ಮೇಷ ರಾಶಿಯಲ್ಲಿ ಜನಿಸಿದವರು ರೂಪವಂತ ರಾಗಿದ್ದು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು ಆಗಿರುತ್ತಾರೆ ಆತ್ಮವಿಶ್ವಾಸ ಹೆಚ್ಚಾಗಿದ್ದು ಇವರು ಯಾವಾಗಲೂ ಕಲ್ಪನಾಲೋಕದಲ್ಲಿ ಇರುತ್ತಾರೆ ಇವರು ತುಂಬಾ ಆಟ ಮರಿಗಳು ಮತ್ತು ಮುಂಗೋಪಿಗಳು ಇವರಿಗೆ ಕೋಪ ಬಂದರೆ ನಿಯಂತ್ರಿಸುವುದು ತುಂಬಾ ಕಷ್ಟ ಇವರ ಜಗಳ ಮಾಡುವ ಪ್ರವೃತ್ತಿಯವರು ಅದರ್ವ ನ್ಯಾಯ ನೀತಿ ಧರ್ಮವನ್ನು ಪಾಲಿಸುತ್ತಾರ
ಇವರಿಗೆ ಸ್ನೇಹಿತರು ಇರುತ್ತಾರೆ ಇವರದು ಚಂಚಲ ಮನಸ್ಸು ಆದರೆ ಕೆಲಸದಲ್ಲಿ ಅಧಿಕ ಶ್ರದ್ಧೆಯನ್ನು ತೋರುತ್ತಾರೆ ಯಾವುದೇ ಕೆಲಸವಾದರೂ ಸಾಧಿಸುವ ಗುಣ ಇವರಲ್ಲಿ ಅಧಿಕವಾಗಿರುತ್ತದೆ ಯಾವುದೇ ಕೆಲಸವನ್ನು ಎಷ್ಟೇ ಕಠಿಣವಾದರೂ ಸಾಧಿಸುತ್ತಾರೆ
ತಾಳ್ಮೆಯಿಂದ ಇದ್ದರೆ ಏನನ್ನು ಬೇಕಾದರೂ ಸಾಧಿಸುವ ಗುಣ ಇವರದಾಗಿರುತ್ತದೆ ವಿವಾಹನಂತರ ಜೀವನದಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ ಇವರಲ್ಲಿ ನಾಯಕರಾಗುವ ಗುಣ ಹೆಚ್ಚಾಗಿರುತ್ತದೆ ಇವರಿಗೆ ರಕ್ತಹೀನತೆ ಮತ್ತು ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಇರುತ್ತದೆ ಇವರಿಗೆ ಅಪಘಾತದ ಸಂಭವಗಳು ಹೆಚ್ಚಾಗಿರುತ್ತದೆ ಮೇಷ ರಾಶಿಗೆ ಕುಜಗ್ರಹ ಅಧಿಪತಿ ಬುಧ ಗ್ರಹಕ್ಕೆ ಮಂಗಳನು ಅಧಿಪತಿ ಆದ್ದರಿಂದ ಇವರು ಮನೆ ಭೂಮಿ ಜಮೀನುಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ
ಮೇಷ ರಾಶಿಯವರಿಗೆ ಅದೃಷ್ಟ ವಾದ ಕಲ್ಲು ಎಂದರೆ ಹವಳ ಪುಷ್ಯರಾಗ ಅದೃಷ್ಟದ ಬಣ್ಣ ಕೆಂಪು ಮತ್ತು ಬಿಳಿ ಮಂಗಳವಾರ ಗುರುವಾರ ಮತ್ತು ರವಿವಾರ ಇವರಿಗೆ ಶುಭ ದಿನಗಳು ಅದೃಷ್ಟ ದೇವತೆಗಳು ಸ್ಕಂದ ಮತ್ತು ಮಹಾಶಿವ ಅದೃಷ್ಟ ಸಂಖ್ಯೆಗಳು 1 3 9. 2 7 ಇವರಿಗೆ ದುರದೃಷ್ಟದ ನಂಬರ್
ಇವರ ವಿಶೇಷಗುಣಗಳು ಎಂದರೆ ಇವರು ಬಹಳ ಧೈರ್ಯ ಶಾಲೀ ಮತ್ತು ಕೋಪಿಷ್ಟರು ಈ ರಾಶಿಯವರಿಗೆ ಸುಬ್ರಮಣ್ಯ ದೇವರ ಆರಾಧನೆ ಒಳ್ಳೆಯದು ಇವರಿಗೆ ತಾಮ್ರ ತುಂಬಾ ಒಳ್ಳೆಯದು ತಾಮ್ರದ ಕಡಗ ಧರಿಸುವುದು ಅಥವಾ ತಾಮ್ರದ ಲೋಟದಲ್ಲಿ ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು