ಈ ಬಣ್ಣದ ಹೂವುಗಳು ಕನಸಿನಲ್ಲಿ ಕಾಣಿಸಿಕೊಂಡರೆ ಇದಕ್ಕೂ ಕೂಡ ಅರ್ಥ ಇರುತ್ತದೆ.ಯಾವುದಾದರೂ ಒಳ್ಳೆಯ ರೀತಿಯ ಕೆಲಸಗಳು ಆಗಬೇಕು ಎಂದರೆ ಈ ಬಣ್ಣದ ಹೂವುಗಳು ಕನಸಿನಲ್ಲಿ ಕಂಡರೆ ಶುಭಕರ ಎಂದು ಹೇಳಲಾಗಿದೆ ಹಾಗೂ ಇನ್ನು ಕೆಲವು ಹೂವುಗಳು ಕಂಡರೆ ಮುಂದೆ ಆಗುವ ಕೆಟ್ಟ ಸೂಚನೆಗಳ ಬಗ್ಗೆ ಸೂಚನೆಗಳನ್ನು ನೀಡುತ್ತದೆ.
ಇನ್ನು ಕನಸಿನಲ್ಲಿ ನೀವು ದೇವರಿಗೆ ಹೂವುಗಳನ್ನು ಅರ್ಪಿಸುವ ರೀತಿ ಕನಸು ಬಿದ್ದರೆ ಖಂಡಿತವಾಗಿ ದೈವ ಅನುಗ್ರಹ ಆಗುತ್ತದೆ ಎಂದು ಅರ್ಥ.ನಿಮಗೆ ಇರುವ ಕಷ್ಟಗಳು ನಿವಾರಣೆ ಆಗಿ ದೈವನುಗ್ರಹದಿಂದ ಆ ಕೆಲಸ ಮುಂದಕ್ಕೆ ಹೋಗುತ್ತದೆ.ಇನ್ನು ದಾರಿಯಲ್ಲಿ ಬಿದ್ದಿರುವ ಹೂವನ್ನು ನೀವು ಕಾಲಿನಿಂದ ತುಳಿದುಕೊಂಡು ಹೋಗುವ ರೀತಿ ಕನಸು ಬಿದ್ದರೆ ನೀವು ಹಣಕ್ಕೆ ಹೆಚ್ಚಿನ ಬೆಲೆಯನ್ನು ನೀಡುತ್ತಿಲ್ಲ ಮತ್ತು ತಪ್ಪನ್ನು ಮಾಡುತ್ತಿದ್ದೀರಾ ಎಂದು ಅರ್ಥ.ಇದಕ್ಕೆ ಪರಿಹಾರ ಏನು ಎಂದರೆ ದುರ್ಗಾ ದೇವಿ ಮತ್ತು ಗಣಪತಿ ದೇವರನ್ನು ಹೆಚ್ಚಾಗಿ ಪೂಜೆಯನ್ನು ಮಾಡಬೇಕು.ಇದರಿಂದ ನಿಮ್ಮ ಸಮಸ್ಸೆಗಳು ನಿವಾರಣೆ ಆಗುತ್ತದೆ.
ಇನ್ನು ಕನಸಿನಲ್ಲಿ ಕೆಂಪು ಗುಲಾಬಿ ಕಂಡರೆ ಸಂತೋಷಕರವಾದ ಸುದ್ದಿಗಳನ್ನು ಕೇಳುತ್ತೀರಾ ಹಾಗೂ ಗಂಡ ಹೆಂಡತಿ ಮಧ್ಯ ಇರುವ ವೈಮನಸ್ಸು ಕೂಡ ನಿವಾರಣೆ ಆಗುತ್ತದೆ.ಇನ್ನು ಒಣಗಿರುವ ಗುಲಾಬಿ ಹೆಚ್ಚಾಗಿ ಕನಸಿನಲ್ಲಿ ಕಾಣಿಸುತ್ತಿದ್ದಾರೆ ನಿಮ್ಮ ಕನಸುಗಳು ನುಚ್ಚು ನೂರು ಆಗುತ್ತದೆ.ಅದರಲ್ಲೂ ಕೂಡ ಎಚ್ಚರಿಕೆಯಿಂದ ಇರಬೇಕು.ಇನ್ನು ಮಲ್ಲಿಗೆ ಮತ್ತು ಬೇರೆ ಪುಷ್ಟಗಳು ಕನಸಿನಲ್ಲಿ ಕಂಡರೆ ಶುಭ ವಾರ್ತೆಗಳನ್ನು ಕೇಳುತ್ತೀರಾ ಹಾಗೂ ಶುಭ ಘಳಿಗೆ ಪ್ರಾರಂಭ ಆಗುತ್ತದೆ ಎಂದು ಅರ್ಥ.ಇನ್ನು ಬಿಳಿ ಬಣ್ಣ ಶಾಂತಿಯ ಸಂಕೇತ ಆಗಿದೆ ಹಾಗೂ ಮಾನಸಿಕ ನೆಮ್ಮದಿ ಪ್ರಾಪ್ತಿ ಆಗುತ್ತದೆ.ಹೀಗೆ ಬಿಳಿ ಬಣ್ಣದ ಗುಲಾಬಿ ಕಾಣಿಸಿಕೊಂಡರೆ ಇಷ್ಟು ದಿನ ನಿಮಗೆ ತಿಳಿಯದೇ ಇರುವ ಕೋರಿಕೆಗಳು ತೀರಿ ನಿಮ್ಮ ಇಷ್ಟರ್ಥಗಳು ಈಡೇರುತ್ತದೆ.
ಇನ್ನು ಕನಸಿನಲ್ಲಿ ಹೂವುಗಳು ಮರದಿಂದ ಕೆಳಗೆ ಬೀಳುವ ಕನಸು ಬಿದ್ದರೆ ನೀವು ಮಾಡುವ ಕೆಲಸ ಕಾರ್ಯದಲ್ಲಿ ಅಡ್ಡಿ ಆತಂಕಗಳು ಎದುರು ಆಗುತ್ತದೆ ಎಂದು ಅರ್ಥ ಹಾಗೂ ಧನ ನಷ್ಟ ಆಗುತ್ತದೆ ಎಂದು ಸೂಚನೆ ನೀಡುತ್ತದೆ.ಅಷ್ಟೇ ಅಲ್ಲದೆ ಮಾನಸಿಕವಾದ ಸಮಸ್ಸೆಗಳನ್ನು ವೇದನೆಗಳನ್ನು ಅನುಭವಿಸಬೇಕಾಗುತ್ತದೆ ಎನ್ನುವ ಅರ್ಥ ಇದು ಆಗಿರುತ್ತದೆ.ಒಂದು ವೇಳೆ ಹೂವಿನ ಬೊಕ್ಕೆ ನಿಮಗೆ ಯಾರಾದರೂ ಕೊಡುವ ರೀತಿ ಕನಸು ಬಿದ್ದರೆ ಇದು ಶುಭಕರ ಸೂಚನೆ ಇದು ಮತ್ತು ನಿಮಗೆ ಬೀಗ ಮದುವೆ ಆಗುತ್ತದೆ ಎನ್ನುವ ಅರ್ಥವನ್ನು ಕೊಡುತ್ತದೆ.ನಿಮ್ಮ ಪ್ರೀತಿ ಪಾತ್ರರ ಜೊತೆ ಬೇಗಾ ಸೇರಿಕೊಳ್ಳುತ್ತಿರ ಎನ್ನುವ ಅರ್ಥವನ್ನು ನೀಡುತ್ತದೆ.
ಇನ್ನು ಕನಕಾಂಬರಿ ನಿಮ್ಮ ಕನಸಿನಲ್ಲಿ ಬಂದರೆ ನಿಮ್ಮ ಸಂಬಂಧಿಕರಲ್ಲಿ ಸಂತಾನ ಪ್ರಾಪ್ತಿ ಆಗುತ್ತದೆ ಎಂದು ಅರ್ಥ.ಇನ್ನು ದಾಸವಾಳ ಕನಸಿನಲ್ಲಿ ಬಂದರೆ ಬಹಳ ಒಳ್ಳೆಯದು.ಕೆಲಸದಲ್ಲಿ ವಿಜಯ ಮತ್ತು ಲಾಭ ನಿಮಗೆ ಸಿಗುತ್ತದೆ ಎನ್ನುವ ಸೂಚನೆಯನ್ನು ನೀಡುತ್ತದೆ.