ಅಮಾವಾಸ್ಯೆ ದಿನ ಮಾಡುವ ಲಕ್ಷ್ಮಿ ಕುಬೇರ ಯಂತ್ರ ಪೂಜೆ ಯಾವ ಶುಭ ಮುಹೂರ್ತದಲ್ಲಿ ಮಾಡಬೇಕು ಮತ್ತು ವಿಸರ್ಜನೆ ಮಾಡುವ ಬಗ್ಗೆ ತಿಳಿಸಿಕೊಡುತ್ತೇನೆ.2024 ಫೆಬ್ರವರಿ 9ನೆ ತಾರೀಕು ಶುಕ್ರವಾರ ಮೌನಿ ಅಮಾವಾಸ್ಯೆ ಇದೆ. ಅಮಾವಾಸ್ಯೆ ತಿಥಿ ಪ್ರಾರಂಭ ಆಗುವುದೆ 8 ಗಂಟೆ ನಂತರ ಹಾಗಾಗಿ 8 ಗಂಟೆ ನಂತರ ಸ್ನಾನ ಮಾಡಿಕೊಂಡು ಪೂಜಾ ಸಿದ್ಧತೆಯನ್ನು ಮಾಡಿಕೊಳ್ಳಬಹುದು. ಮಧ್ಯಾಹ್ನ 12:01 ನಿಮಿಷಕ್ಕೆ ಅಭಿಜಿನ್ ಮುಹೂರ್ತ ಶುರು ಆಗುತ್ತದೆ. ಈ ಸಮಯದಲ್ಲಿ ಪೂಜೆ ಮಾಡಿದರೆ ಒಳ್ಳೆಯದು. ಇನ್ನು ಸಂಜೆ ಸಮಯದಲ್ಲಿ ಕೂಡ ಕೈ ಕಾಲು ತೊಳೆದು ಪೂಜೆ ಮಾಡಿ ಲಕ್ಷ್ಮಿ ಸೂತ್ರ ಹೇಳಬೇಕು ಅಥವಾ ಕನಕದಾಸರ ಸೂತ್ರ ಹೇಳಬೇಕು.
ಕುಬೇರ ಮಂತ್ರವನ್ನು ಸ್ಥಾಪನೆ ಮಾಡಿ ಲಕ್ಷ್ಮಿ ಕುಬೇರ ಯಂತ್ರ ಪೂಜೆ ಮಾಡಿದ್ದರೆ ರಾತ್ರಿ 9:30 ಗಂಟೆ ನಂತರ ವಿಸರ್ಜನೆ ಮಾಡಬೇಕು. ಶುಕ್ರವಾರ ಅಮಾವಾಸ್ಯೆ ಇರುತ್ತದೆ ಆ ದಿನನೇ ವಿಸರ್ಜನೆ ಮಾಡಿ. ಯಾವ ರೀತಿ ಎಂದರೆ ಬಲ ಭಾಗದಿಂದ ಹೂವನ್ನು ತೆಗೆದು ಮೂರು ಬಾರಿ ವಿಗ್ರಹವನ್ನು ಅಲುಗಡಿಸಬೇಕು ಮತ್ತೆ ಪೂಜೆ ಗೆ ಇಟ್ಟಿರುವ ವಿಗ್ರಹವನ್ನು ಮೂರು ಬಾರಿ ಅಲುಗಡಿಸಬೇಕು. ಹೂವನ್ನು ಪಕ್ಕಕೆ ತೆಗೆದು ಇಟ್ಟುಕೊಳ್ಳಬೇಕು.ಪೂಜೆ ಗೆ ಕಳಸ ಇಟ್ಟಿದ್ದರೆ ಅದನ್ನು ಕದಲಿಸಿ. ಪ್ರತಿ ದಿನ ಪೂಜೆಗೆ ಇಟ್ಟಿರುವ ಕಳಸವನ್ನು ಕದಲಿಸಬೇಡಿ.
ಇನ್ನು ಲಕ್ಷ್ಮಿಯ ಪ್ರಿಯವಾದ ವಸ್ತುವನ್ನು ಗಂಟು ಕಟ್ಟಿ ಬಿರುವಿನಲ್ಲಿ ಇಡಬೇಕು. ಬರೆದಿರುವ ಕುಬೇರ ಯಂತ್ರವನ್ನು ಪರ್ಸ್ ನಲ್ಲಿ ಕ್ಯಾಶ್ ಬಾಕ್ಸ್ ನಲ್ಲಿ ಇಟ್ಟುಕೊಳ್ಳಬೇಕು. ಕಾಯಿನ್ ಕೂಡ ಅದರಲ್ಲಿನೆ ಇಟ್ಟುಕೊಳ್ಳಿ. ಯಾವುದೇ ಕಾರಣಕ್ಕೂ ಆ ಕಾಯಿನ್ ಅನ್ನು ಬಳಸಬಾರದು. ಪ್ರತಿ ಬಾರಿ ಪೂಜೆ ಮಾಡುವಾಗ ಅದೇ ಕಾಯಿನ್ ಅನ್ನು ಬಳಸಬೇಕು.
ತುಂಬಾ ಅಮಾವಾಸ್ಯೆ ಇದೆ ಎನ್ನುವವರು ಪ್ರತಿ ಅಮಾವಾಸ್ಯೆಗೂ ಕೂಡ ಸಂಜೆ ಗೊದೂಳಿ ಸಮಯದಲ್ಲಿ ಈ ರೀತಿ ಲಕ್ಷ್ಮಿ ಕುಬೇರ ಯಂತ್ರವನ್ನು ಪೂಜೆ ಮಾಡುವುದರಿಂದ ಹಣಕಾಸಿನ ಸಮಸ್ಸೆ ದೂರವಾಗುತ್ತದೆ. ಆದಷ್ಟು ಜಾಗ್ರತೆಯಿಂದ ಪೂಜೆಯನ್ನು ಮಾಡಿ.