ಈ ಸೀಕ್ರೆಟ್ ವಸ್ತುವನ್ನು ಸೇರಿಸಿ ನೆಲವನ್ನು ವರೆಸಿ ನೋಡಿ ನೆಲ ಕನ್ನಡಿ ಅಂತೆ ಹೊಳೆಯುತ್ತದೆ. ಬರೀ 4 ರೂಪಾಯಿಯಲ್ಲಿ ಒಳ್ಳೆಯ ಫ್ಲೋರ್ ಕ್ಲೀನರ್ ಅನ್ನು ತಯಾರಿಸಬಹುದು. ಮನೆಯಲ್ಲಿ ಪ್ರತಿ ದಿನ ನೆಲ ವರಿಸಿದರು ಕೂಡ ನೆಲದಲ್ಲಿ ದೂಳು ಕೊಳೆ ಇದ್ದೆ ಇರುತ್ತದೆ. ಇದಕ್ಕಾಗಿ ಮನೆಯಲ್ಲಿಯೇ ಫ್ಲೋರ್ ಕ್ಲಿನಾರ್ ಅನ್ನು ತಯಾರು ಮಾಡಬಹುದು. ಒಮ್ಮೆ ಇದನ್ನು ಬಳಸಿ ನೋಡಿ ಮನೆಯ ತುಂಬಾ ಒಳ್ಳೆಯ ಸುವಾಸನೆ ಬರುತ್ತದೆ. ಅಷ್ಟೇ ಅಲ್ಲ ನೆಲ ಕೂಡ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ.
ಒಂದು ದೊಡ್ಡ ಬೌಲ್ ಗೆ ಎರಡು ಲೋಟ ನೀರು, 2 ಕರ್ಪೂರ ಪುಡಿ,1 ಚಮಚ ಅಡುಗೆ ಸೋಡಾ,1 ಪ್ಯಾಕ್ ಕಂಫರ್ಟ್ ಹಾಕಿ ಮಿಕ್ಸ್ ಮಾಡಿ. ನಂತರ ಒಂದು ಬಾಟಲ್ ಗೆ ಹಾಕಿ ಇಡಬೇಕು. ಪ್ರತಿದಿನ ನೆಲ ವರೆಸುವ ನೀರಿಗೆ ಈ ಫ್ಲೋರ್ ಕ್ಲಿನಾರ್ ಅನ್ನು ಸ್ವಲ್ಪ ಹಾಕಿ ನೆಲವನ್ನು ವರೆಸಿ. ಇದನ್ನು ಹಾಕಿ ವರೆಸಿದರೆ ಒಳ್ಳೆಯ ಸುವಾಸನೆ ಬರುತ್ತದೆ ಮತ್ತು ನೆಲ ಕೂಡ ಫಳ ಫಳ ಅಂತಾ ಹೊಳೆಯುತ್ತದೆ. ಇದನ್ನು ಬಾತ್ ರೂಮ್ ಟಾಯ್ಲೆಟ್ ರೂಮ್ ಗೆ ಹಾಕಿ ಕ್ಲೀನ್ ಮಾಡಬಹುದು. ಈ ರೀತಿ ಮಾಡಿದರೆ ಒಳ್ಳೆಯ ಸ್ಮೆಲ್ ಬರುತ್ತದೆ.