ಮಾಘ ಮಾಸದಲ್ಲಿ ಮಾಡುವ ಅಖಂಡ ದೀಪರಾಧನೆ ಬಗ್ಗೆ ತಿಳಿಸಿಕೊಡುತ್ತೇನೆ.ಮಾಘ ಮಾಸದಲ್ಲಿ ತೀರ್ಥ ಸ್ನಾನ ಮಾಡುವುದು ಮತ್ತು ದೇವಸ್ಥಾನಕ್ಕೆ ಭೇಟಿ ಕೊಡುವುದು ಹಾಗೂ ವಿಶೇಷವಾಗಿ ದೀಪರಾಧನೆ ಮಾಡುವುದು ತುಂಬಾನೇ ವಿಶೇಷವಾಗಿ ಇರುತ್ತದೆ.ಈ ದೀಪರಾಧನೆಯಲ್ಲಿ ವಿಶೇಷವಾಗಿ ಬತ್ತಿಗಳ ಬಗ್ಗೆ ತಿಳಿದುಕೊಳ್ಳಬೇಕು.ಮೊದಲು ದೊಡ್ಡದಾದ ದೀಪವನ್ನು ತೆಗೆದುಕೊಂಳ್ಳಬೇಕು. ಅಖಂಡ ದೀಪರಾಧನೆ ಆಗಿರುವುದರಿಂದ ಈ ಕೆಲವೊಂದು ನಿಯಮವನ್ನು ಪಾಲನೆ ಮಾಡಬೇಕು.
ಅಖಂಡ ದೀಪರಾಧನೆ ಮಾಡುವಾಗ ಬ್ರಹ್ಮಚಾರ್ಯವನ್ನು ಪಾಲನೆ ಮಾಡಬೇಕಾಗುತ್ತದೆ ಮತ್ತು ಮನೆಯಲ್ಲಿ ಯಾವುದೇ ಕಾರಣಕ್ಕೂ ಮಾಂಸ ಆಹಾರವನ್ನು ಮಾಡಬಾರದು.ಇದನ್ನು ಮಾಘ ಮಾಸದ ಮೊದಲ ಸೋಮವಾರ ಶುರು ಮಾಡಿದರೆ ನಾಲ್ಕು ಸೋಮವಾರ ಸಿಗುತ್ತದೆ.ಅಮಾವಾಸ್ಯೆ ಒಳಗೆ ಇದನ್ನು ಮುಗಿಸಬೇಕಾಗುತ್ತದೆ.ನಾಲ್ಕು ಸೋಮವಾರದಲ್ಲಿ ಒಂದು ಸೋಮಾವರ ಈ ದೀಪರಾಧನೆ ಮಾಡಬೇಕಾಗುತ್ತದೆ. ಮೊದಲು ದೀಪಕ್ಕೆ ಅರಿಶಿಣದಿಂದ ಗಂಗಜಲವನ್ನು ಮಿಕ್ಸ್ ಮಾಡಿ ದೀಪಕ್ಕೆ ಹಚ್ಚಬೇಕು.ನಂತರ ದೀಪಕೆ ಸುತ್ತಲೂ ಕುಂಕುಮವನ್ನು ಹಚ್ಚಬೇಕಾಗುತ್ತದೇ.
ನಂತರ ಅರಳಿ ಎಲೆಯನ್ನು ತೆಗೆದುಕೊಂಡು ಅರಿಶಿಣ ಕುಂಕುಮವನ್ನು ಹಚ್ಚಬೇಕು.ಹಿತ್ತಾಳೆ ಅಥವಾ ತಾಮ್ರದ ಪ್ಲೇಟ್ ಮೇಲೆ ಅರಳಿ ಎಲೆಯನ್ನು ಇಡಬೇಕು.ನಂತರ ಎಲೆಯ ಮೇಲೆ ಅಕ್ಷತೆ ಹಾಕಿ ಅದರ ಮೇಲೆ ದೀಪವನ್ನು ಇಡಬೇಕು. ಸೋಮವಾರದಿಂದ ಭಾನುವಾರದವರೆಗೂ ದೀಪರಾಧನೆ ಮಾಡಬೇಕಾಗುತ್ತದೆ.ಇನ್ನು ಸೋಮವಾರ 3 ಬತ್ತಿ, ಮಂಗಳವಾರ 2 ಬತ್ತಿ, ಬುಧವಾರ 3 ಬತ್ತಿ, ಗುರುವಾರ 5 ಬತ್ತಿ, ಶುಕ್ರವಾರ 6 ಬತ್ತಿ, ಶನಿವಾರದ 9 ಬತ್ತಿ ಮತ್ತು ಕೊನೆಯದಾಗಿ ಭಾನುವಾರ 12 ಬತ್ತಿಯನ್ನು ಉಪಯೋಗಿಸಬೇಕು.ಇದು ತುಂಬಾನೇ ವಿಶೇಷವಾದ ದೀಪರಾಧನೆ ಆಗಿದೆ.
ನಂತರ ದೀಪರಾಧನೆಗೆ ಎಳ್ಳು ಎಣ್ಣೆ ಉಪಯೋಗಿಸಬೇಕಾಗುತ್ತದೆ.ಎಳ್ಳು ಎಣ್ಣೆ ದೀಪವನ್ನು ಹಚ್ಚುವುದರಿಂದ ಹಣದ ಸಮಸ್ಸೆ ಆಗಿದ್ದರೆ ಮತ್ತು ಎಲ್ಲಾ ಕಷ್ಟಗಳು ಕೂಡ ನಿವಾರಣೆ ಆಗುತ್ತದೆ.ಈ ಅಖಂಡ ದೀಪರಾಧನೆಯನ್ನು ಸೋಮವಾರದಿಂದ ಪ್ರಾರಂಭ ಮಾಡಬೇಕು ಮೊದಲು ಸೋಮವಾರ 3 ಬತ್ತಿ ಹಾಕಿ ದೀಪರಾಧನೆ ಮಾಡಬೇಕು.ಇದನ್ನು ಬೆಳಗ್ಗೆ 6:00 ಗಂಟೆ ಒಳಗಡೆ ಮಾಡಿಕೊಳ್ಳಿ.ಪ್ರತಿದಿನ ಬತ್ತಿಯನ್ನು ಮತ್ತು ದೀಪವನ್ನು ಬದಲಿಸಬಹುದು.
ಒಂದು ಮಣೆಯ ಮೇಲೆ ರಂಗೋಲಿ ಹಾಕಿ ಅದರ ಒಳಗೆ ಓಂ ನಮಃ ಶಿವಾಯ ಎಂದು ಬರೆದು ಈಶ್ವರ ಫೋಟೋ ಇಟ್ಟು ಹೂವಿನಿಂದ ಅಲಂಕಾರ ಮಾಡಬೇಕು ಮತ್ತು ರಂಗೋಲಿ ಮೇಲೆ ಅಕ್ಷತೆ ಹಾಕಿ ದೀಪವನ್ನು ಇಟ್ಟು ಹೂವಿನಿಂದ ಅಲಂಕಾರ ಮಾಡಬೇಕು.ನಂತರ ಊದುಬತ್ತಿಯಿಂದ ದೀಪವನ್ನು ಹಚ್ಚಿ ದೀಪರಾಧನೇ ಮಾಡಬೇಕು.
ಇನ್ನು ಮುಖ್ಯವಾಗಿ ನೈವೈದ್ಯಕ್ಕೆ ಹಣ್ಣು ಹಂಪಲು ಇಟ್ಟರೆ ಸಾಕು . ಇನ್ನು ಅರಳಿ ಎಲೆಯನ್ನು ಯಾಕೆ ಬಳಸುತ್ತೇವೆ ಎಂದರೆ ಅರಳಿ ಎಲೆಯಲ್ಲಿ ವಿಷ್ಣು ಸ್ವರೂಪ ಇರುತ್ತದೆ ಮತ್ತು ಲಕ್ಷ್ಮಿ ಅನುಗ್ರಹ ಕೂಡ ಸಿಗುತ್ತದೆ. ಹಾಗಾಗಿ ಅರಳಿ ಎಲೆಯ ಮೇಲೆ ದೀಪರಾಧನೆ ಮಾಡಿದರೆ ತುಂಬಾ ಒಳ್ಳೆಯದು.ದೀಪವನ್ನು ಹಚ್ಚುವ ಮೊದಲು ಸಂಕಲ್ಪವನ್ನು ಮಾಡಬೇಕು.ಯಾವ ಕಾರಣಕ್ಕೆ ನೀವು ಈ ದೀಪರಾಧನೆ ಮಾಡುತ್ತಾರೆ ಎಂದು ಈ ಅಂಖಡ ದೀಪರಾಧನೆ ಹಚ್ಚುವುದನ್ನು ಪ್ರಾರಂಭ ಮಾಡಬೇಕು.ನಿಮಗೆ ಕಷ್ಟ ಜಾಸ್ತಿ ಆದಾಗ ಈ ದೀಪರಾಧನೆ ಮಾಡಬಹುದು.ಸೋಮವಾರದ ದಿನ ಪ್ರಾರಂಭ ಮಾಡಿ.