ಚೈತ್ರ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಚೈತ್ರ ಪೌರ್ಣಮಿ ಎಂದು ಕರೆಯುತ್ತೇವೆ. ಈ ಚೈತ್ರ ಪೌರ್ಣಮಿಗೆ ಬಹಳ ವಿಶೇಷವಾದಂತಹ ಸ್ಥಾನಮಾನವಿದೆ. ಏಕೆಂದರೆ ಈ ಚೈತ್ರ ಪೌರ್ಣಮಿ ದಿನದಂದು ಆಂಜನೇಯ ಸ್ವಾಮಿ ಜನಿಸಿದರು ಎನ್ನುವ ನಂಬಿಕೆ ಇದೆ.ಹಾಗಾಗಿ ಹನುಮ ಜಯಂತಿಯನ್ನು ಈ ಚೈತ್ರ ಪೌರ್ಣಮಿ ದಿನ ಆಚರಣೆ ಮಾಡಲಾಗುತ್ತದೆ.
ಚೈತ್ರ ಪೌರ್ಣಮಿ ಏಪ್ರಿಲ್ 23ನೆ ತಾರೀಕು ಮಂಗಳವಾರದ ದಿನ ಬಂದಿದೆ. ಇನ್ನು ಚೈತ್ರ ಪೌರ್ಣಮಿ ತಿಥಿ ಆರಂಭ ಆಗುವಂತಹದ್ದು ಏಪ್ರಿಲ್ 23ನೇ ತಾರೀಕು ಬೆಳಗ್ಗೆ 3:25 ನಿಮಿಷಕ್ಕೆ ಆರಂಭವಾಗಿ ಏಪ್ರಿಲ್ 24ನೇ ತಾರೀಕು ಬೆಳಗ್ಗೆ 5:18 ನಿಮಿಷಕ್ಕೆ ಮುಕ್ತಯವಾಗುತ್ತದೆ. ಹಾಗಾಗಿ ಏಪ್ರಿಲ್ 23ನೇ ತಾರೀಕು ಮಂಗಳವಾರ ಪೂಜೆಯನ್ನು ಆಚರಣೆ ಮಾಡಬೇಕು. ಇನ್ನು ಅಮಾವಾಸ್ಯೆ ಮತ್ತು ಹುಣ್ಣಿಮೆ ಪೂಜೆಯನ್ನು ಬ್ರಾಹ್ಮೀ ಮುಹೂರ್ತದಲ್ಲಿ ಮಾಡಿದರೆ ಒಳ್ಳೆಯದು. ಈ ದಿನ ಆಂಜನೇಯ ದೇವರ ದರ್ಶನ ಪಡೆಯುವುದು ತುಂಬಾ ಶ್ರೇಷ್ಠ