ವರಮಹಾಲಕ್ಷ್ಮಿ ಪೂಜೆಯಲ್ಲಿ ಈ ತಪ್ಪುಗಳಾದರೆ ನಿಮಗೆ ಹಣದ ಸಮಸ್ಯೆ ಬೆನ್ನು ಬಿಡದೆ ಕಾಡುತ್ತದೆ!

ಆಗಸ್ಟ್‌ 25ರಂದು ವರಮಹಾಲಕ್ಷ್ಮಿ ಹಬ್ಬ. ಶ್ರಾವಣ ಮಾಸದ ಈ ಪ್ರಮುಖ ಹಬ್ಬದ ಸಮಯದಲ್ಲಿ ಮಹಿಳೆಯರು ವ್ರತಾಚರಣೆ ಮಾಡುತ್ತಾರೆ. ಈ ದಿನದಂದು ಶಾಸ್ತ್ರಬದ್ಧವಾಗಿ ವರಮಹಾಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಬೇಕು.

ಮಹಾಲಕ್ಷ್ಮಿಯನ್ನು ಪೂಜಿಸಿದರೆ ಸಂಪತ್ತು, ಸಮೃದ್ಧಿ ದೊರಕುತ್ತದೆ. ಕುಟುಂಬದ ಎಲ್ಲರ ಆರೋಗ್ಯ ಉತ್ತಮವಾಗಿರುತ್ತದೆ ಎನ್ನುವುದು ನಂಬಿಕೆ. ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ವರಮಹಾಲಕ್ಷ್ಮಿ ಹಬ್ಬವು ಈ ಬಾರಿ ಆಗಸ್ಟ್‌ 25ರಂದು ಬಂದಿದೆ. ಅಂದು, ವರಮಹಾಲಕ್ಷ್ಮಿ ವ್ರತವನ್ನು ಹೇಗೆ ಮಾಡಬೇಕು ಎಂಬ ಮಾಹಿತಿ ಇಲ್ಲ ಹಬ್ಬದ ಹಿಂದಿನ ದಿನವೇ ಪೂಜಾ ಸಾಮಾಗ್ರಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

ಹಬ್ಬದಂದು ಅಥವಾ ಹಬ್ಬದ ಹಿಂದಿನ ದಿನ ಮನೆಯನ್ನು ಸ್ವಚ್ಛಗೊಳಿಸಿ. ಶುದ್ಧಿ ಇರುವಲ್ಲಿ ಲಕ್ಷ್ಮಿ ಇರುತ್ತಾಳೆ. ಪೂಜೆಗೆ ಬೇಕಾದ ವಸ್ತುಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ವರಮಹಾಲಕ್ಷ್ಮಿ ಪೂಜೆಗೆ ಲಕ್ಷ್ಮೀ ದೇವಿಯ ಮುಖವಾಡ ಬೇಕು. ಇದರ ಜತೆಗೆ ಕಲಶವೊಂದು ಇರಲಿ. ದೇವಿಗೆ ಉಡಿಸಲು ಸೀರೆ ಬೇಕು. ದೇವಿಗೆ ಆಭರಣದಿಂದ ಅಲಂಕಾರ ಮಾಡಬೇಕು. ರೆಡಿಮೆಡ್‌ ಕೂದಲು, ಒಂದಿಷ್ಟು ಪರಿಕರಗಳು ಇರಬೇಕು. ಇವೆಲ್ಲ ಗ್ರಂಥಿಕೆ ಅಂಗಡಿ ಅಥವಾ ಮಾರುಕಟ್ಟೆಯಲ್ಲಿ ದೊರಕುತ್ತದೆ. ಕನ್ನಡಿ ಇರಲಿ. ಸಿಪ್ಪೆ ತೆಗೆದ ಮೂರು ತೆಂಗಿನಕಾಯಿಯನ್ನು ಇಡಿ.

ಇದರೊಂದಿಗೆ ಅಲಂಕಾರಕ್ಕೆ ಮತ್ತು ಪೂಜೆಗೆ ಹೂವುಗಳು ಬೇಕು. ಮಣಿಕಟ್ಟಿಗೆ ಕಟ್ಟಲು ಹಳದಿ ದಾರ ತಂದಿಡಿ. ಮರದ ಮಣೆ, ಪೀಠ ಬೇಕು. ಹೂವಿನ ಹಾರ ಸಿದ್ಧವಾಗಿಟ್ಟುಕೊಳ್ಳಿ. ವೀಳ್ಯದೆಲೆ, ಅಡಿಕೆ, ಹಣ್ಣುಗಳು, ಬಾಳೆಹಣ್ಣು, ಅರಶಿನ, ಚಂದನ, ಕುಂಕಮ, ಬಿಳಿರಂಗೋಲಿ ಪುಡಿ, ಅಕ್ಷತೆ ಮತ್ತು ಅಕ್ಕಿ ಇರಲಿ. ಇವುಗಳೊಂದಿಗೆ ಎಣ್ಣೆ, ತುಪ್ಪ ಮತ್ತು ದೀಪ, ಧೂಪದ್ರವ್ಯದ ತುಂಡುಗಳು, ಕರ್ಪೂರ ಇರಲಿ. ಲೋಹದ ಅಥವಾ ಬೆಳ್ಳಿಯ ತಟ್ಟೆಯೂ ಪೂಜೆಗೆ ಬೇಕಾಗುತ್ತದೆ. ಇವೆಲ್ಲ ವಸ್ತುಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು…

ವರಮಲಕ್ಷ್ಮೀಯ ವ್ರತಾಚರಣೆ ಹೇಗೆ:–ಆಗಸ್ಟ್‌ 25ರಂದು ಬೆಳಗ್ಗೆ ಬೇಗ ಎದ್ದೇಳಿ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಜಳಕ ಮಾಡಿ, ಶುಭ್ರವಾದ ಬಟ್ಟೆ ತೊಡಿ. ಮನೆಯನ್ನು ಕ್ಲೀನ್‌ ಮಾಡಿ. ಎಂಟು ದಳದ ಕಮಲದ ರಂಗೋಲಿ ಹಾಕಿ. ನೈವೇದ್ಯಕ್ಕೆ ರೆಡಿ ಮಾಡಿ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪೂಜೆ ಅಥವಾ ಆಚರಣೆ ಇರುತ್ತದೆ. ಪೂಜಾ ಪ್ರದೇಶವನ್ನು ನೀರಿನಿಂದ ಶುದ್ಧ ಮಾಡಿ. ಗಂಗಾಜಲವಿದ್ದರೆ ಉತ್ತಮ. ಮರದ ಪೀಠ, ಮಣೆಗೆ ಅರಸಿನ ಹಚ್ಚಿ, ರಂಗೋಲಿ ಪುಡಿ ಇರಲಿ. ಪೀಠಕ್ಕೆ ಅಕ್ಷತೆ ಹಾಕಿ, ಲೋಹದ ತಟ್ಟೆ ಇಡಿ. ಅರಶಿನ, ಕುಂಕುಮವನ್ನು ಕಲಶಕ್ಕೆ ಹಚ್ಚಿ. ಅದನ್ನು ತಟ್ಟೆಯ ಮಧ್ಯ ಭಾಗದಲ್ಲಿ ಇಟ್ಟು, ಕಲಶಕ್ಕೆ ಕೊಂಚ ನೀರು ಹಾಕಿ. ಕಲಶಕ್ಕೆ ಅಕ್ಷತೆ ಹಾಕಿ. ಕೆಲವು ನಾಣ್ಯಗಳನ್ನು ಹಾಕಿ. ಕಲಶದ ಮೇಲೆ ತೆಂಗಿನಕಾಯಿ ಇಡಿ. ಕಳಶಕ್ಕೆ ಕೆಲವು ಜನರು ಅಡಿಕೆಯನ್ನೂ ಹಾಕುತ್ತಾರೆ. ನಿಮ್ಮೂರಿನ ಸಂಪ್ರದಾಯದಂತೆ ಮಾಡಿ. ಕಳಶಕ್ಕೆ ಶ್ರೀಗಂಧ ಹಚ್ಚಿ. ಹೂವು ಹಾಕಿ. ಕಳಶದ ಮೇಲೆ ಐದು ವೀಳ್ಯದೆಲೆ ಇಡಿ. ವೀಳ್ಯದೆಲೆ ಇಲ್ಲದಿದ್ದರೆ ಮಾವಿನ ಎಲೆಯೂ ಆಗಬಹುದು.

ತೆಂಗಿನಕಾಯಿಯ ಎರಡು ಕಣ್ಣುಗಳು ಮುಂದಕ್ಕೆ ಇರುವಂತೆ ತೆಂಗಿನಕಾಯಿಯನ್ನು ಕಳಶದ ಮೇಲೆ ಇಡಬೇಕು. ಈ ರೀತಿ ಕಲಶ ಮತ್ತು ತೆಂಗಿನಕಾಯಿಯು ಲಕ್ಷ್ಮೀ ದೇವಿಯಾಗಬೇಕು. ಇದಕ್ಕಾಗಿ ತೆಂಗಿನಕಾಯಿಗೆ ಲಕ್ಷ್ಮೀ ದೇವಿಯ ಮುಖವಾಡವನ್ನು ಜೋಡಿಸಿರಿ. ಬಟ್ಟೆ ಬಳಸಿ ಸೀರೆ ಉಡಿಸಿ. ಕೂದಲು, ಆಭರಣ ಇತ್ಯಾದಿಗಳಿಂದ ಅಲಂಕರಿಸಿ.ಹೂವಿನ ಹಾರ ಹಾಕಿ. ಕೆಲವರು ದೇವಿಯ ವಿಗ್ರಹವನ್ನು ಬಳಸುತ್ತಾರೆ. ಈ ಮುಖವಾಡಕ್ಕೂ ಕಾಡಿಗೆ ಹಚ್ಚಿ ಅಲಂಕಾರ ಮಾಡುವ ಕ್ರಮವಿದೆ. ದೇವಿಗೆ ಪ್ರಿಯವಾದ ಕುಂಕುಮ, ಬಳೆ ಇತ್ಯಾದಿಗಳನ್ನು ದೇವಿಯ ಪಕ ಇಡಬಹುದು. ದೇವಿಯ ಎದುರು 32 ನಾಣ್ಯಗಳನ್ನು ಇಡಬಹುದು. ದೇವಿಗೆ ಮಾಂಗ್ಯಲ್ಯ ಅಥವಾ ಅರಸಿನ ತುಂಡನ್ನು ಕಟ್ಟಿದ ದಾರವನ್ನು ಹಾಕಬೇಕು. ದೇವಿಗೆ ಒಡವೆ ಹಾಬಹುದು. ಗೆಜ್ಜೆ ಹಾಕಬಹುದು. ತಾವರೆ ಹೂವನ್ನು ದೇವಿಯ ಮುಡಿಗೆ ಮುಡಿಸಬಹುದು.

ವರಮಹಾಲಕ್ಷ್ಮಿ ದೇವರ ಅಲಂಕಾರ ಮುಗಿದ ಬಳಿಕ ದೇವಿಯ ಹಿಂದೆ ಕನ್ನಡಿ ಇರಿಸಿ. ಎಣ್ಣೆ ಹಾಕಿ ದೀಪ ಬೆಳಗಿಸಿ. ದೇವಿಯ ಮುಂದೆ ವೀಳ್ಯದೆಲೆ, ಅಡಿಕೆ ಇಡಿ. ಮೊದಲೊಂದಿಪೆ ಗಣನಾಥ ಎಂಬಂತೆ ಮೊದಲು ಗಣೇಶ ದೇವರಿಗೆ ಪೂಜೆ ಸಲ್ಲಿಸಿ. ದೇವಿಗೆ ಸಂಬಂಧಪಟ್ಟ ಮಂತ್ರಗಳನ್ನು ಪಠಣ ಮಾಡಿ. ಮಹಾಲಕ್ಷ್ಮಿ ಸಹಸ್ರನಾಮ ಸ್ತೋತ್ರ ಪಠಿಸಬಹುದು. ದೇವಿಗೆ ಪೂಜೆ ಸಲ್ಲಿಸುವಾಗ ಹೂವು ಅರ್ಪಿಸಿ, ತಾಂಬೂಲ ಅರ್ಪಿಸಿ. ದೇವಿಗೆ ನೈವೇದ್ಯ ಅರ್ಪಿಸಿ. ಕಡಲೆ ಪಾಯಸ, ಮೋದಕ, ಇಡ್ಲಿ, ಉಪ್ಪು ಇತ್ಯಾದಿಗಳನ್ನು ನೈವೇದ್ಯವಾಗಿ ಮಹಾಲಕ್ಷ್ಮಿ ದೇವಿಗೆ ಸಮರ್ಪಿಸಬಹುದು. ಈ ಪೂಜೆಯನ್ನು ಕೆಲವರು ಕೆಲವು ರೀತಿಯಲ್ಲಿ ಮಾಡುತ್ತಾರೆ. ಕೆಲವರು ಶ್ಲೋಕ ಪಠಿಸುತ್ತಾರೆ. ಇನ್ನು ಕೆಲವರು ಮಹಾಲಕ್ಷ್ಮಿ ವ್ರತದ ಕತೆಯ ಪಾರಾಯಣ ಮಾಡುತ್ತಾರೆ. ಅಂತಿಮವಾಗಿ ಇದೆಲ್ಲ ಆದ ಬಳಿಕ ಆರತಿ ಮಾಡಿ, ಬಳಿಕ ನಿಮ್ಮ ಕೈಗೆ ದಾರವನ್ನು ಕಟ್ಟಿ. ಲಕ್ಷ್ಮೀ ದೇವಿಯನ್ನು ಪ್ರಾರ್ಥಿಸಿ, ನಿಮ್ಮ ಕೋರಿಕೆಗಳನ್ನು ಸಲ್ಲಿಸಿ.

Leave a Comment