3 ಪ್ರಕಾರದ ಆಹಾರ ತಿಂದರೆ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ ಶ್ರೀಕೃಷ್ಣ ಹೇಳಿದ ಮಾತು

ಮನುಷ್ಯರು ಯಾವ ಪ್ರಕಾರದ ಆಹಾರವನ್ನು ಸೇವಿಸಬೇಕು? ಊಟ ಮಾಡುವ ಸರಿಯಾದ ಪದ್ಧತಿ? ಸರಿಯಾದ ದಿಕ್ಕು? ಊಟ ಯಾವಾಗ ಮಾಡಬೇಕು?ಊಟ ಮಾಡುವ ಮುನ್ನ ಏನನ್ನು ಹೇಳಬೇಕು?

ದೇವ ಋಷಿ ನಾರದರು ಭಗವಂತನಾದ ಶ್ರೀ ಕೃಷ್ಣರನ್ನು ಭೇಟಿ ಆಗಲು ದ್ವಾರಕ ನಗರಕ್ಕೆ ಬರುತ್ತಾರೆ.ಆಗ ಕೃಷ್ಣರು ಅವರನ್ನು ಸ್ವಾಗತಿಸುತ್ತ ಒಂದು ಮಾತನ್ನು ಹೇಳುತ್ತಾರೆ.ಬನ್ನಿ ದೇವ ಋಷಿ ದ್ವಾರಕಕ್ಕೆ ನಿಮಗೆ ಸ್ವಾಗತ.ಯಾವ ಕಾರಣಕ್ಕಾಗಿ ಇಂದು ನೀವು ದ್ವಾರಕ ನಗರಕ್ಕೆ ನೀವು ಬಂದಿದ್ದೀರಾ. ಕಂಡಿತಾವಾಗಿ ನೀವು ಮಹತ್ವಪೂರ್ಣವಾದ ಸಮಾಚಾರವನ್ನು ತಂದಿರಬಹುದು. ಅದಕ್ಕೆ ದೇವ ಋಷಿ ಮನುಷ್ಯರು ಯಾವ ಪ್ರಕಾರದ ಆಹಾರವನ್ನು ಸೇವಿಸಬೇಕು..? ಯಾವ ರೀತಿಯಾದ ಆಹಾರವು ಮನುಷ್ಯನ ಆಯಸ್ಸನ್ನು ಹೆಚ್ಚು ಮಾಡುತ್ತದೆ. ಮತ್ತು ಯಾವ ಪ್ರಕಾರದ ಆಹಾರ ಮನುಷ್ಯನ ಆಯಸ್ಸನ್ನು ಕಡಿಮೆ ಮಾಡುತ್ತದೆ. ದಯವಿಟ್ಟು ಎಲ್ಲವನ್ನು ನೀವು ನಮಗೆ ತಿಳಿಸಿಕೋಡಿ ಎಂದು ಕೇಳಿದರು.

ಅದಕ್ಕೆ ಭಗವಂತ ಶ್ರೀ ಕೃಷ್ಣರು ಮನುಷ್ಯರು ಯಾವ ರೀತಿ ಆಹಾರ ಸೇವನೆ ಮಾಡುತ್ತಾರೋ ಅವರ ಸ್ವಭಾವ ಕೂಡ ಅದೇ ರೀತಿ ಇರುತ್ತದೇ.ಇದು ಪ್ರಾಚೀನ ಕಾಲದ ವಿಷಯವಾಗಿದೆ ಆ ಸಮಯದಲ್ಲಿ ಒಂದು ದಟ್ಟವಾದ ಕಾಡು ಇತ್ತು. ಈ ಕಾಡಿನ ಆಕಾರ 900 ಮೈಲಿ ದೊಡ್ಡದಾಗಿ ಇತ್ತು. ಅದರೆ ಈ ಕಾಡಿನಲ್ಲಿ ಯಾವ ಪಶು ಪಕ್ಷಿ ಇರುತ್ತಿರ್ಲಿಲ್ಲ. ಕೇವಲ ಮರ ಹಾಗು ವೃಕ್ಷ ಗಿಡಗಳು ಇದ್ದವು. ಯಾವುದೇ ಪಶುಗಳು ಆ ಕಾಡಿನ ಕಡೆ ಹೋಗುತ್ತಾ ಇರಲಿಲ್ಲ. ಅದರೆ ಆ ಕಾಡಿನ ಮಧ್ಯದ ಭಾಗದಲ್ಲಿ ಒಂದು ನದಿ ಇತ್ತು. ಕೇವಲ ಅದೇ ನದಿಯಲ್ಲಿ ಹಂಸ ಬಾತುಕೋಳಿ ಜೊತೆಗೆ ಬೇರೆ ಪಶು ಪಕ್ಷಿಗಳು ಇರುತ್ತಿದ್ದವು.

ಒಂದು ದಿನ ಅಗಾಸ್ಯ ಮುನಿಗಳು ಆ ನಡಿಯತ್ತ ಹಾದು ಹೋಗುತ್ತಿದ್ದರು ಆಗ ಅವರಿಗೆ ಒಂದು ವಿಚಿತ್ರವಾದ ವಿಷಯ ಕಂಡಿತ್ತು. ಆ ನದಿ ಹತ್ತಿರ ತುಂಬಾ ದೊಡ್ಡದಾಗಿ ಇರುವ ಆಶ್ರಮ ಇತ್ತು. ಇದು ತುಂಬಾ ಹಳೆಯದು ಆದರೂ ಸಹ ತುಂಬಾನೇ ಸುಂದರ ಪವಿತ್ರವಾಗಿ ಕಾಣುತ್ತಿತ್ತು. ಆ ಆಶ್ರಮದಲ್ಲಿ ಯಾವುದೇ ಸಾದು ಮತ್ತು ತಪಸ್ಸಿವಿಗಳು ಇರುತ್ತಿರಲಿಲ್ಲ. ಆ ಆಶ್ರಮವು ಪೂರ್ತಿಯಾಗಿ ಖಾಲಿ ಇತ್ತು. ಅಗಾಸ್ಯ ಮುನಿಗಳು ಒಂದು ರಾತ್ರಿ ಅಲ್ಲೇ ಉಳಿದುಕೊಳ್ಳುತ್ತಾರೆ. ಮುಂಜಾನೆ ಎದ್ದ ತಕ್ಷಣ ಅವರು ಆ ನದಿ ಹತ್ತಿರ ಹೋಗುತ್ತಾರೆ. ಆಗ ದಾರಿಯಲ್ಲಿ ಒಂದು ಮನುಷ್ಯನ ಶವ ಕಂಡಿತು. ಸತ್ತು ಹೋದ ಇವನ ಬಗ್ಗೆ ತಿಳಿಯಲು ಆತುರ ಆಯಿತು. ಆಗ ಆಕಾಶದಲ್ಲಿ ಅವರಿಗೆ ಒಂದು ದಿವ್ಯವಾದ ವಿಮಾನ ಕಂಡಿತು.

ಆ ದಿವ್ಯವಾದ ವಿಮಾನ ಆ ನದಿ ಹತ್ತಿರ ಬಂದು ನಿಲ್ಲುತ್ತದೆ.ಆ ವಿಮಾನದಿಂದ ಒಬ್ಬ ದಿವ್ಯ ಪುರುಷ ಕೆಳಗೆ ಬರುತ್ತಾನೆ.ಆಗ ಅವನು ನದಿ ಹತ್ತಿರ ಸ್ನಾನ ಮಾಡಲು ನದಿ ಹತ್ತಿರ ಹೋಗುತ್ತಾನೆ. ನಂತರ ಆ ಶವದ ಮಾಂಸವನ್ನು ತಿನ್ನಲು ಶುರು ಮಾಡುತ್ತಾನೆ.ಅವನು ಹೊಟ್ಟೆ ತುಂಬಾ ಆ ಮನುಷ್ಯನ ದೇಹವನ್ನು ತಿಂದು ಬಿಟ್ಟನು. ನಂತರ ವಿಮಾನದಲ್ಲಿ ಕುಳಿತು ಸ್ವರ್ಗದ ಕಡೆ ಹೋಗಲು ಶುರು ಮಾಡಿದ.ಆಗ ಅಗಾಸ್ಯ ಮುನಿಗಳು ಆ ಮನುಷ್ಯನನ್ನು ಕರೆಯುತ್ತಾರೆ. ಹೆ ದಿವ್ಯ ಪುರುಷನೆ ನೀನು ಯಾರು ನೀನು ದೇವತೆಯಂತೆ ಕಾಣುತ್ತಿಯ ಅದರೆ ನಿನ್ನ ಆಹಾರ ತುಂಬಾ ಕೆಟ್ಟದಾಗಿ ಇದೆ ಎಂದು ಹೇಳಿದರು

ಆಗ ಸ್ವರ್ಗ ನಿವಾಸಿ ಅಗಾಸ್ಯ ಮುನಿಯವರಿಗೆ ಕೈ ಮುಗಿದು ಒಂದು ಮಾತನ್ನು ಹೇಳುತ್ತಾನೆ. ಇದು ಹಿಂದಿನ ಕಥೆಯಾಗಿದೇ. ವಿಬರ್ವ ದೇಶದಲ್ಲಿ ನನ್ನ ಮಹಾನ್ ತಂದೆ ರಾಜ್ಯವನ್ನು ಹಾಳುತ್ತಿದ್ದರು. ಇವರು ವಾಸು ದೇವ ಹೆಸರಿನಲ್ಲಿ ಮೂರು ಲೋಕದಲ್ಲಿ ಪ್ರಸಿದ್ದಿಯಾಗಿದ್ದರು ಮತ್ತು ಪರಂ ಧಾರ್ಮಿಕ ವ್ಯಕ್ತಿಯು ಆಗಿದ್ದರು. ಇವರಿಗೆ ಇಬ್ಬರು ಹೆಂಡತಿಯರು ಇದ್ದರು. ಆ ಎರಡು ಹೆಂಡತಿಯಾರಿಗೆ ಒಂದೊದಾಗಿ ಎರಡು ಗಂಡು ಮಕ್ಕಳು ಹುಟ್ಟಿದರು. ನಾನು ಅವರಿಗಿಂತ ಎಲ್ಲಾ ದೊಡ್ಡ ಮಗನಾಗಿದ್ದೆ. ಜನರು ನನ್ನನ್ನು ಶೇತನ್ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು.

ನನ್ನ ಚಿಕ್ಕ ತಮ್ಮನ ಹೆಸರು ಸೂರತ್ ಆಗಿತ್ತು. ತಂದೆಯ ಮೃತ್ಯವಿನ ನಂತರ ನನ್ನ ವಿಬರ್ವ ದೇಶದ ರಾಜನ್ನಾಗಿ ಮಾಡಿದರು. ನಾನು ಅಲ್ಲಿ ರಾಜ್ಯವನ್ನು ಅಳಲು ಶುರುಮಾಡಿದೆ. ರಾಜ್ಯವನ್ನು ಹಾಳುತ್ತ ನನಗೆ ಸಾವಿರಾರು ವರ್ಷ ಕಳೆದವು. ಒಂದು ದಿನ ನನಗೆ ವೈರಾಗ್ಯ ಆಯಿತು. ನಾನು ರಾಜ್ಯವನ್ನು ತ್ಯಾಗ ಮಾಡುವ ನಿರ್ಧಾರವನ್ನು ತೆಗೆದುಕೊಂಡನು. ಮೃತ್ಯು ಬರುವ ತನಕ ತಪಾಸ್ಸನ್ನು ಮಾಡುವ ನಿರ್ಧಾರ ಮಾಡಿಕೊಂಡು ಕಾಡಿನಲ್ಲಿ ವಾಸ ಮಾಡಲು ಹೊರಟೆನು. ರಾಜ್ಯವನ್ನು ನನ್ನ ಚಿಕ್ಕ ತಮ್ಮನಿಗೆ ವಹಿಸಿಕೊಟ್ಟೆ.

ನಂತರ ಈ ನದಿ ಹತ್ತಿರ ಬಂದು ಕಠಿಣವಾದ ತಪಸ್ಸು ಮಾಡಲು ಪ್ರಾರಂಭ ಮಾಡಿದೆನು. 80 ಸಾವಿರ ವರ್ಷ ಈ ಕಾಡಿನಲ್ಲಿ ತಪಸ್ಸು ಮಾಡಿದೆ. ಅದರ ಪ್ರಭಾವದಿಂದ ನನಗೆ ಬ್ರಹ್ಮ ಲೋಕದ ಪ್ರಾಪ್ತಿಯಾಯಿತು. ಬ್ರಹ್ಮ ಲೋಕಕ್ಕೆ ಹೋದರು ನನಗೆ ಹಸಿವು ಬಾಯಾರಿಕೆ ಆಗ ತೊಡಗಿತು. ಆಗ ಬ್ರಹ್ಮ ದೇವರನ್ನು ಒಂದು ಮಾತನ್ನು ಕೇಳಿದೆ. ಹೆ ದೇವ ಬ್ರಹ್ಮ ಲೋಕದಲ್ಲಿ ಯಾವುದೇ ಪ್ರಾಣಿಗಳಿಗೆ ಹಸಿವು ಮತ್ತು ಬಾಯಾರಿಕೆ ಆಗುವುದಿಲ್ಲ. ಅದರೆ ನನಗೆ ಯಾಕೆ ಹಸಿವು ಆಗುತ್ತಿದೆ ಎಂದು ಕೇಳಿದರು.

ಆಗ ಬ್ರಹ್ಮನು ಭೂಮಿ ಮೇಲೆ ವ್ಯಕ್ತಿಯು ಧಾನ ಧರ್ಮ ಮಾಡಿದ ನಂತರದಲ್ಲಿ ಈ ಲೋಕದಲ್ಲಿ ಬಾಯಾರಿಕೆ ಮತ್ತು ಹಸಿವಿನಿಂದ ಮುಕ್ತಿ ಪಡೆದುಕೊಳ್ಳುತ್ತಾರೆ.ಅದರೆ ಜೀವನ ಕಾಲದಲ್ಲಿ ನೀನು ಯಾವುದೇ ಧಾನ ಧರ್ಮ ಮಾಡಲಿಲ್ಲ. ಭಿಕ್ಷುಕರಿಗೆ ಭಿಕ್ಷೆಯನ್ನು ಸಹ ಕೊಡಲಿಲ್ಲ. ನೀನು ಅರಮನೆಯಲ್ಲಿ ಇದ್ದ ನಂತರವು ದ್ವಾರದ ಬಳಿ ಬಂದ ಅತಿಥಿಗಳಿಗೆ ಆಹಾರವನ್ನು ನೀಡಲಿಲ್ಲ. ನೀನು ಯಾವತ್ತಿಗೂ ಚೆನ್ನಾಗಿ ಇರುವ ಆಹಾರವನ್ನು ಸೇವಿಸಿದ್ದೀಯ. ಸ್ನಾನವನ್ನು ಮಾಡದೇ ಊಟವನ್ನು ಮಾಡುತ್ತಿದ್ದೆ.

ಊಟ ಮಾಡುವ ಮೊದಲು ನೀವು ಈಶ್ವರನಿಗೆ ಧನ್ಯವಾದಗಳನ್ನು ಹೇಳಲಿಲ್ಲ.ಇದೆ ಕಾರಣಕ್ಕೆ ಈ ಪಾಪವು ನಿನ್ನನು ಅಂಟಿದೆ.ಅದರಿಂದ ನಿನಗೆ ಒಂದೇ ಉಪಾಯ ಇರೋದು ಆ ನದಿ ಹತ್ತಿರ ನಿನ್ನ ಶವ ಬಿದ್ದಿದೆ ನೀನು ಅದರ ಮಾಂಸವನ್ನು ತಿಂದು ನಿನ್ನ ಹಸಿವನ್ನು ನಿಗಿಸಿಕೋ.ಆಗ ರಾಜ ನನ್ನ ಶರೀರವನ್ನು ನಾನು ತಿಂದ ನಂತರ ನನಗೆ ಏನಾಗುತ್ತದೆ. ಆಗ ಬ್ರಹ್ಮ ದೇವ ಪ್ರತಿದಿನ ನಿನ್ನ ಶವ ಮರಳಿ ಬರುತ್ತದೆ. ಪ್ರತಿದಿನ ನೀನು ಅದನ್ನು ಸೇವನೆ ಮಾಡಿದರೆ ನಿನಗೆ ಹಸಿವು ಆಗುವುದಿಲ್ಲ. ಇದೆ ರೀತಿ 100 ವರ್ಷ ಕಳೆದ ನಂತರ ಮಹಾ ಋಷಿ ಅಗಾಸ್ಯ ಅವರು ಬರುತ್ತಾರೆ ಅವರ ಮೂಲಕವೆ ನೀನು ನಿನ್ನ ಪಾಪದಿಂದ ಮುಕ್ತಿ ಪಡೆದುಕೊಳ್ಳುವೆ ಎಂದು ಹೇಳುತ್ತಾರೆ. ಇದನ್ನು ಅಗಾಸ್ಯ ಋಷಿಗೆ ಹೇಳುತ್ತಾನೆ.

ಹೆ ಗುರುಗಳೇ ನನ್ನ ಶರೀರ ಯಾವತ್ತು ನಷ್ಟ ಆಗುವುದಿಲ್ಲ. 100 ವರ್ಷ ಕಳೆಯಿತು ನಾನು ಅಗಾಸ್ಯ ಮುನಿಗಳಿಗೆ ಕಾಯುತ್ತಿದ್ದೇನೆ. ಆಗ ಮಹರ್ಷಿ ಅವರು ಒಂದು ಮಾತನ್ನು ಹೇಳುತ್ತಾರೆ. ನಾನೆ ಅಗಾಸ್ಯ ಮುನಿ ನಾನು ನಿಮಗೆ ಹೇಗೆ ಸಹಾಯ ಮಾಡಲಿ ಎಂದು ಕೇಳುತ್ತಾರೆ. ಆಗ ರಾಜ ಮಹರ್ಷಿ ಅವರಿಗೆ ಕಾಲಿಗೆ ಬಿದ್ದು ಹೇಗೆ ಗುರುಗಳೇ ನನನ್ನು ಈ ಕೆಟ್ಟ ಆಹಾರದಿಂದ ಮುಕ್ತಿಕೋಡಿ ಎಂದು ಕೇಳಿಕೊಳ್ಳುತ್ತನೇ. ಇದರಿಂದ ಅಕ್ಷಯ ಲೋಕದ ಪ್ರಾಪ್ತಿಯಾಗುತ್ತದೆ.

ನಾನು ಆಭರಣವನ್ನು ನಿಮಗೆ ಕೊಡುತ್ತೇನೆ ದಯವಿಟ್ಟು ನನಗೆ ಸಹಾಯ ಮಾಡಿ ಎಂದು ದುಃಖದಿಂದ ಕೇಳಿ ತನ್ನ ಆಭರಣವನ್ನು ಅಗಸ್ತ್ಯ ಮಹರ್ಷಿಗೆ ಕೊಡುತ್ತಾನೆ. ತಕ್ಷಣವೇ ಮೃತ ಶರೀರ ಮಾಯವಾಗಿ ಅವರ ಪಾಪ ಎಲ್ಲಾ ಮುಕ್ತಿಯಾಗುತ್ತದೆ. ನಂತರ ಮಹರ್ಷಿ ಬಳಿ ಆದೇಶ ಪಡೆದುಕೊಂಡು ಬಂದು ಬ್ರಹ್ಮ ವಿಮಾನದಲ್ಲಿ ಕೂತು ಬ್ರಹ್ಮ ಲೋಕಕ್ಕೆ ಹೋಗುತ್ತಾರೆ.

ಭಗವಂತರಾದ ಕೃಷ್ಣರು ದೇವ ಋಷಿಗೆ ಹೇಳುತ್ತಾರೆ ಈ ಪ್ರಕಾರ ಉತ್ತಮವಾದ ಆಹಾರವನ್ನು ಸೇವಿಸಿದ ನಂತರವೂ ವಿಭಾರ್ಗ ದೇಶದ ಮಹಾರಾಜರಿಗೆ ಬ್ರಹ್ಮ ಲೋಕದಲ್ಲಿ ಇದ್ದ ನಂತರವು ತೃಪ್ತಿಯು ಸಿಗಲಿಲ್ಲ. ಮರಳಿ ಪ್ರತಿ ಲೋಕಕ್ಕೆ ಬಂದು ಸ್ವತಃ ತನ್ನದೇ ಶರೀರದ ಮಾಂಸ ಸೇವನೆ ಮಾಡಬೇಕಾಗಿ ಬಂತು. ಹೆ ದೇವ ಋಷಿ ನಾನು ನಿಮಗೆ ಆಹಾರದ ನಿಯಮಗಳನ್ನು ತಿಳಿಸಿಕೊಡುತ್ತೇನೆ. ನೀವು ಗಮನವಿಟ್ಟು ಕೇಳಿರಿ.

  • ಊಟ ಮೊಡುವ ಮೊದಲು ಸ್ವಲ್ಪ ಆಹಾರವನ್ನು ನೆಲದ ಮೇಲೆ ಇಡಬೇಕು. ಯಾಕಂದ್ರೆ ದೇವತೆಗಳು ಪಶು ಪಕ್ಷಿ ಸರ್ಪಗಳು ಅವರಿಗೆ ಕಷ್ಟದಲ್ಲಿ ಇರುತ್ತಾರೆ. ಅವರಿಗೆ ಅನ್ನದ ಪ್ರಾಪ್ತಿಯಾಗುತ್ತದೆ. ಯಾರಾದರೂ ಊಟ ಮಾಡುವ ಸಮಯದಲ್ಲಿ ಬಂದಾಗ ಅವರನ್ನು ಕರೆದು ಊಟವನ್ನು ಮಾಡಿಸಿ ಕಳುಹಿಸಿ. ಯಾವ ಅತಿಥಿಗಳು ನಿರಾಶವಾಗಿ ಹೋಗುತ್ತಾರೋ ಅವರು ತಮ್ಮ ಪಾಪವನ್ನು ಕೊಟ್ಟು ನಿಮ್ಮ ಶುಭ ಕರ್ಮಗಳನ್ನು ತೆಗೆದು ಕೊಂಡು ಹೋಗುತ್ತರೆ.
  • ಮನೆಯಲ್ಲಿ ವೃದ್ದರು ಗರ್ಭಿಣಿಯರು ಮಕ್ಕಳು ಊಟ ಮಾಡಿದ ಬಳಿಕ ಆಹಾರವನ್ನು ಸೇವನೆ ಮಾಡಬೇಕು.
  • ಸ್ನಾನ ಮಾಡದೇ ಯಾವುದೇ ಕಾರಣಕ್ಕೂ ಭೋಜನವನ್ನು ಮಾಡಬಾರದು.
  • ಮಕ್ಕಳ ಹಾಗು ವೃದ್ಧರ ಭಾಗದ ಊಟ ಸೇವನೆ ಮಾಡಿದಾರೆ ಅದು ವಿಷಕ್ಕೆ ಸಮಾನ ಆಗುತ್ತದೆ.
  • ಯಾರು ಧಾನ ಮಾಡದೇ ಊಟವನ್ನು ಮಾಡುತ್ತರೊ ಅವರ ಊಟ ಕೂಡ ವಿಷಕ್ಕೆ ಸಮಾನ ಆಗುತ್ತದೇ.
  • ಯಾವಾಗಲು ಏಕಾಗ್ರತೆಯಿಂದ ಕುಳಿತು ಊಟವನ್ನು ಮಾಡಬೇಕು.ಮೊದಲು ಸಿಹಿ ಹಾಗು ನಂತರ ಹುಳಿ ಖಾರದ ಊಟವನ್ನು ಮಾಡಬೇಕು. ಮೊದಲು ಊಟ ಮಾಡುವಾಗ 3 ತುತ್ತುಗಳನ್ನು ಮೌನವಾಗಿ ಸೇವಿಸಬೇಕು. ಈ ರೀತಿ ಮಾಡುವುದರಿಂದ ತಕ್ಷಣವೇ ವ್ಯಕ್ತಿಯ ಎಲ್ಲಾ ಪಾಪಗಳು ನಷ್ಟ ಆಗುತ್ತವೆ. ಭಗವಂತನ ಕೃಪೆಯಿಂದ ಅವರ ಜೀವನದಲ್ಲಿ ಯಾವತ್ತೂ ಅನ್ನದ ಕೊರತೆ ಆಗುವುದಿಲ್ಲ.
  • ಪೂರ್ವ ದಿಕ್ಕಿಗೆ ಕುಳಿತು ಊಟ ಮಾಡಿದರೆ ವ್ಯಕ್ತಿಯು ರೋಗ ಹಾಗು ಮಾನಸಿಕ ಒತ್ತಡದಿಂದ ಮುಕ್ತಿಯನ್ನು ಪಡೆಯುತ್ತಾನೆ. ಯಾವುದೇ ಕಾರಣಕ್ಕೂ ದಕ್ಷಿಣ ಕಡೆ ಕುಳಿತು ಊಟವನ್ನು ಮಾಡಬಾರದು. ಇದು ಮೃತ್ಯು ದಿಕ್ಕು ಆಗಿದೆ. ಈ ದಿಕ್ಕಿಗೆ ಕುಳಿತು ಊಟ ಮಾಡಿದರೆ ಆಯಸ್ಸು ಕಡಿಮೆ ಆಗುತ್ತದೆ.
  • ಒಡೆದು ಹೋದ ಪಾತ್ರೆಗಳಿಂದ ಊಟವನ್ನು ಮಾಡಬಾರದು.ಇವು ದುರ್ಬಗ್ಯವನ್ನು ತಂದುಕೊಡುತ್ತದೆ.
  • ಏಕಾದಶಿ ದಿನ ಯಾವುದೇ ಕಾರಣಕ್ಕೂ ಮಾಂಸಹಾರವನ್ನು ಸೇವನೆ ಮಾಡಬಾರದು.
  • ಯಾವುದೇ ಕಾರಣಕ್ಕೂ ಆಹಾರವನ್ನು ಎಸೆಯಬಾರದು. ಹಾಗಾಗಿ ಅವಶ್ಯಕತೆ ಇದ್ದಷ್ಟು ಆಹಾರವನ್ನು ಹಾಕಿಸಿಕೊಂಡು ಊಟ ಮಾಡಬೇಕು.
  • ಹಾಸಿಗೆ ಮೇಲೆ ಕುಳಿತು ಊಟ ಮಾಡಬಾರದು
  • ಊಟ ಮಾಡಿದ ತಟ್ಟೆಯಲ್ಲಿ ಕೈ ತೊಳೆಯಬಾರದು
  • ಊಟ ಮಾಡುವಾಗ ಯಾರಾದರೂ ತಟ್ಟೆಯನ್ನು ದಾಟಿದರೆ ಅಂತಹ ಆಹಾರವನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು. ಇದರಿಂದ ಮನುಷ್ಯನ ಆಯಸ್ಸು ಕಡಿಮೆ ಆಗುತ್ತದೆ.
  • ಸಿಟ್ಟು ಮಾಡಿಕೊಂಡು ಆಹಾರವನ್ನು ಸೇವನೆ ಮಾಡಬಾರದು

Leave a Comment