ದೇಹದ ಮೇಲಿರುವ ಕೂದಲು ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಯಿರಿ!

ಮಹಿಳೆಯರು ತಮ್ಮ ತೋಳುಗಳಲ್ಲಿ ಕೂದಲನ್ನು ಹೊಂದಿದ್ದರೆ ಮಂಗಳಕರ: ಕೆಲವು ಮಹಿಳೆಯರು ತಮ್ಮ ತೋಳುಗಳಲ್ಲಿ ಕೂದಲನ್ನು ಹೊಂದಿರುತ್ತಾರೆ. ಅಂತಹ ಮಹಿಳೆಯರು ಅದೃಷ್ಟದಲ್ಲಿ ಬಹಳ ಶ್ರೀಮಂತರು ಎಂದು ನಂಬಲಾಗಿದೆ. ಅಲ್ಲದೆ, ಅಂತಹ ಮಹಿಳೆಯರು ಉತ್ಸಾಹದಿಂದ ಪ್ರತಿ ಕೆಲಸವನ್ನು ಪೂರ್ಣಗೊಳಿಸುತ್ತಾರೆ

ಸಾಮುದ್ರಿಕ ಶಾಸ್ತ್ರದ ಪ್ರಕಾರ, ನಮ್ಮ ದೇಹದ ರಚನೆ, ಮಚ್ಚೆಗಳು ಮತ್ತು ನಮ್ಮ ದೇಹದ ವಿವಿಧ ಭಾಗಗಳಲ್ಲಿರುವ ಕೂದಲು, ನಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತವೆ. ಸಾಮಾನ್ಯವಾಗಿ, ದೇಹದ ಪ್ರತಿಯೊಂದು ಭಾಗದಲ್ಲೂ ತಿಳಿ ಕೂದಲುಗಳು ಅಥವಾ ರೋಮ ಕಂಡುಬರುತ್ತದೆ. ಕೆಲವರ ಕಾಲಿನಲ್ಲಿ ಹೆಚ್ಚು ಕೂದಲು ಇದ್ದರೆ, ಕೆಲವರ ಕೈಯಲ್ಲಿ ಹೆಚ್ಚು ಕೂದಲು ಇರುತ್ತದೆ. ಪುರುಷರ ದೇಹದಲ್ಲಿ ಮಹಿಳೆಯರಿಗಿಂತ ಹೆಚ್ಚು ಕೂದಲು ಇರುತ್ತದೆ.

ಸಾಮುದ್ರಿಕ ಶಾಸ್ತ್ರದಲ್ಲಿ ಹೇಳುವಂತೆ ದೇಹದ ಈ ಭಾಗದಲ್ಲಿ ಕೂದಲಿದ್ದರೆ ಅದು ಶುಭ ಸೂಚನೆಯನ್ನು ನೀಡುತ್ತವೆಯಂತೆ, ಶ್ರೀಮಂತಿಕೆ, ನೆಮ್ಮದಿ, ಅದೃಷ್ಟವೆಲ್ಲವೂ ಕೈಹಿಡಿಯುತ್ತದೆ ಎಂದು ಉಲ್ಲೇಖಿಸಲಾಗಿದೆ.

ಮಹಿಳೆಯರು ತಮ್ಮ ತೋಳುಗಳಲ್ಲಿ ಕೂದಲನ್ನು ಹೊಂದಿದ್ದರೆ ಮಂಗಳಕರ: ಕೆಲವು ಮಹಿಳೆಯರು ತಮ್ಮ ತೋಳುಗಳಲ್ಲಿ ಕೂದಲನ್ನು ಹೊಂದಿರುತ್ತಾರೆ. ಅಂತಹ ಮಹಿಳೆಯರು ಅದೃಷ್ಟದಲ್ಲಿ ಬಹಳ ಶ್ರೀಮಂತರು ಎಂದು ನಂಬಲಾಗಿದೆ. ಅಲ್ಲದೆ, ಅಂತಹ ಮಹಿಳೆಯರು ಉತ್ಸಾಹದಿಂದ ಪ್ರತಿ ಕೆಲಸವನ್ನು ಪೂರ್ಣಗೊಳಿಸುತ್ತಾರೆ ಮತ್ತು ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡುವುದಿಲ್ಲವಂತೆ.

ಎದೆಯ ಮೇಲೆ ಕೂದಲು- ಎದೆಯ ಮೇಲೆ ಕೂದಲು ಇರುವವರು ಸಂತೃಪ್ತ ವ್ಯಕ್ತಿತ್ವದವರು ಎಂದು ಸಾಮುದ್ರಿಕ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ಜನರಿಗೆ ಎಂದಿಗೂ ಹಣದ ಕೊರತೆಯಿರುವುದಿಲ್ಲ.

ಬೆನ್ನಿನ ಮೇಲೆ ಕೂದಲು- ಸಾಮುದ್ರಿಕ ಶಾಸ್ತ್ರದ ಪ್ರಕಾರ ಬೆನ್ನಿನ ಭಾಗದಲ್ಲಿ ಕೂದಲು ಇದ್ದರೆ, ಅಂತಹ ಜನರು ಧೈರ್ಯಶಾಲಿಗಳಾಗಿರುತ್ತಾರೆ. ಈ ಜನರನ್ನು ನಿಷ್ಠಾವಂತ ಮತ್ತು ಜವಾಬ್ದಾರಿಯುತ ವ್ಯಕ್ತಿತ್ವದವರು ಎಂದು ಪರಿಗಣಿಸಲಾಗುತ್ತದೆ. ಬೆನ್ನಿನ ಮೇಲೆ ಕೂದಲು ಇರುವವರು ಸಂಪತ್ತಿನ ದೃಷ್ಟಿಯಿಂದಲೂ ತುಂಬಾ ಅದೃಷ್ಟವಂತರಂತೆ

ಕಿವಿಯ ಮೇಲೆ ಕೂದಲು: ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕಿವಿಯ ಮೇಲೆ ಅಥವಾ ಒಳಗೆ ಕೂದಲು ಇದ್ದರೆ ಬಹಳ ಅದೃಷ್ಟವಂತೆ. ಅವರಿಗೆ ಜೀವನದಲ್ಲಿ ಎಂದಿಗೂ ಹಣದ ಕೊರತೆ ಆಗುವುದಿಲ್ಲ ಎನ್ನಲಾಗುತ್ತದೆ.

Leave a Comment