ಮೇಷ ರಾಶಿ – ಮನಸ್ಸು ಚಂಚಲತೆಯಿಂದ ಕೂಡಿರಲಿದೆ, ಸಂಯಮವಿರಲಿ. ಕೋಪದ ಕ್ಷಣವನ್ನು ತಪ್ಪಿಸಿ. ಸಂಭಾಷಣೆಯ ವೇಳೆ ಮಾತಿನ ಮೇಲೆ ನಿಯಂತ್ರಣವಿರಲಿ. ಶೈಕ್ಷಣಿಕ ಕೆಲಸ ಕಾರ್ಯಗಳಲ್ಲಿ ಅಡಚಣೆಗಳು ಎದುರಾಗಬಹುದು. ಎಚ್ಚರದಿಂದಿರಿ. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರ ವಿಸ್ತರಣೆಯಾಗಲಿದೆ. ಕಠಿಣ ಪರಿಶ್ರಮ ಇರಲಿದೆ. ಲಾಭದಾಯಕ ಫಲಿತಾಂಶಗಳು ನಿಮ್ಮದಾಗಲಿವೆ. ಉದ್ಯೋಗದಲ್ಲಿ ನೀವು ಸ್ನೇಹಿತರ ಬೆಂಬಲವನ್ನು ಪಡೆಯುವಿರಿ. ಸರ್ಕಾರಿ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ. ಸ್ಥಗಿತಗೊಂಡ ಹಣ ನಿಮ್ಮತ್ತ ಮರಳಿ ಬರಲಿದೆ. ಪೋಷಕರ ಬೆಂಬಲ ಸಿಗಲಿದೆ.
ವೃಷಭ ರಾಶಿ – ಮಾತಿನಲ್ಲಿ ಮಧುರತೆ ಇರಲಿದೆ. ಆತ್ಮನಿರ್ಭರರಾಗಿರಿ. ತಾಳ್ಮೆಯಿಂದಿರಲು ಪ್ರಯತ್ನಿಸಿ. ಬರವಣಿಗೆಯಂತಹ ಬೌದ್ಧಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಯತ್ನಿಸಿ. ಆದಾಯ ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಾನಸಿಕ ಶಾಂತಿಗಾಗಿ, ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಕೆಲಸದ ಸ್ಥಳದಲ್ಲಿ ತೊಂದರೆಗಳು ಎದುರಾಗಬಹುದು.
ಮಿಥುನ ರಾಶಿ – ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷದ ಭಾವನೆ ಇರಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕಾರ್ಯಕ್ಷೇತ್ರದಲ್ಲಿ ಪರಿಶ್ರಮ ಕಡಿಮೆಯಾಗಲಿದೆ. ಅಧಿಕಾರಿಗಳೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳಿ. ಖರ್ಚು ಹೆಚ್ಚಾಗಲಿದೆ. ಕುಟುಂಬದ ಬೆಂಬಲ ಸಿಗಲಿದೆ. ಪ್ರವಾಸಕ್ಕೆ ಹೋಗಬೇಕಾಗಬಹುದು. ಆದಾಯದ ಸ್ಥಿತಿ ಸುಧಾರಿಸಲಿದೆ. ಭರವಸೆ ಮತ್ತು ಹತಾಶೆಯ ಮಿಶ್ರ ಭಾವನೆಗಳು ಮನಸ್ಸಿನಲ್ಲಿರಲಿವೆ. ವ್ಯಾಪಾರದಲ್ಲಿ ಬೆಳವಣಿಗೆಗೆ ಅವಕಾಶಗಳು ಗೋಚರಿಸಲಿವೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಅನಗತ್ಯ ವಿವಾದಗಳನ್ನು ತಪ್ಪಿಸಲು ಯತ್ನಿಸಿ.
ಕರ್ಕ ರಾಶಿ – ನಿಮ್ಮ ಮೇಲೆ ಸಂಯಮವಿಟ್ಟುಕೊಳ್ಳಿ. ಕೋಪದ ಸನ್ನಿವೇಶಗಳನ್ನು ತಪ್ಪಿಸಿ. ವ್ಯವಹಾರದ ಬಗ್ಗೆ ಎಚ್ಚರವಿರಲಿ. ಪರಿಶ್ರಮ ಹೆಚ್ಚಾಗಲಿದೆ. ನೀವು ಪೋಷಕರಿಂದ ಹಣವನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಸ್ಥಿತಿ ಉತ್ತಮವಾಗಿರಲಿದೆ. ಆತ್ಮವಿಶ್ವಾಸದಿಂದ ತುಂಬಿರುವಿರಿ. ತಾಳ್ಮೆಯಿಂದಿರಲು ಯತ್ನಿಸಿ. ಬಟ್ಟೆ ಇತ್ಯಾದಿ ವೆಚ್ಚಗಳು ಹೆಚ್ಚಾಗಬಹುದು. ಕೋಪದ ಕ್ಷಣಗಳು ಮತ್ತು ತೃಪ್ತಿಯ ಭಾವನೆಗಳು ಇರಲಿವೆ. ಸಂಗಾತಿಗೆ ಆರೋಗ್ಯ ಸಮಸ್ಯೆ ಕಾಡಲಿದೆ. ಸ್ನೇಹಿತರ ಬೆಂಬಲ ಸಿಗಲಿದೆ. ಮನಸ್ಸು ವಿಚಲಿತವಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದು.
ಸಿಂಹ ರಾಶಿ – ಅತಿಯಾದ ಕೋಪವನ್ನು ತಪ್ಪಿಸಿ. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪೋಷಕರ ಬೆಂಬಲ ಸಿಗಲಿದೆ, ಜೀವನದಲ್ಲಿ ಪರಿಸ್ಥಿತಿಗಳು ಅಸ್ತವ್ಯಸ್ತವಾಗಿರುತ್ತವೆ. ಶೈಕ್ಷಣಿಕ ಕೆಲಸದ ಮನಸ್ಸಿಗೆ ಹಿಡಿಸುವ ಫಲಿತಾಂಶಗಳು ಕಂಡುಬರಲಿವೆ. ಧಾರ್ಮಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ರುಚಿಕರವಾದ ಆಹಾರದತ್ತ ಒಲವು ಹೆಚ್ಚಾಗಲಿದೆ. ಸ್ನೇಹಿತರ ಸಹಾಯದಿಂದ ಉದ್ಯೋಗಾವಕಾಶಗಳು ಸಿಗಲಿವೆ. ಸ್ಥಾನ ಪರಿವರ್ತನೆಯ ಸಾಧ್ಯತೆಗಳು ಇರಲಿವೆ. ಖರ್ಚು ಹೆಚ್ಚಾಗಲಿದೆ.
ಕನ್ಯಾ ರಾಶಿ – ಆತ್ಮವಿಶ್ವಾಸದಿಂದ ತುಂಬಿರುವಿರಿ, ಅತಿ ಉತ್ಸಾಹವನ್ನು ತಪ್ಪಿಸಿ, ಸಂಯಮದಿಂದ ಇರಿ. ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಉದ್ಯೋಗದಲ್ಲಿ ಕೆಲವು ಹೆಚ್ಚುವರಿ ಜವಾಬ್ದಾರಿಗಳು ಇರಬಹುದು. ಪರಿಶ್ರಮ ಹೆಚ್ಚಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆದಾಯದ ಸ್ಥಿತಿ ಸುಧಾರಿಸಲಿದೆ. ರಾಜಕಾರಣಿಯನ್ನು ನೀವು ಭೇಟಿಯಾಗಬಹುದು. ಅತಿಯಾದ ಕೋಪ ಮತ್ತು ಉತ್ಸಾಹ ಇರುತ್ತದೆ. ಸಂಗಾತಿಯೊಂದಿಗೆ ವಿವಾದ ಉಂಟಾಗಬಹುದು. ಕುಟುಂಬದ ಸದಸ್ಯರಿಂದ ಹಣ ಸಿಗುವ ಸಾಧ್ಯತೆ ಇದೆ. ಸ್ನೇಹಿತರ ಬೆಂಬಲ ನಿಮಗೆ ಸಿಗಲಿದೆ.
ತುಲಾ ರಾಶಿ – ಮನಸ್ಸಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಸಂಭಾಷಣೆಯಲ್ಲಿ ತಾಳ್ಮೆವಹಿಸಿ. ವ್ಯವಹಾರದಲ್ಲಿ ತೊಂದರೆಗಳು ಎದುರಾಗುವ ಸಾಧ್ಯತೆ ಇರಲಿದೆ. ದಿನ ನಿರರ್ಥಕ ಓಡಾಟದಿಂದ ಕೂಡಿರಲಿದೆ. ಖರ್ಚು ಕೂಡ ಅಧಿಕವಾಗಲಿದೆ. ನೀವು ಸ್ನೇಹಿತರ ಬೆಂಬಲವನ್ನು ಪಡೆಯುವಿರಿ. ಆತ್ಮವಿಶ್ವಾಸದಿಂದ ತುಂಬಿರುವಿರಿ. ಆರೋಗ್ಯದ ಕಡೆಗೆ ಗಮನಘರಿಸಿ. ರಾಜಕೀಯ ಮಹತ್ವಾಕಾಂಕ್ಷೆ ಈಡೇರಲಿದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ.. ಕಡಿಮೆ ಆದಾಯ ಮತ್ತು ಖರ್ಚು ಹೆಚ್ಚಾಗಲಿದೆ. ವ್ಯಾಪಾರ ವಿಸ್ತರಣೆಯಾಗುವ ಸಾಧತೆ ಇದೆ. ಲಾಭದ ಅವಕಾಶಗಳಿರುತ್ತವೆ.
ವೃಶ್ಚಿಕ ರಾಶಿ – ಆತ್ಮವಿಶ್ವಾಸದಿಂದ ತುಂಬಿರುವಿರಿ. ಅನಾವಶ್ಯಕ ಚಿಂತೆಗಳಿಂದ ಮನಸ್ಸು ವಿಚಲಿತವಾಗಬಹುದು. ಸಂಭಾಷಣೆಯಲ್ಲಿ ತಾಳ್ಮೆವಹಿಸಿ. ಸ್ನೇಹಿತರ ಸಹಾಯದಿಂದ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಸಾಧ್ಯತೆ ಇದೆ. ಜೀವನ ಏರಿಳಿತಗಳಿಂದ ಕೂಡಿರಲಿದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ನೀವು ಘನತೆ ಮತ್ತು ಗೌರವವನ್ನು ಪಡೆಯುವಿರಿ. ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ವಲಸೆ ಹೋಗುವ ಸಾಧ್ಯತೆ ಇದೆ. ಕಠಿಣ ಪರಿಶ್ರಮ ಇರಲಿದೆ. ಒಳ್ಳೆಯ ಸುದ್ದಿ ಸಿಗಲಿದೆ.
ಧನು ರಾಶಿ – ಮನಃಶಾಂತಿ ಇರಲಿದೆ ಮತ್ತು ಆತ್ಮನಿರ್ಭರರಾಗಲು ಯತ್ನಿಸಿ. ಶೈಕ್ಷಣಿಕ ಕೆಲಸದಲ್ಲಿ ಅಡಚಣೆಗಳು ಎದುರಾಗುವ ಸಾಧ್ಯತೆ ಇದೆ. ಸ್ನೇಹಿತರ ಸಹಾಯದಿಂದ ಉದ್ಯೋಗಾವಕಾಶಗಳು ಸಿಗಲಿವೆ. ಉದ್ಯೋಗದಲ್ಲಿ ಬದಲಾವಣೆಯ ಪರಿಸ್ಥಿತಿ ಇರುತ್ತಿದೆ. ನೀವು ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ತೀರ್ಥಯಾತ್ರೆಗೆ ಹೋಗಬಹುದು. ಜೀವನವು ಕಷ್ಟಗಳಿಂದ ಕೂಡಿರಬಹುದು. ಶೈಕ್ಷಣಿಕ ಕೆಲಸದಲ್ಲಿ ಅಪೇಕ್ಷಿತ ಯಶಸ್ಸಿನ ಸಾಧ್ಯತೆಗಳಿವೆ. ಸಹೋದರರೊಂದಿಗೆ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ, ವಾಗ್ವಾದ ತಪ್ಪಿಸಿ.
ಮಕರ ರಾಶಿ – ಆತ್ಮ ಸಂಯಮ ಕಾಪಾಡಿಕೊಳ್ಳಿ. ಕೋಪವನ್ನು ತಪ್ಪಿಸಿ. ಮನಸ್ಸಿನಲ್ಲಿ ಸೋಮಾರಿತನದ ಭಾವನೆ ಇರಬಹುದು. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಾರ್ಯಕ್ಷೇತ್ರದಲ್ಲಿ ಬದಲಾವಣೆಯಾಗಬಹುದು. ವ್ಯಾಪಾರದಲ್ಲಿ ಹೆಚ್ಚು ಶ್ರಮ ಇರಲಿದೆ. ಲಾಭದ ಅವಕಾಶಗಳಿರುತ್ತವೆ. ಶೈಕ್ಷಣಿಕ ಕೆಲಸದಲ್ಲಿ ಅಡೆತಡೆಗಳು ಎದುರಾಗಬಹುದು. ಬಟ್ಟೆಯ ಮೇಲಿನ ಖರ್ಚು ಹೆಚ್ಚಾಗಬಹುದು. ಪ್ರತಿ ಕ್ಷಣವೂ ಅತೃಪ್ತಿಯ ಸ್ಥಿತಿ ಇರುತ್ತದೆ. ಕುಟುಂಬದೊಂದಿಗೆ ನೀವು ಪ್ರವಾಸಕ್ಕೆ ತೆರಳಬಹುದು. ಅಧಿಕಾರಿಗಳ ಸಹಕಾರ ಸಿಗಲಿದೆ.
ಕುಂಭ ರಾಶಿ – ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ಇರಲಿದೆ. ಪ್ರಗತಿಯ ಹಾದಿ ಸುಗಮವಾಗಿರಲಿದೆ. ಕಾರ್ಯಕ್ಷೇತ್ರದಲ್ಲಿ ಬದಲಾವಣೆಯಾಗಬಹುದು. ಕೆಲಸದ ಒತ್ತಡ ಇರಲಿದೆ. ನೀವು ಸ್ನೇಹಿತರ ಬೆಂಬಲವನ್ನು ಪಡೆಯುವಿರಿ. ಮಾತಿನಲ್ಲಿ ಮಧುರತೆ ಇರಲಿದೆ. ತಾಳ್ಮೆಯಿಂದಿರಲು ಪ್ರಯತ್ನಿಸಿ. ವಾಹನ ಸುಖ ಹೆಚ್ಚಾಗಲಿದೆ. ಒಂದು ಪ್ರವಾಸವನ್ನು ಯೋಜಿಸಬಹುದು. ಪ್ರಯಾಣ ಲಾಭ ತರಲಿದೆ. ವ್ಯಾಪಾರ ವಿಸ್ತರಣೆಯಾಗುವ ಸಾಧ್ಯತೆ ಇದೆ. ತಂದೆಗೆ ಆರೋಗ್ಯ ಸಮಸ್ಯೆಗಳಿರಬಹುದು. ಖರ್ಚು ಹೆಚ್ಚಾಗಲಿದೆ. ಮನಸ್ಸಿನಲ್ಲಿ ನೆಮ್ಮದಿ ಇರಲಿದೆ.
ಮೀನ ರಾಶಿ – ಆತ್ಮವಿಶ್ವಾಸದಿಂದ ತುಂಬಿರುವಿರಿ, ಅತಿಯಾದ ಉತ್ಸಾಹದಿಂದ ದೂರವಿರಿ. ಸ್ನೇಹಿತರ ಸಹಾಯದಿಂದ ವ್ಯಾಪಾರ ಅವಕಾಶಗಳನ್ನು ಕಂಡುಕೊಳ್ಳಬಹುದು. ಆದಾಯ ಹೆಚ್ಚಾಗಲಿದೆ. ಒಂದು ಕ್ಷಣ ಕೋಪ ಮತ್ತು ಒಂದು ಕ್ಷಣ ತೃಪ್ತಿಯ ಭಾವನೆ ಇರಲಿದೆ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷ ಕಡಿಮೆಯಾಗಬಹುದು. ತಾಯಿಗೆ ಆರೋಗ್ಯ ಸಮಸ್ಯೆಗಳಿರಬಹುದು. ಜೀವನ ನಡೆಸುವುದು ಕಷ್ಟಕರ ಎನಿಸಲಿದೆ. ನಕಾರಾತ್ಮಕ ಆಲೋಚನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಬಹುದು.