ಯಾವುದೇ ವ್ಯಕ್ತಿಯ ಹೊಕ್ಕುಳಿನ ಆಕಾರವನ್ನು ಗಮನಿಸಿ ಆತನ/ಆಕೆಯ ವ್ಯಕ್ತಿತ್ವವನ್ನು ಕಂಡುಕೊಳ್ಳಬಹುದು. ಇದರ ಆಕಾರ ಕೇವಲ ವ್ಯಕ್ತಿತ್ವದ ಗುಟ್ಟುಗಳನ್ನು ಮಾತ್ರವಲ್ಲ ಕೆಲವು ಗುಟ್ಟಿನ ಸಂಗತಿಗಳನ್ನೂ ಬಯಲಿಗೆಳೆಯುತ್ತದೆ. ಹೊಟ್ಟೆಯ ಹೊಕ್ಕಳು: ನೀವು ತಿಳಿದಿರದ ಅಮೋಘ ಸಂಗತಿಗಳು ಹೀಗೆ ಹೊಕ್ಕುಳ ಬಗ್ಗೆ ಅರಿಯುವುದು ಸುಮ್ಮನೇ ಕಾಲಕಳೆಯುವ ಸಂಗತಿಯಲ್ಲ, ಬದಲಿಗೆ ಆಳವಾಗಿ ಮಾಡಬೇಕಾದ ಅಧ್ಯಯನ ವಿಷಯವಾಗಿದೆ. ನಿಮ್ಮ ಹೊಕ್ಕುಳನ್ನು ನೋಡಿ ಯಾವ ತೀರ್ಮಾನಕ್ಕೆ ಬರುತ್ತಾರೆ ಎಂಬುದನ್ನು ನೋಡೋಣ….
ವೃತ್ತಾಕಾರದ ಹೊಕ್ಕಳು
ಒಂದು ವೇಳೆ ನಿಮ್ಮ ಹೊಕ್ಕಳು ಅಪ್ಪಟ ವೃತ್ತಾಕಾರದಲ್ಲಿದ್ದು ಕೇಂದ್ರದಲ್ಲಿ ಆಳವಾಗಿದ್ದರೆ ನೀವು ಆಶಾವಾದಿಗಳು ಎಂದು ತಿಳಿಯಬಹುದು. ಯಾವುದೇ ವಿಷಯದಲ್ಲಿ ನೀವು ಧನಾತ್ಮಕ ಅಂಶಗಳನ್ನೇ ಹೆಚ್ಚಾಗಿ ಗಮನಿಸುತ್ತೀರಿ. ಉದಾಹರಣೆಗೆ ನೀವು ಕಪ್ಪು ಮೋಡವನ್ನು ನೋಡಿದಾಗ ಇದರಲ್ಲಿಯೂ ಬೆಳ್ಳಿಯಂಚನ್ನು ಗುರುತಿಸಿ ಇತರರ ಗಮನವನ್ನು ಸೆಳೆಯುತ್ತೀರಿ. ನಿಮ್ಮ ಮನಸ್ಸಿನ ಭಾವನೆಗಳನ್ನು ಸ್ಪಷ್ಟವಾಗಿ ಇತರರಿಗೆ ಹೇಳಿಕೊಳ್ಳುವ ಹಾಗೂ ಬಾಂಧವ್ಯಗಳನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಕಲೆ ನಿಮಗೆ ಸಿದ್ಧಿಸಿರುತ್ತದೆ. ಇದರ ಹೊರತಾಗಿ ನೀವು ಸಂತೋಷವಾಗಿ ಜೀವನವನ್ನು ಅನುಭವಿಸುವ ವ್ಯಕ್ತಿಯಾಗಿರುತ್ತೀರಿ.
ದೊಡ್ಡ ಹೊಕ್ಕಳು
ಒಂದು ವೇಳೆ ನಿಮ್ಮ ಹೊಕ್ಕಳು ಸಾಮಾನ್ಯ ಗಾತ್ರಕ್ಕಿಂತಲೂ ತೀರಾ ದೊಡ್ಡದು ಎನಿಸಿದರೆ ಇದು ನೀವು ವಿಶಾಲಹೃದಯಿಯಾಗಿರುವ ಸೂಚನೆಯಾಗಿದೆ. ನಿಮ್ಮ ಉದಾರತೆಗೆ ಮಿತಿಯೇ ಇರುವುದಿಲ್ಲ. ವಯಸ್ಸು ಹೆಚ್ಚುತ್ತಿದ್ದಂತೆಯೇ ನಿಮ್ಮ ಬಾಂಧವ್ಯ ಎಲ್ಲರೊಂದಿಗೆ ಉತ್ತಮವಾಗುತ್ತಾ ಹೋಗುತ್ತದೆ. ಇದರ ಹೊರತಾಗಿ ವಯಸ್ಸಿನೊಂದಿಗೇ ಹೆಚ್ಚು ಹೆಚ್ಚು ವಿವೇಕಯುತರಾಗುತ್ತಾ ಹೋಗುತ್ತೀರಿ ಹಾಗೂ ಜನರನ್ನು ಸಂಭಾಳಿಸುವ ಕಲೆ ನಿಮಗೆ ಸಿದ್ಧಿಸಿರುತ್ತದೆ.
ಅತಿ ಆಳವಿಲ್ಲದ ಹೊಕ್ಕಳು
ಒಂದು ವೇಳೆ ನಿಮ್ಮ ಹೊಕ್ಕಳು ಚಿಕ್ಕದಾಗಿದ್ದು ಆಳವಿಲ್ಲದೇ ಇದ್ದರೆ ಇದು ನಿಮ್ಮ ವ್ಯಕ್ತಿತ್ವದ ಇನ್ನೊಂದು ಪಾರ್ಶ್ವವನ್ನು ತೋರುತ್ತದೆ. ನೀವು ಗುಟ್ಟುಗಳನ್ನು ಗುಟ್ಟುಗಳಾಗಿಯೇ ಕಾಪಾಡುವ ವ್ಯಕ್ತಿಯಾಗಿದ್ದೀರಿ. ವಿಶೇಷವಾಗಿ ಎದುರಿನವರ ಋಣಾತ್ಮಕ ಅಂಶಗಳನ್ನು ಹಾಗೂ ಕೊರತೆಗಳನ್ನು ಗುರುತಿಸುವ ಕಲೆ ನಿಮಗೆ ಸಿದ್ಧಿಸಿರುತ್ತದೆ. ಆದರೆ ನಿಮ್ಮ ಬಗ್ಗೆ ನಿಗೂಢತೆಯನ್ನು ಮಾತ್ರ ಉಳಿಸಿಕೊಂಡಿರುತ್ತೀರಿ ಹಾಗೂ ಇತರರಿಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿಸುತ್ತೀರಿ.
ಉಬ್ಬಿಕೊಂಡಿರುವ ಹೊಕ್ಕಳು
ಒಂದು ವೇಳೆ ನಿಮ್ಮ ಹೊಕ್ಕಳು ನಡುವಿನಲ್ಲಿ ಉಬ್ಬಿಕೊಂಡಿದ್ದಂತಿದ್ದರೆ ಇದು ನೀವು ಪ್ರಬಲ ಆತ್ಮಶಕ್ತಿಯುಳ್ಳವರು ಎಂದು ತಿಳಿದುಕೊಳ್ಳಬಹುದು. ನೀವು ಹಠಮಾರಿ ವ್ಯಕ್ತಿತ್ವ ಹೊಂದಿರುತ್ತೀರಿ. ಆದರೆ ಯಾರಿಗೂ ತಿಳಿಯದ ಇನ್ನೊಂದು ವಿಷಯವೆಂದರೆ ನೀವು ನಿಮ್ಮ ಅಭಿಪ್ರಾಯವೇ ಸರಿ ಎಂದು ವಾದಿಸುವ ವ್ಯಕ್ತಿಯೂ ಆಗಿರುತ್ತೀರಿ. ನಿಮಗೆ ಪ್ರೀತಿ ಅಷ್ಟು ಸುಲಭವಾಗಿ ಎಟುಕದ ವಿಷಯವಾಗಿದ್ದು ನಿಮ್ಮ ಮನೋಭಾವಕ್ಕೆ ತಕ್ಕ ಸಂಗಾತಿ ದೊರಕಲು ಕೊಂಚ ಹೆಚ್ಚು ಕಾಲ ಪಡೆಯಬಹುದು. ಆದರೆ ಒಮ್ಮೆ ಸಂಗಾತಿ ದೊರಕಿದ ಬಳಿಕ ನೀವು ಅನುರೂಪದ ಜೋಡಿಯಾಗುತ್ತೀರಿ.
ಮೇಲ್ಮುಖವಾಗಿರುವ ಹೊಕ್ಕಳು
ಹೊಕ್ಕಳಿನ ಒಳಗೊಂದು ಪುಟ್ಟ ಗೋಲಿ ಇದ್ದಂತೆ ನಿಮ್ಮ ಹೊಕ್ಕಳು ಇದ್ದರೆ ಇದು ಆದರ್ಶವಾದ ಹೊಕ್ಕಳು ಎಂದು ಕರೆಯಬಹುದು. ಏಕೆಂಅದ್ರೆ ಇದು ಆರೋಗ್ಯಕರ ಹೆರಿಗೆ ಹಾಗೂ ಆರೋಗ್ಯಕರ ಮನಸ್ಸಿನ ಲಕ್ಷಣವೂ ಆಗಿದೆ. ನೀವು ಸದಾ ಹಸನ್ಮುಖಿಗಳಾಗಿದ್ದು ಸದಾ ಚಟುವಟಿಕೆಯಿಂದ ಪುಟಿಯುತ್ತಿರುತ್ತೀರಿ ಹಾಗೂ ಮಾಡುವ ಎಲ್ಲಾ ಕೆಲಸದಲ್ಲಿ ಆನಂದ ಅನುಭವಿಸುವಿರಿ. ನಿಮ್ಮ ಮನೋಭಾವ ಸುತ್ತಮುತ್ತಲ ಎಲ್ಲರ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಮನಸ್ಸಿನಲ್ಲಿ ದೊಡ್ಡದಾದ ಗುರಿಯನ್ನಿರಿಸಿಕೊಂಡಿದ್ದು ಜೀವನದಲ್ಲಿ ಯಶಸ್ಸು ಪಡೆಯಲು ಸದಾ ಶ್ರಮಿಸುತ್ತಿರುತ್ತೀರಿ.
ಒಳಮುಖವಾಗಿರುವ ಹೊಕ್ಕಳು
ಒಳಗಿನ ಭಾಗವನ್ನು ಬಲವಂತವಾಗಿ ತೆಗೆದಿದ್ದು ಅಂಚುಗಳು ಒಳಮುಖ ಬಾಗಿದಂತಿದ್ದರೆ ಇದು ನಿಮ್ಮಲ್ಲಿ ಶಕ್ತಿಯ ಕೊರತೆ ಇರುವುದನ್ನು ತೋರುತ್ತದೆ. ನಿಮಗೆ ದೈಹಿಕ ಶ್ರಮದ ಕೆಲಸ ಕೊಂಚವೂ ಇಷ್ಟವಿಲ್ಲದ್ದಾಗಿದ್ದು ಮೆದುಳಿನ ಆಧಾರಿತ ಕೆಲಸ ಹಾಗೂ ಆಟಗಳು ಹೆಚ್ಚು ಇಷ್ಟವಾಗುತ್ತವೆ. ಇತರರು ನಿಮ್ಮನ್ನು ಸೋಮಾರಿ ಎಂದು ಕರೆದರೂ ಸಂದರ್ಭಕ್ಕೆ ಸರಿಯಾಗಿ ನೀವು ಬುದ್ದಿವಂತಿಕೆಯಿಂದ ಕೈಗೊಳ್ಳುವ ಕಾರ್ಯ ಶ್ಲಾಘನೆಗೊಳಗಾಗುತ್ತದೆ.
ಅಂಡಾಕಾರದ ಹೊಕ್ಕಳು
ಒಂದು ವೇಳೆ ನಿಮ್ಮ ಹೊಕ್ಕಳು ಅಂಡಾಕೃತಿಯಲ್ಲಿದ್ದರೆ ಇದು ನಿಮ್ಮ ಚಟುವಟಿಕೆ ಅತಿ ಹೆಚ್ಚು ಕ್ರಿಯಾತ್ಮಕವಾಗಿರುವುದು ಹಾಗೂ ಅತಿಹೆಚ್ಚು ಸಂವೇದಿಯಾಗಿರುವುದನ್ನು ಸೂಚಿಸುತ್ತದೆ. ನೀವು ಅವಿಶ್ರಾಂತರಾಗಿ ಚಟುವಟಿಕೆಯಲ್ಲಿರುವುದು ಹಾಗೂ ಏನಾದರೂ ಹೊಸದನ್ನು ಮಾಡುತ್ತಲೇ ಇರುವ ಪ್ರವೃತ್ತಿಯವರಾಗಿರುತ್ತೀರಿ. ಇನ್ನೊಂದು ಕಡೆಯಲ್ಲಿ ನೀವು ತೀರಾ ಸೂಕ್ಷ್ಮಸಂವೇದಿಗಳಾಗಿರುತ್ತೀರಿ ಹಾಗೂ ಸುಲಭವಾಗಿ ಭಾವನೆಗಳಲ್ಲಿ ಕೊಚ್ಚಿ ಹೋಗುತ್ತೀರಿ ಹಾಗೂ ಸುಲಭವಾಗಿ ಮನಸ್ಸಿಗೆ ಹೆಚ್ಚಿಕೊಂಡು ನೊಂದುಕೊಳ್ಳುವ ಮನಸ್ಸಿನವರೂ ಆಗಿರುತ್ತೀರಿ. ಅಗಲವಾದ ಹೊಕ್ಕಳು ಈ ಬಗೆಯ ಹೊಕ್ಕಳು ಇರುವ ವ್ಯಕ್ತಿಗಳು ಸದಾ ತಮ್ಮ ಬಗ್ಗೆ ಎಚ್ಚರಿಕೆಯಿಂದಿರುವ ವ್ಯಕ್ತಿಗಳಲ್ಲೊಬ್ಬರಾಗಿರುತ್ತಾರೆ.