳು ನಿವಾರಣೆಯಾಗುತ್ತವೆ ಮನೆಗೆ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗುತ್ತದೆ