ಕೈ ನಲ್ಲಿದ್ದ ಈ ವಸ್ತುಗಳು ಜಾರಿ ಕೆಳಗೆ ಬಿದ್ದರೆ ಅಪಶಕುನವೆ!

ನಮ್ಮ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ಶಕುನಗಳನ್ನ ಸೂಚಿಸುತ್ತದೆ. ಕಾಗೆ ಕುಕ್ಕುವುದು, ಹದ್ದು ಹಾರುವುದು ಹೀಗೆ. ಹಾಗೆಯೇ, ನಮ್ಮ ಕೈನಿಂದ ಜಾರಿ ಕೆಲ ವಸ್ತುಗಳು ಬೀಳುವುದು ಅಪಶಕುನವಂತೆ. ಆ ವಸ್ತುಗಳು ಯಾವುವು ಹಾಗೂ ಬಿದ್ದರೆ ಏನಾಗುತ್ತದೆ ಎಂಬುದು ಇಲ್ಲಿದೆ.

ಕುಂಕುಮ: ಕುಂಕುಮಕ್ಕೆ ಬಹಳ ಪವಿತ್ರವಾದ ಸ್ಥಾನವನ್ನ ನಮ್ಮ ಸಂಪ್ರದಾಯದಲ್ಲಿ ನೀಡಲಾಗಿದೆ. ಇದನ್ನ ಬಹುತೇಕ ಎಲ್ಲಾ ಪೂಜೆ ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ಬಳಕೆ ಮಾಡುತ್ತೇವೆ. ಆದರೆ ಹೆಣ್ಣು ಮಕ್ಕಳ ಕೈನಿಂದ ಕುಂಕುಮ ಜಾರಿ ಬೀಳುವುದು ಅಶುಭ ಎನ್ನಲಾಗುತ್ತದೆ. ಕೆಟ್ಟ ಘಟನೆಗಳು ಉಂಟಾಗುವ ಸಂಕೇತ ಇದು.

ಎಣ್ಣೆ: ಎಣ್ಣೆಯನ್ನು ಶನಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಮನೆಯ ನೆಲದ ಮೇಲೆ ಎಣ್ಣೆ ಬಿದ್ದರೆ ನೀವು ಮಾಡುವ ಕೆಲಸದಲ್ಲಿ ತೊಂದರೆಯಾಗುತ್ತದೆ ಎನ್ನುವ ಸೂಚನೆಯಂತೆ. ಇದರ ಜೊತೆಗೆ ಸಾಲದ ಸಮಸ್ಯೆ ಹೆಚ್ಚಾಗಬಹುದು.

ಹಾಲು: ಹಾಲು ಕೈ ಜಾರಿ ಬೀಳುವುದರಿಂದ ಮನೆಯಲ್ಲಿ ಕೆಟ್ಟ ಶಕ್ತಿಗಳ ಸಂಚಾರ ಹೆಚ್ಚಾಗುತ್ತದೆ. ಇದರಿಂದ ಸಂತೋಷ ಮತ್ತು ಸಮೃದ್ಧಿ ಕಡಿಮೆಯಾಗುವ ಸಾಧ್ಯತೆಗಳಿದೆ. ಅಲ್ಲದೇ, ಇದು ಕುಟುಂಬದಲ್ಲಿ ಅನೇಕ ತೊಂದರೆಗೆ ಕಾರಣವಾಗುತ್ತದೆ.

ಪ್ರಸಾದ: ಕೈನಿಂದ ಅಪ್ಪಿ-ತಪ್ಪಿ ದೇವರ ಪ್ರಸಾದ ಬೀಳುವುದು ಅಶುಭದ ಸಂಕೇತ. ಈ ರೀತಿ ಪ್ರಸಾದ ಬಿದ್ದರೆ ದೇವರಿಗೆ ನಿಮ್ಮ ಮೇಲೆ ಕೋಪ ಬಂದಿದೆ ಎಂದು ಅರ್ಥ. ಹಾಗಾಗಿ ಯಾವುದಾದರೂ ತಪ್ಪು ಮಾಡಿದರೆ ದೇವರಲ್ಲಿ ಕ್ಷಮೆ ಕೇಳಿಕೊಂಡು, ಪ್ರಸಾದ ಸೇವನೆ ಮಾಡಿ.

ದೇವರ ವಿಗ್ರಹ: ಮನೆಯಲ್ಲಿ ದೇವರ ವಿಗ್ರಹವನ್ನ ಬಹಳ ಜಾಗರೂಕತೆಯಿಂದ ನೋಡಿಕೊಳ್ಳಲಾಗುತ್ತದೆ. ಆದರೆ ಈ ದೇವರ ವಿಗ್ರಹ ಜಾರಿ ಬಿದ್ದರೆ ಮಾತ್ರ ಬಹಳ ಅಪಶಕುನವಂತೆ. ಈ ರೀತಿ ಬೀಳುವುದರಿಂದ ಬಡತನ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ, ಹಣದ ವಿಚಾರವಾಗಿ ಸಮಸ್ಯೆಗಳಾಗುತ್ತದೆ ಎನ್ನುವ ನಂಬಿಕೆ ಇದೆ.

ಮಡಿಕೆ: ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಒಂದೆಲ್ಲಾ ಒಂದು ಮಣ್ಣಿನ ವಸ್ತು ಇರುತ್ತದೆ. ಹೆಚ್ಚಾಗಿ ನೀರು ಕುಡಿಯಲು ಮಡಕೆಯನ್ನ ಇಟ್ಟಿರುತ್ತಾರೆ. ಇದು ಆಗಾಗ ಕೈ ಜಾರಿ ಬೀಳುತ್ತದೆ ಆದರೆ ಈ ರೀತಿ ಮನೆಯಲ್ಲಿ ಮಡಿಕೆ ಬೀಳುವುದು ಅಶುಭವಂತೆ. ಇದರಿಂದ ನಿಮ್ಮ ಜೀವನದಲ್ಲಿ ಸಾಲಾಗಿ ಸಮಸ್ಯೆಗಳು ಬರುವ ಸಾಧ್ಯತೆ ಇದೆ.

ದೀಪ: ಮನೆಯನ್ನ ಬೆಳಗಲಿ ಎಂದು ನಾವು ದೀಪವನ್ನ ಹಚ್ಚುತ್ತೇವೆ. ಆದರೆ ಅದೇ ಜಾರಿ ಬಿದ್ದರೆ ಬಹಳ ಕಷ್ಟವಾಗುತ್ತದೆ. ಇದು ನಿಮ್ಮ ಬದುಕಿನಲ್ಲಿ ಬಹಳ ತೊಂದರೆಗಳು ಬರುತ್ತದೆ ಎನ್ನುವ ಸಂಕೇತವಾಗಿದೆ. ಅಲ್ಲದೇ, ಕುಟುಂಬದಲ್ಲಿ ಕೆಟ್ಟ ಘಟನೆ ನಡೆಯುವ ಸಾಧ್ಯತೆ ಇರುತ್ತದೆ. 

Leave a Comment