ಕಣ್ಣಲ್ಲಿ ಬಿದ್ದ ಕಸ ತೆಗೆಯಲು ಟಿಪ್ಸ್! ಕಣ್ಣು ಚುಚ್ಚುವಿಕೆ ನೋವು ಉರಿ ತುರಿಕೆ ನಿವಾರಣೆಗೆ ಮನೆಮದ್ದು! ಕಣ್ಣಿನ ಅರೋಗ್ಯ

ಸಾಮಾನ್ಯವಾಗಿ ನಮ್ಮ ಕಣ್ಣಿನಲ್ಲಿ ಕಸ ಬಿದ್ದರೆ ನಾವು ಅದನ್ನು ಬಟ್ಟೆಯಿಂದ ತೆಗೆಯಲು ಪ್ರಯತ್ನಪಡುತ್ತೇವೆ ಅಥವಾ ನೀರಿನಿಂದ ಕಣ್ಣುಗಳನ್ನು ತೊಳೆದು ಸ್ವಚ್ಛ ಮಾಡಿಕೊಳ್ಳುತ್ತೇವೆ. ಕೆಲವೊಮ್ಮೆ ಕಣ್ಣಿನಲ್ಲಿ ಸಣ್ಣಪುಟ್ಟ ಕಸಗಳು ಇದ್ದರೆ ನೀರಿನಿಂದ ಕಣ್ಣು ತೊಳೆದಾಗ ಹೊರಬರುತ್ತವೆ. ಕೆಲವರಿಗೆ ಕಣ್ಣಿನ ಅಲರ್ಜಿಯಿಂದಾಗಿ ದೂಳು ಹಾಕಿದ ಕಣ್ಣು ತುರಿಸುವ ಅಥವಾ ಚುಚ್ಚಿದ ಅನುಭವವಾಗುತ್ತದೆ.

ಚಳಿಗಾಲ ಆರಂಭವಾಗಿ ಬಿಟ್ಟರೆ ಅಂತೂ ಕಣ್ಣಿನಲ್ಲಿ ಬಹಳಷ್ಟು ತುರಿಕೆ ಉಂಟಾಗಿ ಕಣ್ಣು ಕೆಂಪಗೆ ಆಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಕಣ್ಣಿನಲ್ಲಿ ಕಸ ಹೊಕ್ಕಿದಾಗ ಅಥವಾ ಕಣ್ಣಿನ ರೆಪ್ಪೆಗಳಿಗೆ ಅಂಟಿಕೊಂಡಿದ್ದರೆ ಎಷ್ಟೇ ಪ್ರಯತ್ನಪಟ್ಟರೂ ಹೊರಗೆ ಬರುವುದಿಲ್ಲ ಅಂತಹ ಸಂದರ್ಭಗಳಲ್ಲಿ ವೈದ್ಯರ ಮೊರೆ ಹೋಗುತ್ತೇವೆ ಆದರೆ ನಾವು ಮನೆಯಲ್ಲಿಯೇ ಸುಲಭವಾಗಿ ಕಣ್ಣಿನಲ್ಲಿ ಹೋಗಿದ್ದ ಕಸವನ್ನು ಹೇಗೆ ತೆಗೆದುಕೊಳ್ಳಬಹುದು ಅನ್ನೋದನ್ನು ಈ ಲೇಖನದ ಮೂಲಕ ಕೆಲವೊಂದು ಟಿಪ್ಸ್ ಗಳನ್ನು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಕಣ್ಣಿನಲ್ಲಿ ಕಸ ಸೇರಿದಾಗ ನೀರಿನಿಂದ ತೊಳೆದಾಗ ಕಸ ಹೊರಗೆ ಬರುತ್ತದೆ. ಆದರೆ ಕೆಲವೊಮ್ಮೆ ದೊಡ್ಡ ದೊಡ್ಡ ಕಸ ಕಣ್ಣಿನಲ್ಲಿ ಸೇರಿದಾಗ ಎಷ್ಟು ಪ್ರಯತ್ನಿಸಿದರೂ ಹೊರಗೆ ಬರುವುದಿಲ್ಲ ಹಾಗಿದ್ದಾಗ ನಾವು ಮನೆಯಲ್ಲಿ ಸುಲಭವಾಗಿ ಒಂದು ಲೋಟ ನೀರಿಗೆ ಸ್ವಲ್ಪ ಸಕ್ಕರೆಯನ್ನು ಸೇರಿಸಿ ಅದನ್ನು ಮಿಕ್ಸ್ ಮಾಡಿಕೊಂಡು ಸಕ್ಕರೆ ನೀರಿನಿಂದ ಕಣ್ಣು ತೊಳೆಯುವುದರಿಂದ ಕಣ್ಣಿನಲ್ಲಿರುವ ಕಸ ಹೊರಗೆ ಬರುವುದು.

ಕಣ್ಣಿನಲ್ಲಿ ಬಿದ್ದ ಕಸವನ್ನು ಹೊರಗೆ ತೆಗೆಯಲು ಎರಡನೇ ಉಪಾಯ ಎಂದರೆ ದನದ ಹಳೆಯ ತುಪ್ಪ. ಹಳೆಯ ತುಪ್ಪ ಕಣ್ಣಿನಲ್ಲಿ ಬಿದ್ದಿರುವ ಕಸವನ್ನು ತೆಗೆಯಲು ತುಂಬಾ ಸಹಾಯಮಾಡುತ್ತದೆ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ಅದನ್ನು ಸೋಸಿಕೊಂಡು ನಂತರ ಕಣ್ಣಿಗೆ ಒಂದೆರಡು ಹನಿ ತುಪ್ಪವನ್ನು ಬಿಡಬೇಕು. ಹೀಗೆ ಮಾಡುವುದರಿಂದ ಕಣ್ಣಿನಲ್ಲಿರುವ ಕಸ ಹೊರಗೆ ಬರುವುದು ಅಷ್ಟೇ ಅಲ್ಲದೆ ಕಣ್ಣಿನ ಬೇರೆ ರೀತಿಯ ತೊಂದರೆ ಇದ್ದರೂ ಸಹ ಕಡಿಮೆಯಾಗುತ್ತದೆ.

ಮೂರನೇ ಉಪಾಯ ಎಂದರೆ ಹರಳೆಣ್ಣೆ. ಯಾವಾಗಲಾದರೂ ಕಣ್ಣಿಗೆ ಒಂದೆರಡು ಹನಿ ಹರಳೆಣ್ಣೆಯನ್ನು ಹಾಕುವುದರಿಂದ ಕಣ್ಣಿನಲ್ಲಿ ಬಿದ್ದ ಕಸ ಮಾತ್ರ ಹೊರಗೆ ಬರುವುದಲ್ಲದೆ ಕಣ್ಣು ಕೂಡ ಸ್ವಚ್ಛವಾಗಿರುತ್ತದೆ. ನಮ್ಮ ಕಣ್ಣಿನಲ್ಲಿರುವ ಕಸವನ್ನು ಹೊರಗೆ ತೆಗೆಯಲು ಇನ್ನೊಂದು ಸುಲಭವಾದ ಟಿಪ್ ಎಂದರೆ ಈರುಳ್ಳಿ. ಒಂದು ಈರುಳ್ಳಿಯನ್ನು ತೆಗೆದುಕೊಂಡು ಜೊತೆ ಇರಬೇಕು ಹೀಗೆ ಮಾಡುವುದರಿಂದ ಕಣ್ಣಿನಲ್ಲಿ ನೀರು ಬಂದು ಕಣ್ಣಿನಲ್ಲಿರುವ ಕಸ ಕೂಡ ಹೊರಗೆ ಬರುವುದು.

ಇನ್ನು ಪದೇಪದೇ ಕಣ್ಣು ತುರಿಸುವ ಅನುಭವ ಆಗುತ್ತಿದ್ದರೆ ರಾತ್ರಿ ಮಲಗುವ ಮುಂಚೆ ಒಂದೆರಡು ಟೇಬಲ್ ಸ್ಪೂನ್ ನಷ್ಟು ಕೊತ್ತಂಬರಿ ಬೀಜವನ್ನು ಒಂದು ಲೋಟ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದು ಆ ನೀರಿನಲ್ಲಿ ತೊಳೆಯುವುದರಿಂದ ಕಣ್ಣು ತುರಿಸುವುದು ಕಡಿಮೆಯಾಗುವುದು. ಯಾವಾಗಲೂ ಕಣ್ಣುಗಳಲ್ಲಿ ಉರಿ ಅಥವಾ ನೋವು ಇದ್ದರೆ, 1 ಟೀಸ್ಪೂನ್ ಕೊತ್ತಂಬರಿ ಬೀಜವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ಒಂದು ಲೋಟ ನೀರಿನಲ್ಲಿ ನೆನೆಸಿಟ್ಟು , ಆಗಾಗ ಕುತ್ತುಂಬರಿ ಬೀಜವನ್ನು ನೀರಿನಲ್ಲಿ ನಡೆಸಿಕೊಂಡು ಆ ಬಟ್ಟೆಯನ್ನು ಕಣ್ಣಿಗೆ ಓದಿಕೊಳ್ಳುವುದರಿಂದ ನೋವು ಹಾಗೂ ಉರಿ ಕಡಿಮೆಯಾಗುವುದು.

ಕೆಲವರಿಗೆ ಕಣ್ಣುಗಳಲ್ಲಿ ಹುಣ್ಣು ಉಂಟಾಗುತ್ತದೆ. ಹೀಗಾದಾಗ ಒಂದೆರಡು ಹನಿ ಅಷ್ಟು ಹರಳೆಣ್ಣೆ ಅಥವಾ ಅವುಗಳ ಎಣ್ಣೆಯನ್ನು ಕಣ್ಣಿಗೆ ಬಿಡುವುದರಿಂದ ಕಣ್ಣುಗಳಲ್ಲಿ ಉಂಟಾದ ಹುಣ್ಣು ಬೇಗನೆ ವಾಸಿಯಾಗುವುದು. ಇನ್ನು ಯಾವಾಗಲೂ ಕಣ್ಣನೋವು ಬರುತ್ತಾ ಇದ್ದರೆ , ಗುಲಾಬಿ ಹೂವನ್ನು ನೀರಿಗೆ ಹಾಕಿ ಬೇಯಿಸಿಕೊಂಡು ಅದರ ನೀರಿನಿಂದ ಕಣ್ಣು ತೊಳೆಯುವುದರಿಂದ ಕಣ್ಣು ನೋವು ಕಡಿಮೆಯಾಗುವುದು. ಸುಲಭವಾದ ಈ ಟಿಪ್ಸ್ ಗಳನ್ನು ಬಳಸಿಕೊಂಡು ನಾವು ನಮ್ಮ ಕಣ್ಣಿನ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.

Leave a Comment