ಈ ಅರುಂಧತಿ ಯಾರು? ಮಧುವೇ ವೇಳೆ ಅರುಂಧತಿ ನಕ್ಷತ್ರ ತೋರಿಸೋದ್ಯಕೆ?

ತುಳಸಿ ದೇವಿಯಂತೆ ಪತಿವೃತೆಯಾದ ಇನ್ನೊಂದು ಹೆಣ್ಣುಮಗಳೆಂದರೆ ಅರುಂಧತಿ. ನಕ್ಷತ್ರದ ರೂಪದಲ್ಲಿರುವ ಅರುಂಧತಿ ಯಾರು..? ಮಧುಮಕ್ಕಳು ಅರುಂಧತಿ ನಕ್ಷತ್ರವನ್ನೇಕೆ ನೋಡಬೇಕು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಯಾರು ಈ ಅರುಂಧತಿ ಅಂತಾ ನೋಡುವುದಾದರೆ, ಶ್ರೀರಾಮನ ಗುರುಗಳಾದ ವಸಿಷ್ಠ ಮುನಿಗಳ ಪತ್ನಿಯೇ ಅರುಂಧತಿ. ಇವರ ದಾಂಪತ್ಯ ಜೀವನ ಎಷ್ಟು ಸುಂದರವಾಗಿದೆಯೆಂದರೆ, ಅರುಂಧತಿ ನಕ್ಷತ್ರದ ಪಕ್ಕವೇ, ವಸಿಷ್ಠ ನಕ್ಷತ್ರವಿದೆ. ಅಂದರೆ ಮರಣದ ನಂತರವೂ ಇವರು ಒಬ್ಬರ ಜೊತೆಗೊಬ್ಬರು ಇದ್ದಾರೆ ಅನ್ನುತ್ತೆ ಪುರಾಣದ ಕಥೆಗಳು.

ಪುರಾಣದ ಕಥೆಯ ಪ್ರಕಾರ, ಅಗ್ನಿದೇವನಿಗೆ ಸಪ್ತಋಷಿಗಳ ಪತ್ನಿಯರೊಂದಿರೆ ಸರಸವಾಡುವ ಮನಸ್ಸಾಗುತ್ತದೆ. ಇದನ್ನರಿತ ಅಗ್ನಿದೇವನ ಪತ್ನಿ ಸ್ವಾಹಾ, ಸಪ್ತ ಋಷಿಗಳಲ್ಲಿ 6 ಋಷಿಗಳ ಮಡದಿಯರಲ್ಲಿ ಆಹ್ವಾನೆಯಾಗಿ, ಅಗ್ನಿ ದೇವನೊಂದಿಗೆ ಸರಸವಾಡುತ್ತಾಳೆ. ಆದ್ರೆ ಅರುಂಧತಿ ಮೈಯಲ್ಲಿ ಮಾತ್ರ ಹೋಗಲು ಸಾಧ್ಯವಾಗುವುದಿಲ್ಲ. ಯಾಕಂದ್ರೆ ಅರುಂಧತಿ ಅಂಥ ಪತಿವೃತೆಯಾಗಿರುತ್ತಾಳೆ.

ವಿವಾಹದ ಸಂದರ್ಭದಲ್ಲಿ ಪತಿ ಪತ್ನಿಗೆ ಅರುಂಧತಿ ನಕ್ಷತ್ರವನ್ನ ತೋರಿಸುವ ವಾಡಿಕೆ ಕೆಲವೆಡೆ ಇದೆ. ಈ ನಕ್ಷತ್ರ ತೋರಿಸಲು ಕಾರಣವೇನೆಂದರೆ, ಅರುಂಧತಿಯಂತೆ ತಾನು ಕಟ್ಟಿಕೊಳ್ಳುವ ಹೆಣ್ಣು ಪತಿವೃತೆಯಾಗಿರಲಿ ಎಂದು. ಅದರಂತೆ ಅರುಂಧತಿ ನಕ್ಷತ್ರದ ಪಕ್ಕವೇ ವಸಿಷ್ಠ ನಕ್ಷತ್ರವೂ ಇದೆ. ಇದರ ಅರ್ಥ ಪತಿ ಪತ್ನಿ ಜೀವನ ಅರುಂಧತಿ ಮತ್ತು ವಸಿಷ್ಠ ಮುನಿಗಳ ಜೀವನದಂತೆ ಪ್ರೀತಿಪೂರ್ವಕ, ಅರ್ಥಪೂರ್ಣವಾಗಿರಲಿ ಎಂದಾಗಿದೆ

Leave a Comment