2, 11, 20, 29 ನೇ ತಾರೀಖಿನಂದು ಶುಕ್ರವಾರ ಹುಟ್ಟಿದವರು ಸಂಖ್ಯಾಶಾಸ್ತ್ರದ ಪ್ರಕಾರ ಇವರ ಗುಣ ಸ್ವಭಾವ ಹೇಗಿರುತ್ತದೆ!

ದಿನಾಂಕ 2,11, 20 ಮತ್ತು 29ನೇ ತಾರೀಕಿನಂದು ಜನಿಸಿದವರು ಹುಟ್ಟಿದ ವಾರ ಶುಕ್ರವಾರವಾಗಿದ್ದರೆ ಇವರು ಅತ್ಯಂತ ಮೃದು ಸ್ವಭಾವದವರಾಗಿರುತ್ತಾರೆ, ಯಾರ ಮನಸ್ಸನ್ನು ನೋಯಿಸಲು ಇಷ್ಟಪಡುವುದಿಲ್ಲ ಯಾರಾದರೂ ಇವರನ್ನು ಹಿಂಸಿಸಿದರು ಅವರು ಕ್ಷಣದಲ್ಲಿ ಚಡಪಡಿಸುತ್ತಾರೆ ಅಷ್ಟೇ ಸ್ವಲ್ಪ ಸಮಯದ ನಂತರ ಇವರು ಮಾಮೂಲಿನಂತೆ ಇರುತ್ತಾರೆ .

ಇವರಿಗೆ ಇಷ್ಟವಾಗದೇ ಇರುವ ವಿಷಯಗಳಿದ್ದರೆ ಅದರ ಗೋಜಿಗೆ ಹೋಗುವುದಿಲ್ಲ ಶತ್ರುಗಳನ್ನು ಮಿತ್ರರಂತೆ ಪರಿಗಣಿಸುವ ಹಾಗೂ ವಿರೋಧಿಗಳ ಬಗ್ಗೆ ಮೃದು ಧೋರಣೆಯನ್ನು ಪ್ರದರ್ಶಿಸುವ ಅತ್ಯುತ್ತಮ ಗುಣ ಇವರಲ್ಲಿರುತ್ತದೆ ಇವರು ವಾಸಿಸುವ ಜಾಗದಲ್ಲಿ ಅಥವಾ ಇವರು ಇರುವ ಗುಂಪಿನಲ್ಲಿ ಶಾಂತಿ ಸಮಾಧಾನಗಳು ಇರುತ್ತವೆ ತಮಗಾದ ಹಿಂಸೆಯನ್ನು ಯಾರ ಬಳಿಯೂ ವ್ಯಕ್ತಪಡಿಸದೆ ಎಲ್ಲರನ್ನೂ ಸಮಾಧಾನಪಡಿಸಿ ವಾತಾವರಣವು ಶಾಂತಿಯಾಗಿರುವಂತೆ ನೋಡಿಕೊಳ್ಳುತ್ತಾರೆ.

ಇವರಿಗೆ ಸ್ತ್ರೀ ವರ್ಗದವರ ಸಂಪೂರ್ಣ ಬೆಂಬಲ ಸಾಕಾರಗಳು ದೊರೆಯುತ್ತವೆ ಇವರು ಜೀವನದಲ್ಲಿ ಬರುವ ಕಷ್ಟಗಳಿಗೆ ಹೊಂದಿಕೊಂಡು ಬಾಳ್ವೆಯನ್ನು ನಡೆಸುತ್ತಾರೆ ಇದರಿಂದ ನೆಮ್ಮದಿ ಇರುತ್ತದೆ ಇವರ ಬಳಿ ಹಣ ನಿಲ್ಲುವುದಿಲ್ಲ ಖರ್ಚಾದ ಹಣದ ಬಗ್ಗೆ ಇವರು ಚಿಂತಿಸುವುದಿಲ್ಲ, ನಾಯಕತ್ವ ಇವರಿಗೆ ಸರಿಹೊಂದುವುದಿಲ್ಲ ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಅದೃಷ್ಟ ತರುವ ವೃತ್ತಿಗಳೆಂದರೆ :ಹೋಟೆಲ್ ಉದ್ಯಮ, ಆಹಾರ ಪದಾರ್ಥಗಳ ವ್ಯವಹಾರ, ಸ್ತ್ರೀಯರಿಗೆ ಸಂಬಂಧಿಸಿದ ವಸ್ತುಗಳ ಮಾರಾಟ, ಜಲಸಂಬಂಧಿತ ವಸ್ತುಗಳ ವ್ಯವಹಾರ ಮುಂತಾದವುಗಳನ್ನು ನಡೆಸಿದ್ದಲ್ಲಿ ಅನುಕೂಲವಾಗುತ್ತದೆ

Leave a Comment