ಗಂಡ-ಹೆಂಡತಿ ದಾಂಪತ್ಯ ಹೀಗಿದ್ದರೆ ಮಾತ್ರ ಚೆನ್ನಾಗಿರುತ್ತೆ!

ಚಾಣಕ್ಯರು ಪ್ರತಿಯೊಂದು ಸಂಬಂಧವನ್ನು ಬಹಳ ಆಳವಾಗಿ ಅಧ್ಯಯನ ಮಾಡಿದರು.ಅದು ಮಾನವ ಸಂಬಂಧಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಸಂಬಂಧಗಳಲ್ಲಿ ಒಂದು ಗಂಡು ಮತ್ತು ಹೆಂಡತಿ ಸಂಬಂಧ ಕೂಡ. ಒಬ್ಬ ವ್ಯಕ್ತಿಯ ದಾಂಪತ್ಯ ಜೀವನದಲ್ಲಿ ಆಹ್ಲಾದಕರವಾಗಿದ್ದರೆ ಅವನು ಯಾವಾಗಲೂ ತನ್ನ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ ಅಂತ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳುತ್ತಾರೆ. ಮಾನವ ಬೆಳವಣಿಗೆ ಸಾಧ್ಯತೆಗಳನ್ನು ಸಂತೋಷದ ದಾಂಪತ್ಯ ಜೀವನದಲ್ಲಿ ಮಾತ್ರ ಮರೆಮಾಡಲಾಗಿದೆ ಅಂತ ಚಾಣಕ್ಯರು ಹೇಳಿದ್ದಾರೆ.

ಚಾಣಕ್ಯರ ಪ್ರಕಾರ ತನ್ನ ಕುಟುಂಬ ಮತ್ತು ಹೆಂಡತಿಯೊಂದಿಗೆ ಸಂತೋಷವಾಗಿ ಇರುವ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿ ಯಶಸ್ವಿ ಆಗುವುದು ಅವನಿಗೆ ಕಷ್ಟದ ಕೆಲಸ ಅಲ್ಲ.ವೈವಾಹಿಕ ಜೀವನದ ಸಂತೋಷದಿಂದಾಗಿ ಮನುಷ್ಯನ ಮನಸ್ಸು ಶಾಂತಿ ಶಾಂತವಾಗಿ ಸಕಾರತ್ಮಕ ಆಲೋಚನೆಗಳಿಂದ ತುಂಬಿ ಕೊಂಡಿರುತ್ತಾನೆ. ಸಕಾರಾತ್ಮಕ ಆಲೋಚನೆಗಳು ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಆದ್ದರಿಂದ ಆ ವ್ಯಕ್ತಿಯ ದಾಂಪತ್ಯ ಜೀವನ ಸುಖವಾಗಿರಬೇಕು. ಇಂತಹ ವ್ಯಕ್ತಿ ಎಷ್ಟೇ ಜ್ಞಾನಿ ಆಗಿದ್ದರು ವ್ಯರ್ಥ ಎಂದು ಹೇಳುತ್ತಾರೆ ಚಾಣಕ್ಯರು.

ಚಾಣಕ್ಯ ನೀತಿಯ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯ ದಾಂಪತ್ಯ ಜೀವನ ಒತ್ತಡ ನೋವು ದುಃಖಗಳಿಂದ ತುಂಬಿರುತ್ತದೆಯೋ ಅವನು ಎಷ್ಟೇ ಪ್ರತಿಭಾವಂತ ಮತ್ತು ಪ್ರತಿಭಾಶಾಲಿ ಆಗಿದ್ದರು ಅವನು ಜೀವನದಲ್ಲಿ ಯಾವಾಗಲೂ ನಿರಾಸೆ,ದುಃಖ ಇರುತ್ತದೆ.ಅಂತಹ ಜನರು ತಮ್ಮ ಪ್ರತಿಭೆ ಮತ್ತು ಜ್ಞಾನದ ಸಂಪೂರ್ಣ ಲಾಭವನ್ನು ಪಡೆಯುವುದಕ್ಕೆ ಆಗುವುದಿಲ್ಲ. ಅದರಿಂದ ನೀವು ಜೀವನದಲ್ಲಿ ಯಶಸ್ವಿಯಾಗಬೇಕು ಎಂದರೆ ವೈವಾಹಿಕ ಜೀವನವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ ಚಾಣಕ್ಯರು.

ಇನ್ನು ಗಂಡ ಹೆಂಡತಿ ಸಂಬಂಧದಲ್ಲಿ ಘನತೆ ಇರಬೇಕು. ಸಂತೋಷದ ದಾಂಪತ್ಯ ಜೀವನ ಉಡುಗೊರೆ ಇದ್ದಹಾಗೆ.ಇದರ ಉಪಯುಕ್ತತೆಯನ್ನು ಎಂದಿಗೂ ಎಂದಿಗೂ ಕಡಿಮೆ ರೀತಿಯಲ್ಲಿ ಅಂದಾಜು ಮಾಡಬಾರದು. ದಾಂಪತ್ಯ ಜೀವನ ಸಂತೋಷವಾಗಿದ್ದರೆ ತೊಂದರೆಗಳು ಕಡಿಮೆಯಾಗುತ್ತದೆ.

ಗಂಡ ಹೆಂಡತಿಯ ಸಂಬಂಧ ನಂಬಿಕೆಯಿಂದ ಬಲಗೊಳ್ಳುತ್ತದೆ. ನಂಬಿಕೆಯನ್ನು ಗೌರವದಿಂದ ನಿರ್ಮಿಸಲಾಗಿದೆ.ನೀವು ಪರಸ್ಪರ ಭಾವನೆಗಳನ್ನು ಸಂಪೂರ್ಣವಾಗಿ ಗೌರವಿಸುವಾಗ ಮತ್ತು ಸಂತೋಷವನ್ನು ಮತ್ತು ದುಃಖವನ್ನು ಒಬ್ಬರಿಗೊಬ್ಬರು ಹಂಚಿಕೊಂಡಾಗ ಮಾತ್ರ ಈ ಸಂಬಂಧ ದಿನದಿಂದ ದಿನಕ್ಕೆ ಬಲಗೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಘನತೆಯನ್ನು ಹೊಂದಿದಂತೆ ಅದೇ ರೀತಿ ಪ್ರತಿಯೊಂದು ಸಂಬಂಧಕ್ಕೂ ಘನತೆ ಇರುತ್ತದೆ. ಅದು ನಕಾರಾತ್ಮಕ ಪರಿಣಾಮ ಬೀರುವುದಕ್ಕೆ ಪ್ರಾರಂಭಿಸಿದಾಗ ವೈವಾಹಿಕ ಜೀವನದಲ್ಲಿ ಕಹಿ ಮತ್ತು ಉದ್ವೇಗದ ಪರಿಸ್ಥಿತಿ ಪ್ರಾರಂಭವಾಗುತ್ತದೆ.

ಇನ್ನು ಪ್ರೀತಿ ಎಂದಿಗೂ ಕಡಿಮೆಯಾಗದಂತೆ ನೋಡಿಕೊಳ್ಳಿ. ಗಂಡ-ಹೆಂಡತಿ ಸಂಬಂಧದಲ್ಲಿ ಈ ಎರಡು ವಿಷಯಗಳು ಬಹಳ ಮುಖ್ಯ. ಚಾಣಕ್ಯನ ಪ್ರಕಾರ ಯಾವುದೇ ಓರ್ವ ವ್ಯಕ್ತಿಯು ನಟನೆಯ ಪ್ರೀತಿಯನ್ನು ಮಾಡಬಾರದು ಮತ್ತು ಪ್ರೀತಿಯಲ್ಲಿ ಮೋಸ ಹೋಗಬಾರದು ಮತ್ತು ಮೋಸ ಮಾಡಬಾರದು. ಗಂಡ-ಹೆಂಡತಿ ಸಂಬಂಧವನ್ನು ಅತ್ಯಂತ ಪವಿತ್ರ ಸಂಬಂಧ ಎಂದು ಹೇಳುತ್ತಾರೆ ಚಾಣಕ್ಯರು. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಪ್ರೀತಿ ನಂಬಿಕೆ ಸಂತೋಷ ತಾಳ್ಮೆ ಇರುತ್ತದೆಯೋ ಆ ವ್ಯಕ್ತಿ ಎಂದಿಗೂ ಯಶಸ್ವಿನ ಹಾಗೂ ಪ್ರಗತಿಯ ಮಾರ್ಗದಲ್ಲಿ ಜೀವನವನ್ನು ಸಾಗಿಸುತ್ತಾನೆ.

https://www.youtube.com/watch?v=eV3H2P0cg70

Leave a Comment