ಸನಾತನ ಧರ್ಮದಲ್ಲಿ ನವಗ್ರಹಗಳಿಗೆ ವಿಶೇಷ ಮಹತ್ವವಿದೆ. ಗ್ರಹಗಳ ನಡೆ ಮತ್ತು ರಾಶಿ ಬದಲಾವಣೆಗಳು ಜನರ ಜೀವನದ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತವೆ. ಗ್ರಹಗಳ ರಾಶಿ ಪರಿವರ್ತನೆ ಕೆಲ ರಾಶಿಗಳ ಜನರ ಪಾಲಿಗೆ ಮಂಗಳಕರ ಮತ್ತು ಕೆಲ ಜಾತಕದವರ ಪಾಲಿಗೆ ಅಶುಭವೆಂದು ಪರಿಗಣಿಸಲಾಗುತ್ತದೆ. ಮಂಗಳ, ಬುಧ ಮತ್ತು ಗುರು ಗ್ರಹಗಳು ತನ್ನ ರಾಶಿಯನ್ನು ಬದಲಾಯಿಸಿವೆ. ಅವುಗಳ ಪ್ರಭಾವ ಮುಂದಿನ ವರ್ಷ ಜನವರಿ 6 ರವರೆಗೆ ಇರಲಿದೆ. ಈ ಅವಧಿಯಲ್ಲಿ, ಗ್ರಹಗಳ ಈ ರಾಶಿ ಪರಿವರ್ತನೆ ಕೆಲ ಜಾತಕದವರಿಗೆ ಒಳ್ಳೆಯ ಸುದ್ದಿಯನ್ನು ನೀಡಲಿದೆ. ಅವರ ಹಣಕಾಸಿನ ಕೊರತೆ ನೀಗಲಿದೆ. ಮತ್ತು ಎಲ್ಲಾ ರಂಗದಲ್ಲೂ ಪ್ರಯೋಜನಗಳು ಸಿಗಲಿವೆ. ಇಂತಹ ಪರಿಸ್ಥಿತಿಯಲ್ಲಿ, ಈ ಮೂರು ಗ್ರಹಗಳ ಬದಲಾವಣೆಗಳು ಯಾವ ರಾಶಿಗಳ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮಿಥುನ ರಾಶಿ-ಮಿಥುನ ರಾಶಿಯವರಿಗೆ ಮಂಗಳ, ಬುಧ ಮತ್ತು ಗುರುಗಳ ಸಂಚಾರವು ತುಂಬಾ ಹಿತಕರವಾಗಿರಲಿದೆ. ಮುಂಬರುವ ತಿಂಗಳುಗಳಲ್ಲಿ, ಈ ಜನರು ಬಹಳಷ್ಟು ಒಳ್ಳೆಯ ಸುದ್ದಿಗಳು ಸಿಗುವ ಸಾಧ್ಯತೆ ಇದೆ. ಜನವರಿ 6 ರ ಹೊತ್ತಿಗೆ, ಉದ್ಯೋಗಗಳು ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಜನರು ಅದ್ಭುತ ಯಶಸ್ಸನ್ನು ಕಾಣುವ ಸಾಧ್ಯತೆ ಇದೆ. ಈ ಅವಧಿಯಲ್ಲಿ, ಮಿಥುನ ರಾಶಿಯ ಜನರ ವೈವಾಹಿಕ ಜೀವನವು ಮಧುರತೆಯಿಂದ ಕೂಡಿರಲಿದೆ. ಸಂಗಾತಿಗಳ ನಡುವಿನ ಮನಸ್ತಾಪ ದೂರಾಗಲಿದೆ.
ತುಲಾ ರಾಶಿ-ಜನವರಿ 6, 2023 ರವರೆಗಿನ ಸಮಯವು ತುಲಾ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಮಂಗಳ, ಬುಧ, ಗುರುಗಳ ರಾಶಿ ಬದಲಾವಣೆಯಿಂದ ಈ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಕಛೇರಿಯಲ್ಲಿ ಅಧಿಕಾರಿಗಳ ಸಹಕಾರ ಮತ್ತು ವ್ಯಾಪಕ ಬೆಂಬಲ ಸಿಗಲಿದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ, ಇದರಿಂದಾಗಿ ಅನೇಕ ಪ್ರಮುಖ ಕೆಲಸಗಳು ಪೂರ್ಣಗೊಳ್ಳಲಿವೆ.
ವೃಶ್ಚಿಕ ರಾಶಿ-ಮಂಗಳ, ಬುಧ ಮತ್ತು ಗುರುವಿನ ನಡೆ ಬದಲಾವಣೆ ವೃಶ್ಚಿಕ ರಾಶಿಯವರಿಗೆ ಅಪಾರ ಲಾಭವನ್ನು ತರಲಿದೆ. ಜನವರಿ 6 ರವರೆಗಿನ ಸಮಯವು ಈ ರಾಶಿಗಳ ಜನರಿಗೆ ಮಂಗಳಕರ ಸಮಯಕ್ಕಿಂತ ಕಡಿಮೆಯಿಲ್ಲ ಎಂದು ಸಾಬೀತಾಗಲಿದೆ. ನೆನೆಗುದಿಗೆ ಬಿದ್ದ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ. ನೀವು ಯಾವುದೇ ಕೆಲಸವನ್ನು ಮಾಡಲು ಯೋಚಿಸುತ್ತಿದ್ದರೆ, ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಕಾಣುವಿರಿ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗಲಿದೆ.
ಮೀನ ರಾಶಿ-ಮೀನ ರಾಶಿಯವರಿಗೆ ಮಂಗಳ, ಬುಧ ಮತ್ತು ಬಹಸ್ಪತಿಯ ರಾಶಿಯ ಬದಲಾವಣೆಯು ವರದಾನಕ್ಕಿಂತ ಕಡಿಮೆ ಇಲ್ಲ. ಮೀನ ರಾಶಿಯವರಿಗೆ ಈ ಮೂರು ಗ್ರಹಗಳಿಂದ ಸಾಕಷ್ಟು ಲಾಭಗಳು ಸಿಗಲಿದೆ. ವ್ಯಾಪಾರ ಹೆಚ್ಚಾಗಬಹುದು. ದೀರ್ಘಾವಧಿಯಿಂದ ನಿಮಗೆ ಬರಬೇಕಿದ್ದ ಹಣ ನಿಮ್ಮ ಕೈಸೇರಲಿದೆ . ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸಾಧಯ್ತೆ ಇದೆ. ವಿದ್ಯಾರ್ಥಿ ವರ್ಗದವರು ಕೂಡ ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ.