ನಾವು ಗಡಿಯಾರ ಕಟ್ಟುವ ಹೆಬ್ಬೆರಳಿನ ಬುಡ ಭಾಗದಲ್ಲಿ ಅಡ್ಡಲಾಗಿರುವ ರೇಖೆಗಳನ್ನು ಮಣಿಕಟ್ಟಿನ ರೇಖೆಗಳು ಎಂದು ಕರೆಯುತ್ತೇವೆ.ಸಾಮಾನ್ಯವಾಗಿ ಕೆಲವರಲ್ಲಿ ಮೂರು ರೇಖೆಗಳು ಇರುತ್ತವೆ. ಇವು ಸ್ಪಷ್ಟವಾಗಿ ಪೂರ್ವವಾಗಿದ್ದರೆ ಇವುಗಳನ್ನು ಖಚಿತ ರೇಖೆಗಳು ಎಂದು ಪರಿಗಣಿಸುತ್ತೇವೆ.
1, ಮೊದಲ ಮಣಿ ಕಟ್ಟಿನ ರೇಖೆ–ನಮ್ಮ ಹಸ್ತದ ಬುಡದಿಂದ ಪ್ರಾರಂಭವಾಗುವ ರೇಖೆ ನಿಮ್ಮ 28ನೇ ವಯಸ್ಸಿಗೂ ಮುನ್ನ ನಿಮ್ಮ ಅರೋಗ್ಯ ಮತ್ತು ಸಂಪತ್ತು ಹೇಗಿತ್ತು ಮತ್ತು ಹೇಗಿರುತ್ತದೆ ಎಂದು ತಿಳಿಸುತ್ತದೆ. ತಜ್ಞರ ಪ್ರಕಾರ ಈ ರೇಖೆ ಸ್ಪಷ್ಟವಾಗಿದಷ್ಟು ಯವ್ವನದಲ್ಲಿ ಉತ್ತಮ ಅರೋಗ್ಯ ಇರುತ್ತದೆ ಎಂದು ತಿಳಿಸುತ್ತದೆ. ಒಂದು ವೇಳೆ ಇದು ತಿಳುವಾಗಿದ್ದು ಕಿರಿದಾಗಿ ಇದ್ದರೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನವಹಿಸಿದರೆ ಮಾತ್ರವೇ ಯಾವುದೇ ಅನಾರೋಗ್ಯ ಕಾಡುವುದಿಲ್ಲ. ಒಂದು ವೇಳೆ ಈ ರೇಖೆ ತುಂಡು ತುಂಡಗಿದ್ದಾರೆ ಯವ್ವನ ಅವ್ಯಸ್ಥೆಯಲ್ಲಿ ನಿಮ್ಮ ಅರೋಗ್ಯ ಕುಂಟಿತಗೊಂಡಿದ್ದು ನಡುವಯಸ್ಸು ದಾಟಿದ ಬಳಿಕವೇ ನಿಮ್ಮ ದೇಹ ಉತ್ತಮವಾದ ರೋಗ ನಿರೋಧಕ ಶಕ್ತಿಯನ್ನು ಪಡೆಯುತ್ತದೆ.
2, ಎರಡನೇ ಮಣಿಕಟ್ಟಿನ ರೇಖೆ–ಈ ರೇಖೆ 28 ವಯಸ್ಸಿನ ಬಳಿಕ ಮತ್ತು 56 ವಯಸ್ಸಿನ ಮುನ್ನ ನಿಮ್ಮ ಅರೋಗ್ಯ ಮತ್ತು ಸಂಪತ್ತು ಹೇಗಿರುತ್ತದೆ ಎಂದು ತಿಳಿಸುತ್ತದೆ. ಈ ರೇಖೆ ಸ್ಪಷ್ಟವಾಗಿ ಇದ್ದರೆ ನಿಮ್ಮ ಅರೋಗ್ಯ ಉತ್ತಮವಾಗಿ ಇರುತ್ತದೆ ಹಾಗು ಅನಾರೋಗ್ಯ ಅಪರೂಪವಾಗಿ ಕಾಡುತ್ತದೆ. ಒಂದು ವೇಳೆ ಈ ರೇಖೆ ವಕ್ರ ಅಥವಾ ತುಂಡು ತುಂಡಗಿದ್ದರೆ ಹಸ್ತ ಸಾಮೂದ್ರಿಕಾ ಶಾಸ್ತ್ರದ ಪ್ರಕಾರ ಈ ಅವಧಿಯಲ್ಲಿ ನಿಮ್ಮ ಅರೋಗ್ಯ ಬಾದೆಗೆ ಒಳಗಾಗುತ್ತಾ ಇರುತ್ತದೆ.
3, ಮೂರನೇ ಮಣಿ ಕಟ್ಟಿನ ರೇಖೆ–ಈ ರೇಖೆ 56 ವಯಸ್ಸಿನ ಬಳಿಕ ನಿಮ್ಮ ಅರೋಗ್ಯ ಮತ್ತು ಸಂಪತ್ತು ಹೇಗಿರುತ್ತದೆ ಎಂದು ತಿಳಿಸುತ್ತದೆ. ಈ ರೇಖೆ ಸ್ಪಷ್ಟವಾಗಿ ಇದ್ದರೆ ನಿಮ್ಮ ಅರೋಗ್ಯ ಉತ್ತಮವಾಗಿ ಇರುತ್ತದೆ . ಒಂದು ವೇಳೆ ಈ ರೇಖೆ ವಕ್ರ ಅಥವಾ ತುಂಡು ತುಂಡಗಿದ್ದರೆ ಹಸ್ತ ಸಾಮೂದ್ರಿಕಾ ಶಾಸ್ತ್ರದ ಪ್ರಕಾರ ಈ ಅವಧಿಯಲ್ಲಿ ನಿಮ್ಮ ಅರೋಗ್ಯ ಬಾದೆಗೆ ಒಳಗಾಗುತ್ತಾ ಇರುತ್ತದೆ. ಇದೆ ಕಾರಣಕ್ಕೆ ನೀವು ಹೆಚ್ಚು ಆಯಾಸಗೊಂಡಿರುತ್ತಿರಿ. ಇವರಿಗೆ ಮೂತ್ರ ಪಿಂಡ ತೊಂದರೆ ಎದುರು ಆಗುವ ಸಾಧ್ಯತೆ ಎದುರಾಗುತ್ತದೆ.
ಒಂದು ವೇಳೆ ಆಯಸ್ಸು ರೇಖೆ ಮಣಿ ಕಟ್ಟಿನ ರೇಖೆಯನ್ನು ಸಂಧಿಸಿದ್ದರೆ ನಿಮಗೆ ದೀರ್ಘಯಸ್ಸು ಮತ್ತು ಶಾಂತಿ ಜೀವನ ಲಭಿಸುತ್ತದೆ.