ವಾರದ ಈ ದಿನದಲ್ಲಿ ಸಾಲ ಪಡೆದ್ರೆ ತೀರಿಸ್ತಾನೆ ಇರ್ತೀರ ಸಾಲ ತಿರೋದಿಲ್ಲ!

ಕೆಲವೊಮ್ಮೆ ಕೆಲ ಕಾರಣದಿಂದ ಬೇರೆಯವರಿಂದ ಹಣ ಸಾಲ ಪಡೆಯುವುದು ಸಾಮಾನ್ಯವಾಗಿದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ದಿನಗಳಲ್ಲಿ ನಾವು ಸಾಲ ಪಡೆದರೆ ಅದನ್ನು ತೀರಿಸಲು ಸಾಧ್ಯವಾಗುವುದಿಲ್ಲವಂತೆ. ಆ ದಿನಗಳು ಯಾವುವು ಎಂಬುದು ಇಲ್ಲಿದೆ.

ಮೊದಲೆಲ್ಲ ಸಾಲ ಎಂದರೆ ಶೂಲ ಎನ್ನುವ ಆಲೋಚನೆ ಜನರಲ್ಲಿ ಇತ್ತು, ಆದರೆ ಈಗ ಕಾಲ ಬದಲಾಗಿದೆ. ತಮ್ಮ ಜೀವನಶೈಲಿಗೆ ಅನುಗುಣವಾಗಿ ಸಾಲ ಮಾಡಲು ಆರಂಭಿಸಿದ್ದಾರೆ. ಜೀವನ ನಡೆಸಲು ಸಾಲು ಅಗತ್ಯ ಎನ್ನುವಂತಾಗಿದೆ.

ಈಗಂತೂ ಇಎಂಐ, ಕ್ರೆಡಿಟ್ ಕಾರ್ಡ್ ಹೀಗೆ ಸಾಲ ಪಡೆಯಲು ಸೌಲಭ್ಯಗಳು ಹಲವಾರಿದೆ. ಹಾಗಾಗಿ ಯಾವಾಗ ಬೇಕೋ ಆಗ ಅದನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಸಾಲ ಎಂದಿಗೂ ನೆಮ್ಮದಿ ನೀಡುವುದಿಲ್ಲ. ಅದನ್ನು ತೀರಿಸುವ ತನಕ ನಿದ್ದೆ ಬರುವುದಿಲ್ಲ

ಅಲ್ಲದೇ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಲ ತಪಡೆಯಲು ಸಹ ಒಂದು ದಿನ ಹಾಗೂ ಸಮಯವಿದೆ. ಸರಿಯಾದ ಸಮಯದಲ್ಲಿ ಸಾಲ ಪಡೆಯದಿದ್ದರೆ, ಅದನ್ನು ಮರಳಿ ಕೊಡುವುದು ಬಹಳ ಕಷ್ಟವಾಗುತ್ತದೆ. ಬಹಳಷ್ಟು ವರ್ಷಗಳ ಕಾಲ ಈ ಸಾಲದ ಹೊರೆಯನ್ನು ಹೊರಬೇಕಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ, ಬುಧವಾರ, ಶನಿವಾರ ಸಾಲ ಮಾಡಿದರೆ ನಿಮ್ಮ ಸಾಲ ಎಂದಿಗೂ ಮುಗಿಯುವುದಿಲ್ಲವಂತೆ. ಹಾಗಾಗಿ ಈ 3 ದಿನಗಳ ಕಾಲ ಅಪ್ಪಿ ತಪ್ಪಿ ಸಾಲ ಮಾಡಲು ಹೋಗಬೇಡಿ. ಅಲ್ಲದೇ ದಿನ ಮಾತ್ರ ಅಲ್ಲ ನಕ್ಷತ್ರಗಳು ಸಹ ಸಾಲ ಪಡೆಯುವಾಗ ಮುಖ್ಯವಾಗುತ್ತದೆ.

ಉತ್ತರಫಾಲ್ಗುಣಿ, ಹಸ್ತ, ಮೂಲ, ಅದ್ರ, ಜ್ಯೇಷ್ಠ, ವಿಶಾಖ, ರೋಹಿಣಿ , ಕೃತಿಕಾ, ಉತ್ತರಾಷಾಢ, ಉತ್ತರ ಭಾದ್ರಪದ, ಇಷ್ಟು ನಕ್ಷತ್ರಗಳು ಸಾಲ ಪಡೆಯಲು ಸೂಕ್ತವಲ್ಲ ಎನ್ನಲಾಗುತ್ತದೆ. ಹಾಗಾಗಿ ಈ ನಕ್ಷತ್ರ ಇದ್ದ ದಿನ ಸಹ ನೀವು ಸಾಲ ಮಾಡಿದರೆ ತೀರಿಸಲು ಸಾಧ್ಯವಾಗುವುದಿಲ್ಲವಂತೆ.

ಹಾಗೆಯೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಾಲ ಪಡೆಯಲು ಒಳ್ಳೆಯ ದಿನ ಸಹ ಇದೆ. ನೀವು ಅನಿವಾರ್ಯವಿದ್ದರೆ ಸೋಮವಾರ, ಗುರುವಾರ, ಶುಕ್ರವಾರ ಹಾಗೂ ಭಾನುವಾರದಂದು ಹಣ ಪಡೆಯಬಹುದು. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ.

ಅಲ್ಲದೇ, ನಕ್ಷತ್ರದ ವಿಚಾರಕ್ಕೆ ಬಂದರೆ ಶತಭಿಷ, ಸ್ವಾತಿ, ಧನಿಷ್ಠ, ಮೃಗಶಿರ ಪುನರ್ವಸು, ರೇವತಿ, ಚಿತ್ರ, ಅನುರಾಧ, ಅಶ್ವಿನಿ ಮತ್ತು ಪುಷ್ಯ ನಕ್ಷತ್ರದ ಸಮಯದಲ್ಲಿ ನೀವು ಯಾವುದೇ ಭಯವಿಲ್ಲದೇ ಸಾಲ ಪಡೆಯಬಹುದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

Leave a Comment