Kannada Astrology : ಶ್ವಾನ ಮನುಷ್ಯನಿಗೆ ಸಹಾಯ ಮತ್ತು ಅದೃಷ್ಟವನ್ನು ನೀಡುವ ಏಕೈಕ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಮನೆಯನ್ನು ಕಾಯುವ ಉದ್ದೇಶಕ್ಕೆ ಸಾಕುವ ನಾಯಿಗಳಿಗೆ ವಿಶೇಷವಾದ ಅತೀಂದ್ರಿಯ ಶಕ್ತಿ ಇರುತ್ತದೆ. ಅದರ ಮೂಗು, ಕಿವಿ, ನಾಲಿಗೆ ಹಾಗೂ ಗೃಹಿಸುವ ಶಕ್ತಿಯು ಅದ್ಭುತವಾಗಿರುತ್ತದೆ.
ನಾರಾಯಣ ದೇವನ ವಾಹನ ಎಂದು ಪರಿಗಣಿಸಲಾಗುವ ಶ್ವಾನಗಳಲ್ಲಿ ದೈವ ಶಕ್ತಿಯು ಇರುತ್ತದೆ ಎನ್ನಲಾಗುವುದು. ವಾತಾವರಣದಲ್ಲಿ ಮನುಷ್ಯ ಗ್ರಹಿಸಲು ಸಾಧ್ಯವಾಗದಂತಹ ಸಂಗತಿಯನ್ನು ನಾಯಿ ಪರಿಶೀಲಿಸುತ್ತದೆ. ಅದು ಸಕಾರಾತ್ಮಕ ಶಕ್ತಿಗಳು ಹಾಗೂ ಋಣಾತ್ಮಕ ಶಕ್ತಿಗಳನ್ನು ಸಹ ಕಂಡು ಹಿಡಿಯುತ್ತದೆ. ನಾಯಿಯ ಓಡಾಟ, ಕೂಗು ಹಾಗೂ ಕೆಲವು ವರ್ತನೆಗಳನ್ನು ಆಧರಿಸಿ ಮನುಷ್ಯ ತನ್ನ ಜೀವನದಲ್ಲಿ ನಡೆಯುವ ಸಂಗತಿಗಳನ್ನು ಅರಿತುಕೊಳ್ಳುತ್ತಾನೆ.
ಪುರಾತನ ಕಾಲದಿಂದಲೂ ಜನರು ನಾಯಿಯೊಂದಿಗೆ ಕೆಲವು ಮೂಢನಂಬಿಕೆಗಳನ್ನು ಹೊಂದಿದ್ದಾರೆ. ಹಾಗಾದರೆ ಆ ಮೂಢ ನಂಬಿಕೆಗಳು ಯಾವವು? ಅವುಗಳ ಕೂಗು ಮತ್ತು ವರ್ತನೆಗಳನ್ನು ನಾವು ಹೇಗೆ ಗೃಹಿಸಬೇಕು? ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ
ಉಳಿಡುವ ಶ್ವಾನ—ಮನೆಗೆ ಅಪರಿಚಿತರು ಬಂದಾಗ ಹಾಗೂ ಯಾವುದಾದರೂ ಸಪ್ಪಳ ಉಂಟಾದಾಗ ನಾಯಿ ಬೊಗಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಮೆಲ್ಲಗೆ ಒಂದೇ ಸ್ವರದಲ್ಲಿ ಊಳಿಡುತ್ತದೆ. ಆ ರೀತಿಯ ಕೂಗು ಅನಿರೀಕ್ಷಿತವಾಗಿರುತ್ತದೆ. ನಾಯಿ ಆ ರೀತಿಯ ಧ್ವನಿಯಲ್ಲಿ ಕೂಗುತ್ತಿದೆ ಎಂದರೆ ಅದಕ್ಕೆ ಸತ್ತವರ ಆತ್ಮ ಕಾಣಿಸುತ್ತಿದೆ, ಪಿಶಾಚಿಗಳ ಸಂಚಾರವನ್ನು ಗ್ರಹಿಸಿದೆ ಅಥವಾ ಯಮ ದೂತನು ಬರುತ್ತಿದ್ದಾನೆ ಎನ್ನುವಂತಹ ಸಂದೇಶವನ್ನು ನೀಡುತ್ತದೆ.
ಶ್ವಾನದ ಮಲವನ್ನು ಮೆಟ್ಟುವುದು ಅದೃಷ್ಟ–ಬೀದಿ ನಾಯಿಗಳು ಹಾಗೂ ಸಾಕು ನಾಯಿಗಳು ಸಾಮಾನ್ಯವಾಗಿ ರಸ್ತೆ ಅಥವಾ ತೋಟಗಳಲ್ಲಿ ಮಲ ವಿಸರ್ಜನೆ ಮಾಡುವುದು ಸಹಜ. ಮನುಷ್ಯನು ತಿಳಿಯದೆ ನಾಯಿಯ ಮಲವನ್ನು ಮೆಟ್ಟಿದರೆ ಅದೊಂದು ಅಸಹ್ಯ ಅನುಭವವನ್ನು ಪಡೆದುಕೊಳ್ಳುತ್ತಾನೆ. ಆದರೆ ಅದು ಅವನಿಗೆ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಫ್ರೆಂಚ್ ಸಂಪ್ರದಾಯದಲ್ಲಿ ಎಡಗಾಲಿಗೆ ನಾಯಿಯ ಮಲ ಮೆಟ್ಟಿದರೆ ಅದು ಅತ್ಯಂತ ಅದೃಷ್ಟ. ನೀವು ಶುಭ ಸಂಗತಿಯನ್ನು ಖಂಡಿತವಾಗಿಯೂ ಪಡೆದುಕೊಳ್ಳುತ್ತೀರಿ. ಅದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಭಾವಿಸುವರು.
ದಂಪತಿಗಳ ಎದುರು ಶ್ವಾನ ಅಡ್ಡ ಬರುವುದು–ಯುರೋಪ್ ದೇಶದಲ್ಲಿ ದಂಪತಿಗಳು ಜೋಡಿಯಾಗಿ ಹೋಗುತ್ತಿರುವಾಗ ನಾಯಿಯು ಅವರ ಮುಂದೆ ಅಡ್ಡ ಹೋದರೆ ಅಥವಾ ಅವರ ಮಧ್ಯದಲ್ಲಿ ಸಾಗಿದರೆ ಅವರಿಬ್ಬರ ನಡುವೆ ಜಗಳ ಉಂಟಾಗುವುದೆಂದು ಹೇಳಲಲಾಗುತ್ತದೆ. ಅಥವಾ ಅವರ ವಿವಾಹದ ಸಂಬಂಧ ಅಪಾಯದಲ್ಲಿ ಸಿಲುಕಿಕೊಳ್ಳುವುದು ಎಂದು ಪರಿಗಣಿಸುತ್ತಾರೆ.
ಏಣಿಯ ಕೆಳಗೆ ಶ್ವಾನ ದ ನಡಿಗೆ—ಏಣಿಯ ಕೆಳಗೆ ನಾಯಿ ಓಡಾಡಿದರೆ ಅದೊಂದು ದುರಾದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಅದರ ಅ ವರ್ತನೆಯಿಂದ ದುರಾದೃಷ್ಟ ಎದುರಾಗುವುದು ಎನ್ನುವ ಸೂಚನೆಯನ್ನು ಪಡೆದುಕೊಳ್ಳಬಹುದು.
ಶ್ವಾನದ ವಿಚಿತ್ರ ಕೋಪ—ಕೆಲವೊಮ್ಮೆ ನಾವು ಸಾಕಿದ ನಾಯಿ ಮನೆಗೆ ಬಂದ ವ್ಯಕ್ತಿಗಳ ವಿರುದ್ಧ ಅಥವಾ ನಿಮ್ಮ ಮನೆಯ ಗೇಟ್ ಬಳಿ ಓಡಾಡುತ್ತಿರುವ ವ್ಯಕ್ತಿಯನ್ನು ಗಮನಿಸಿ ವಿಚಿತ್ರವಾಗಿ ಕೂಗುತ್ತಿದೆ ಎಂದಾದರೆ ಆ ವ್ಯಕ್ತಿಯಲ್ಲಿ ಕೆಟ್ಟ ಗುಣ ಅಥವಾ ಕ್ರೂರ ಬುದ್ಧಿ ಇದೆ ಎನ್ನುವುದನ್ನು ತಿಳಿಯಬಹುದು. ಅಂತಹ ಸಂದರ್ಭದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು.
ಕಪ್ಪು ಶ್ವಾನ ನಿಮ್ಮ ಎದುರಿಗೆ ಬಂದರೆ—ನಾಯಿಗಳಲ್ಲಿ ವಿವಿಧ ಬಗೆಯ ಜಾತಿ ಹಾಗೂ ಬಣ್ಣಗಳು ಇರುವುದನ್ನು ಕಾಣಬಹುದು. ಅಂತಹ ನಾಯಿಗಳಲ್ಲಿ ಕಪ್ಪು ಬಣ್ಣದ ನಾಯಿಯು ದುರಾದೃಷ್ಟವನ್ನು ಸೂಚಿಸುತ್ತದೆ. ಸಂಪೂರ್ಣವಾದ ಕಪ್ಪು ಬಣ್ಣದ ನಾಯಿಯು ನಮ್ಮ ಎದುರು ಅಡ್ಡವಾಗಿ ಸಾಗಿದರೆ ಅಥವಾ ಕಾಣಿಸಿಕೊಂಡರೆ ಅದು ಅತ್ಯಂತ ಕೆಟ್ಟ ಅದೃಷ್ಟವನ್ನು ಸೂಚಿಸುತ್ತದೆ. ಅಲ್ಲದೆ ಭವಿಷ್ಯದಲ್ಲಿ ಕೆಟ್ಟ ಸಂಗತಿಯನ್ನು ಶೀಘ್ರದಲ್ಲಿಯೇ ಕಾಣುತ್ತೇವೆ ಎನ್ನುವುದನ್ನು ತಿಳಿಸುತ್ತದೆ.
ಬಿಳಿ ಮಚ್ಚೆಯ ಶ್ವಾನ–ವ್ಯಾಪಾರ, ದೂರದ ಪ್ರಯಾಣ ಅಥವಾ ಶುಭ ಕಾರ್ಯಗಳಿಗೆ ಹೋಗುವಾಗ, ನಿಮ್ಮ ಹಾದಿಯಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಮಚ್ಚೆಯನ್ನು ಅಥವಾ ಚಿತ್ರವನ್ನು ಹೊಂದಿರುವ ನಾಯಿ ಎದುರಾದರೆ ಅದನ್ನು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ನೀವು ಅಂದುಕೊಂಡಿರುವ ಕೆಲಸ ಕಾರ್ಯಗಳು ಬಲು ಸುಲಭವಾಗಿ ನೆರವೇರುತ್ತವೆ.
ಹಣೆಯ ಮೇಲೆ ಬಿಳಿ ಚುಕ್ಕಿ–ನಾಯಿಯ ಮೈ ಬಣ್ಣ ಹಾಗೂ ಚಿತ್ರಗಳು ವಿಭಿನ್ನತೆಯನ್ನು ಹೊಂದಿರುತ್ತವೆ. ಯಾವ ನಾಯಿ ಹಣೆಯ ಮೇಲೆ ಬಿಳಿ ಬಣ್ಣದ ತಿಲಕ ಅಥವಾ ಚುಕ್ಕೆಯನ್ನು ಹೊಂದಿರುತ್ತದೆಯೋ ಅದು ಅತ್ಯಂತ ಅದೃಷ್ಟದ ನಾಯಿ ಎಂದು ಹೇಳುತ್ತಾರೆ. ಆ ನಾಯಿಯು ಸದಾ ಅದೃಷ್ಟವನ್ನು ಸೂಚಿಸುವುದು.
ಸಾಕಿದ ನಾಯಿಯ ವಿಶೇಷ ವರ್ತನೆ–ಮನೆಯಲ್ಲಿ ಅನಾರೋಗ್ಯದ ವ್ಯಕ್ತಿ ಇರುವಾಗ ನಾಯಿಯು ಗೇಟಿನ ಬಳಿ ಅಥವಾ ಮನೆಯ ಹೊರ ಭಾಗದಲ್ಲಿ ಅತಿಯಾಗಿ ಅಡ್ಡಾಡುತ್ತಾ ಕೂಗುತ್ತಿದ್ದರೆ, ಆ ವ್ಯಕ್ತಿಯು ಶೀಘ್ರದಲ್ಲಿಯೇ ಸಾಯುತ್ತಾನೆ ಎನ್ನುವುದನ್ನು ತಿಳಿಸುತ್ತದೆ. ಮನೆಯಲ್ಲಿ ಸಾಕಿದ ನಾಯಿಯು ಹುಟ್ಟಿದ ಮಗುವನ್ನು ನೆಕ್ಕಿದರೆ ಮಗುವಿಗೆ ಇರುವ ಆರೋಗ್ಯ ಸಮಸ್ಯೆಯು ಶೀಘ್ರದಲ್ಲಿಯೇ ಗುಣಮುಖವಾಗುವುದು.
ಕನಸಿನಲ್ಲಿ ಶ್ವಾನ–ನಿದ್ರೆಯಲ್ಲಿ ನಾವು ಕಾಣುವ ಕನಸುಗಳು ಸಹ ನಮ್ಮ ಭವಿಷ್ಯವನ್ನು ಹೇಳುತ್ತವೆ. ಕಪ್ಪು ನಾಯಿಯ ಕನಸು ಕಂಡರೆ ಅಥವಾ ಕಪ್ಪು ನಾಯಿಯ ಚಿತ್ರವನ್ನು ಬೆಂಕಿಯಲ್ಲಿ ಕಂಡರೆ ಸ್ನೇಹಿತನು ಹತ್ತಿರವಾಗುತ್ತಾನೆ ಎಂದರ್ಥ. ನಾಯಿ ನಿಮ್ಮ ಮನೆಗೆ ಹಿಂಬಾಲಿಸಿದಂತೆ ಕಂಡರೂ ಅದು ಅದೃಷ್ಟದ ಸೂಚನೆ.
ಬಿಳಿ ನಾಯಿಯ ದರ್ಶನ–ಬಿಳಿ ನಾಯಿಯನ್ನು ಊಟದ ಮೊದಲು ನೋಡಿದರೆ ಅದು ನಿಮಗೆ ಅದೃಷ್ಟದ ಸಂಕೇತ. ಮೂರು ಬಿಳಿ ನಾಯಿಯನ್ನು ಒಮ್ಮೆಲೇ ನೋಡಿದರೆ ಅದು ಅತ್ಯಂತ ಅದೃಷ್ಟದ ಸೂಚಕ ಎಂದು ಪರಿಗಣಿಸಲಾಗುತ್ತದೆ. ಸಭೆಗೆ ಹೋಗುವಾಗ ಅಥವಾ ಶುಭ ಕಾರ್ಯಕ್ಕೆ ತೆರಳಿದಾಗ ಬಿಳಿ ನಾಯಿಯ ದರ್ಶನ ಅಥವಾ ಅಡ್ಡ ದಾಟಿದರೆ ಅದು ಅದೃಷ್ಟವನ್ನು ಸಾರುತ್ತದೆ.
ಹವಾಮಾನದ ಶಕುನ ಹೇಳುವ ಶ್ವಾನ–ನಾಯಿಯು ಮೇಜಿನ ಕೆಳಗೆ ಅಥವಾ ಒಂದು ಮೂಲೆಯನ್ನು ಹುಡುಕಿ ಮಲಗಿದ್ದರೆ ಅದು ಕೆಟ್ಟ ಹವಾಮಾನದ ಸೂಚನೆಯನ್ನು ನೀಡುತ್ತದೆ. ಅದೇ ನಾಯಿ ಹುಲ್ಲು ಅಥವಾ ಗೀರುಗಳನ್ನು ತಿನ್ನುವುದು ಕಂಡುಬಂದರೆ ಶೀಘ್ರದಲ್ಲಿಯೇ ಮಳೆಯು ಸಂಭವಿಸುವುದು ಎನ್ನುವುದನ್ನು ತಿಳಿಸುತ್ತದೆ.
ನಾಯಿ ಮೂಕ ಪ್ರಾಣಿ ಆದರೂ ಅವುಗಳಲ್ಲಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸುವ ಗುಣವಿರುತ್ತದೆ. ಅಂತೆಯೇ ಕೆಟ್ಟ ಶಕ್ತಿಗಳು ಎದುರಾದಾಗ ಅದನ್ನು ಗುರುತಿಸಿ ಮನುಷ್ಯನಿಗೆ ಹೇಳುವ ಪ್ರಯತ್ನವನ್ನು ಮಾಡುತ್ತದೆ. ಇಂತಹ ಮುಗ್ಧ ಹಾಗೂ ನಂಬಿಗಸ್ತ ಪ್ರಾಣಿಯನ್ನು ಹಿಂಸಿಸದೆ ಪೋಷಿಸುವುದು ನಮ್ಮ ಜವಾಬ್ದಾರಿಯಾಗಬೇಕು ಅಷ್ಟೆ…….Kannada Astrology