ಮರೆತರು ಸಹ ಹಸುವಿಗೆ ಈ ಮೂರು ವಸ್ತುಗಳನ್ನು ತಿಳಿಸಬೇಡಿ. ಇದರಿಂದ ಮನೆಯಲ್ಲಿ ಬಡತನ ಬರುತ್ತದೆ ತಾಯಿ ಲಕ್ಷ್ಮೀದೇವಿ ಕೂಡ ನಿಮ್ಮ ಕೈಯನ್ನು ಬಿಡುತ್ತಾಳೆ. ಒಂದು ವೇಳೆ ನಿಸ್ವಾರ್ಥ ಭಾವನೆಯಿಂದ ಹಸುವಿನ ಸೇವೆಯನ್ನು ಮಾಡಿದರೆ ಮನೆಯಲ್ಲಿ ತಾಯಿ ಲಕ್ಷ್ಮೀದೇವಿಯ ವಾಸವಾಗುತ್ತದೆ. ಗೋಮಾತೆಯ ಸೇವೆಯನ್ನು ಮಾಡುವುದರಿಂದ ಕುಟುಂಬವು ಸುಖ ಸಂಪತ್ತಿನಿಂದ ತುಂಬಿಕೊಂಡಿರುತ್ತದೆ.
ಯಾರ ಮನೆಯಲ್ಲಿ ನಿಸ್ವಾರ್ಥ ಭಾವನೆಯಿಂದ ಗೋಮಾತೆಗೆ ಸೇವೆಯನ್ನು ಸಲ್ಲಿಸುತ್ತಾರೊ ಅಂತಹ ಮನೆಯಲ್ಲಿ ತಾಯಿ ಲಕ್ಷ್ಮೀದೇವಿಯ ಕೃಪೆ ಯಾವತ್ತಿಗೂ ಇರುತ್ತದೆ. ಯಾರ ಮನೆಯಲ್ಲಿ ಹಸುವನ್ನು ಪೂಜಿಸುವುದಿಲ್ಲವೋ,ಸೇವೆ ಮಾಡುವುದಿಲ್ಲವೋ ಅಂತಹ ಮನೆಯಲ್ಲಿ ಕಷ್ಟಗಳು,ವಿಘ್ನಗಳು ಬರುತ್ತಿರುತ್ತವೆ. ಕೆಲವರು ಸಿಟಿಯಲ್ಲಿ ಇರುತ್ತಾರೆ ಅವರು ಹಸುವನ್ನು ಸಾಕುವುದಕ್ಕೆ ಸಾಧ್ಯವಾಗುವುದಿಲ್ಲ.ಆದರೆ ಅಲ್ಲಿಯೂ ಸಹ ನೀವು ಹಸುವಿಗೆ ರೊಟ್ಟಿಯನ್ನು ತಿನ್ನಿಸಬಹುದಾಗಿದೆ. ಆದರೆ ಹಸುವಿಗೆ ತಿನ್ನಿಸುವಾಗ ಕೆಲವು ತಪ್ಪುಗಳು ನಡೆದು ಹೋಗುತ್ತವೆ.
ಹಸುವಿನ ಒಳಗೆ ಎಲ್ಲಾ ದೇವಾನುದೇವತೆಗಳು ಮಾಸವಿರುತ್ತದೆ. ಮುಂಜಾನೆ ಮೊದಲ ರೊಟ್ಟಿಯನ್ನು ಏನಾದರೂ ಹಸಿವಿಗೆ ತಿನ್ನಿಸಿದರೆ ಎಲ್ಲಾ ದೇವಾನುದೇವತೆಗಳ ಆಶೀರ್ವಾದ ಸಿಗುತ್ತದೆ. ಗೋಮಾತೆಯನ್ನು ಗುರುವಿನೊಂದಿಗೆ ಹೋಲಿಸಲಾಗಿದೆ. ಗುರುವಾರದ ದಿನದಂದು ರೊಟ್ಟಿಯಮೇಲೆ ಒಂದು ಚಿಟಿಕೆ ಅರಿಶಿಣವನ್ನು ಹಚ್ಚಿ ಗೋಮಾತೆಗೆ ತಿನ್ನಿಸಿದರೆ ಸುಖ,ಸಂಪತ್ತು ಧನ,ಐಶ್ವರ್ಯ ಎಲ್ಲವೂ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ದುಷ್ಟಗ್ರಹಗಳು ಶಾಂತವಾಗುತ್ತದೆ.
ಯಾವ ವ್ಯಕ್ತಿ ಮಾನಸಿಕ ರೂಪದಲ್ಲಿ ತೊಂದರೆಯಲ್ಲಿ ಇರುತ್ತಾರೊ ರೊಟ್ಟಿಯಲ್ಲಿ ಸ್ವಲ್ಪ ಬೆಲ್ಲವನ್ನು ಬೆರೆಸಿ ತಿನ್ನಿಸಬೇಕು.ಇದರಿಂದ ಸಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದೆ ಮತ್ತು ಚಿಂತೆಗಳು ಕಡಿಮೆಯಾಗುತ್ತದೆ. ಒಂದು ವೇಳೆ ನಿಮ್ಮ ಗ್ರಹಗಳ ಪರಿಸ್ಥಿತಿ ಸರಿ ಇಲ್ಲ ಎಂದು ತಿಳಿದರೆ ಮೊದಲನೆಯ ರೊಟ್ಟಿಯನ್ನು ಹಸುವಿಗೆ ಪ್ರತಿದಿನ ತಿನ್ನಿಸಿ. ಎಲ್ಲಾ ಗ್ರಹಗಳು ನಿಧಾನವಾಗಿ ಶುಭವಾಗುತ್ತದೆ.
ಒಂದು ವೇಳೆ ಜೀವನದಲ್ಲಿ ತುಂಬಾ ದಿನದಿಂದ ಮಂಗಳ ಕಾರ್ಯ ನಡೆಯುತ್ತಿಲ್ಲ ಎಂದರೆ ಹಸುವಿಗೆ ಮೊದಲು ರೊಟ್ಟಿಯನ್ನು ತಿನ್ನಿಸಬೇಕು.ಹಸುವಿನ ಹಣೆಯ ಮುಟ್ಟಿ ನಿಮ್ಮ ಮನಸ್ಸಿನ ಇಚ್ಛೆಯನ್ನು ಅದರ ಬಳಿ ಹೇಳಿಕೊಳ್ಳಬೇಕು.ಹಸುವಿನ ಕಾಲನ್ನು ಮುಟ್ಟಿ ಬೇಡಿ ಕೊಳ್ಳುವುದಿರಿಂದ ನಿಮ್ಮ ಇಚ್ಛೆಗಳು ನೆರವೇರುತ್ತದೆ.
ಹಸುವಿಗೆ ಪ್ರತಿಯೊಬ್ಬರು ರೊಟ್ಟಿಯನ್ನು ತಿನ್ನಿಸುತ್ತಾರೆ. ಒಂದು ದಿನದ ಹಿಂದಿನ ರೊಟ್ಟಿಯನ್ನು ಹಸುವಿಗೆ ತಿನ್ನಿಸಬಾರದು. ಹೀಗೆ ಮಾಡಿದರೆ ಹಸುವಿಗೆ ಅವಮಾನ ಆಗುತ್ತದೆ ಆದ್ದರಿಂದ ಉಳಿದ ರೊಟ್ಟಿಯನ್ನು ಹಸುವಿಗೆ ತಿನ್ನಿಸಬೇಡೀ. ಈ ರೀತಿ ಮಾಡುತ್ತಿದ್ದರೆ ಮೊದಲು ಇದನ್ನು ನಿಲ್ಲಿಸಿ. ಯಾಕೆಂದರೆ ಇದರಿಂದ ಮನೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಜನರು ಹೆಚ್ಚಾಗಿ ಅರಳಿ ಮರದ ಎಲೆಗಳನ್ನು ಹಸುವಿಗೆ ತಿನ್ನಿಸುತ್ತಾರೆ. ಆದರೆ ಆ ಎಲೆಗಳನ್ನು ನೀವು ಕಿತ್ತುಕೊಂಡು ಹಸುವಿಗೆ ತಿನ್ನಿಸಬಾರದು. ಮನೆಯಲ್ಲಿ ತರಕಾರಿ ತೆಗೆದುಕೊಂಡು ಬಂದಾಗ ಉಳಿದ ತರಕಾರಿಯನ್ನು ಹಸುವಿಗೆ ತಿನ್ನಿಸಬೇಡಿ. ಸ್ವಲ್ಪ ಒಳ್ಳೆಯ ವಸ್ತುಗಳನ್ನು ಸೇರಿಸಿ ಹಸುವಿಗೆ ತಿನ್ನಿಸಬೇಕು. ಈ ರೀತಿ ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ. ಮುಖ್ಯವಾಗಿ ಹಸುವಿಗೆ ಹಾಲನ್ನು ಕುಡಿಸಬೇಡಿ.