ಔಡಲ ಗಿಡ ಪ್ರತಿಯೊಬ್ಬರಿಗೂ ಗೊತ್ತಿದೆ.ಈ ಗಿಡ ಹಲವಾರು ಔಷಧಿ ಗುಣವನ್ನು ಹೊಂದಿದೆ. ಹಿಂದಿನ ಕಾಲದಲ್ಲಿ ಔಡಲ ಗಿಡದ ಬೇರನ್ನು ಕಷಾಯ ಮಾಡಿಕೊಂಡು ಕುಡಿಯುತ್ತಿದ್ದರು. ಅದರೆ ಔಡಲ ಗಿಡದ ಬೀಜ ತುಂಬಾನೇ ವಿಷಕಾರಿ.ಇದರಿಂದ ಜೀವ ಹೋಗುವ ಸಾಧ್ಯತೆ ಕೂಡ ಇರುತ್ತದೆ.ಈ ಗಿಡದ ಬೇರು ಅದ್ಭುತವಾದ ಔಷಧಿ ಗುಣವನ್ನು ಹೊಂದಿದೆ.ಇನ್ನು ನೋವಿನ ಸಮಸ್ಸೆ ಇರುವವರಿಗೆ ಔಡಲ ಗಿಡದ ಬೇರು ತುಂಬಾನೇ ಸಹಾಯ ಮಾಡುತ್ತದೆ.ಯಾಕೆಂದರೇ ವಾತವನ್ನು ಕಂಟ್ರೋಲ್ ಮಾಡುವ ಗುಣವನ್ನು ಹೊಂದಿರುವುದು.
ಮಲ ಸುಲಭವಾಗಿ ಹೋಗುವ ಹಾಗೆ ಮತ್ತು ಹೊಟ್ಟೆ ಉಬ್ಬರ ಕಡಿಮೆ ಮಾಡುವ ಗುಣ ಇದಕ್ಕೆ ಇದೆ.ಹಾಗಾಗಿ ಇದರ ಕಷಾಯವನ್ನು ಕುಡಿದರೆ ಸುಲಭವಾಗಿ ಮಲ ಹೋಗುತ್ತದೆ.ಜೊತೆಗೆ ವಾತಾವನ್ನು ಕಡಿಮೆ ಮಾಡುತ್ತದೆ.10ಗ್ರಾಂ ಔಡಲ ಗಿಡದ ಬೇರನ್ನು ತೆಗೆದುಕೊಂಳ್ಳಬೇಕು ಮತ್ತು ಎರಡು ಚಿಟಿಕೆ ಒಣ ಶುಂಠಿ ಪುಡಿಯನ್ನು ಹಾಕಿ ಮತ್ತು ನಾಲ್ಕು ಲೋಟ ನೀರು ಹಾಕಿ ಕುದಿಸಿ ಶೋದಿಸಿ ಊಟದ ಸಮಯದಲ್ಲಿ ಕುಡಿದರೆ ಮಲ ಸುಲಭವಾಗಿ ಹೋಗುತ್ತದೆ.ಇದನ್ನು ತೆಗೆದುಕೊಂಡರೆ ದೇಹದಲ್ಲಿ ಇರುವ ನೋವಿನ ಸಮಸ್ಸೆ ನಿವಾರಣೆ ಆಗುತ್ತದೆ.