ಮೇಷ: ಕೊಂಚ ಮಾನಸಿಕ ವ್ಯಾದಿಗಳು ಕಾಣಿಸಿಕೊಳ್ಳುವ ಲಕ್ಷಣವಿದೆ. ಸ್ನೇಹಿತರಿಂದ ಹಣದ ವಂಚನೆ ಉಂಟಾಗುವ ಸಾಧ್ಯತೆಯಿರುತ್ತದೆ. ಹಣದ ವಿಚಾರದಲ್ಲಿ ಎಚ್ಚರಿಕೆ ವಹಿಸಿ.ವೃಷಭ: ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರು. ಹೀಗಾಗಿ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ನೀವು ಕೂಡ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ.ಮಿಥುನ ರಾಶಿ: ಕೆಟ್ಟ ಕನಸುಗಳು ಬೀಳಬಹುದು. ಅಥವಾ ಮನಸ್ಸಿನಲ್ಲಿ ನಿಮ್ಮನ್ನು ಯಾರೋ ನಿಯಂತ್ರಿಸುವಂತೆ ಭಾಸವಾಗಬಹುದು. ಆಂಜನೇಯ ದೇವಸ್ಥಾನದಲ್ಲಿ ಯಂತ್ರವನ್ನು ಕಟ್ಟಿಸಿಕೊಂಡರೆ ಶುಭ.
ಕಟಕ ರಾಶಿ: ಈ ದಿನ ಉತ್ತಮವಾಗಿದೆ. ಭೋಜನಕ್ಕೆ ಆಮಂತ್ರಣ ಸಿಗುವ ಸಾಧ್ಯತೆ. ತಮಗೆ ಸತ್ಕಾರ ಸಿಗುವಂತಹ ದಿನ.ಸಿಂಹ ರಾಶಿ: ಬಂಧು ಮಿತ್ರರ ಜೊತೆ ಸಂತೋಷದಿಂದ ಇರುವ ದಿನ. ಆದರೆ ಹೆಣ್ಣು ಮಕ್ಕಳ ವಿಚಾರದಲ್ಲಿ ಎಚ್ಚರವಾಗಿರಬೇಕು. ಸ್ತ್ರೀಯಿಂದ ತೊಂದರೆ ಆಗುವ ಸಾಧ್ಯತೆಯಿದೆ.ಕನ್ಯಾ ರಾಶಿ: ಈ ರಾಶಿಯವರಿಗೆ ಶುಭ ದಿನವಾಗಿರಲಿದ್ದು, ಲಾಭದಾಯಕವಾಗಿರಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ.
ತುಲಾ ರಾಶಿ: ಮನರಂಜನೆಗಾಗಿ ಹೊರಹೋಗಬಹುದು, ಹೊರಗಡೆ ಭೋಜನ ಸವಿಯುವ ಸಾಧ್ಯತೆ. ಎಚ್ಚರಿಕೆ ವಹಿಸಿ ಆರೋಗ್ಯಕರ ಆಹಾರ ಸೇವಿಸಿ.ವೃಶ್ಚಿಕ ರಾಶಿ: ವಿವಾಹಿತರಿಗೆ ಶುಭ ದಿನ. ಪ್ರಯತ್ನಪಟ್ಟರೆ ಇಂದು ನಿಮ್ಮ ಕನಸು ನನಸಾಗುತ್ತದೆ.ಧನು ರಾಶಿ: ಈ ರಾಶಿಯವರು ಬೆಂಕಿ ಅಥವಾ ವಿದ್ಯುತ್ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಅಪಘಾತ ಸಂಭವಿಸುವ ಸಾಧ್ಯತೆಯಿರುತ್ತದೆ. ಎಚ್ಚರಿಕೆಯಿಂದ ಇರಿ.
ಮಕರ ರಾಶಿ: ಮನೆ ಕಟ್ಟುವ ಅಥವಾ ಗೃಹ ಪ್ರವೇಶ ಮಾಡುವ ಭಾಗ್ಯ. ಮನೆ ವಿಚಾರದಲ್ಲಿ ಶುಭ ಫಲಕುಂಭ ರಾಶಿ: ಅವಕಾಶಗಳ ಮೇಲೆ ಅವಕಾಶ ಬಂದರೂ ಸಹ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ದ್ವಂದ್ವ ಇರುತ್ತದೆ. ಹಾಗಾಗಿ ನಿಮ್ಮ ಹಿರಿಯರನ್ನು ಸಂಪರ್ಕಿಸಿ. ಒಳ್ಳೆಯ ನಿರ್ಧಾರ ತೆಗೆದುಕೊಂಡು ಸರಿಯಾದ ದಾರಿಯಲ್ಲಿ ನಡೆಯಬಹುದು.ಮೀನ ರಾಶಿ: ಅನಿರೀಕ್ಷಿತ ಮತ್ತು ಗುಪ್ತವಾಗಿ ಸಮಸ್ಯೆ ಕಾಣಿಸಿಕೊಳ್ಳುವಂತಹದ್ದು. ಕಣ್ಣಿಗೆ ಕಾಣಿಸಿಕೊಳ್ಳದಿದ್ದರೂ, ಸಮಸ್ಯೆಗಳಿರುತ್ತವೆ. ಓಡಾಟದಲ್ಲಿ ಎಚ್ಚರ ವಹಿಸಿ. ಪ್ರಾಣಿಗಳಿಂದ ಸಮಸ್ಯೆ ಬರಬಹುದು.