ಕೆಲವರಿಗೆ ಊಟ ಮಾಡದೇ ಇದ್ದರು ಹಸಿವು ಎನ್ನುವುದು ಆಗುವುದಿಲ್ಲ. ಇದರಿಂದ ಬೇರೆ ಬೇರೆ ಅರೋಗ್ಯ ಸಮಸ್ಸೆಗಳು ಕೂಡ ಬರುತ್ತವೆ. ಹಸಿವು ಆಗುವುದಕ್ಕೆ ಈ ಕೆಲವು ಮನೆಮದ್ದುಗಳನ್ನು ಮಾಡಿದರೆ ಸಾಕು. ಒಂದು ಗ್ಲಾಸ್ ಕಬ್ಬಿನ ಹಾಲಿಗೆ ಎರಡು ಲವಂಗ ಪುಡಿ ಹಾಕಬೇಕು. ನಂತರ ಇದಕ್ಕೆ 3 ಕಾಳು ಮೆಣಸಿನ ಪುಡಿ ಹಾಕಬೇಕು. ಇದಕ್ಕೆ ಅರ್ಧ ಇಂಚು ಹಸಿ ಶುಂಠಿಯನ್ನು ಜಜ್ಜಿ ಕಬ್ಬಿನ ಹಾಲಿಗೆ ಹಾಕಿ ಮಿಕ್ಸ್ ಮಾಡಬೇಕು. ನಂತರ ತಯಾರಿಸಿದ ಪುಡಿಯನ್ನು ಹಾಕಬೇಕು.
ಇದನ್ನು 5 ನಿಮಿಷ ಹಾಗೆ ಬಿಟ್ಟು ಸ್ವಲ್ಪ ನಿಂಬೆ ರಸ ಹಾಕಿ ಮಿಕ್ಸ್ ಮಾಡಿದ ನಂತರ ಕುಡಿಯಬೇಕು.ದಿನಕ್ಕೆ ಒಂದು ಲೋಟ ಕುಡಿದರೆ ಹಸಿವು ಆಗುತ್ತದೆ ಹಾಗು ತಿಂದ ಆಹಾರ ಕೂಡ ಚೆನ್ನಾಗಿ ಜೀರ್ಣ ಆಗುತ್ತದೆ.