ಪ್ರತಿನಿತ್ಯ ತುಳಸಿಗೆ ನೀರು ಹಾಕಬೇಕಾದರೆ ಈ ಒಂದು ಕೆಲಸವನ್ನು ಮಾಡಿ ತುಳಸಿ ಗಿಡಕ್ಕೆ ನೀರನ್ನು ಹಾಕಿದರೆ ನೀವು ಅಂದುಕೊಂಡಂತ ಕೆಲಸಗಳು ಆಗುತ್ತದೆ. ಸಾಕ್ಷಾತ್ ತುಳಸೀದೇವಿಯಾ ಅನುಗ್ರಹದಿಂದ ಮನೆಗೆ ವಿಶೇಷವಾದಂತಹ ಅದ್ಭುತವಾದಂತಹ ರಕ್ಷೆ ಪ್ರಾಪ್ತಿ ಆಗುತ್ತದೆ. ಯಾರ ಮನೆಯಲ್ಲಿ ಮಾಟ ಮಂತ್ರ ರೋಷಗಳು ನೆಗೆಟಿವ್ ಎನರ್ಜಿ ಗಳು ಅಕ್ಕಪಕ್ಕದವರಿಗೆ ಇರಬಹುದು, ಸಂಬಂಧಿಕರು ಆಗಿರಬಹುದು ಅಥವಾ ಶತ್ರುಗಳು ಏನಾದರೂ ನೇರ ದೃಷ್ಟಿ ದೋಷಗಳು ನಿಮಗೆ ಕಾಡುತ್ತಿದ್ದರೆ ಈ ಎಲ್ಲಾ ದೋಷಗಳು ಕಳೆದುಹೋಗುತ್ತದೆ.
ಮನೆಯಲ್ಲಿ ಪ್ರತಿಯೊಬ್ಬರು ಕೂಡ ತುಳಸಿ ಗಿಡವನ್ನು ಇಟ್ಟುಕೊಳ್ಳಬೇಕು. ತುಳಸಿ ಮಾತೆಯ ಅನುಗ್ರಹ ಮನೆಗೆ ಸಂಪೂರ್ಣವಾಗಿ ಇದ್ದರೆ ಮಾಟ-ಮಂತ್ರದ ದೋಷದ ಶಕ್ತಿಗಳು ನಡೆಯುವುದಿಲ್ಲ. ದುಷ್ಟಶಕ್ತಿಗಳ ಪ್ರಭಾವ ಹೆಚ್ಚಾಗಿ ಇರುವುದಿಲ್ಲ. ಸಕಲ ದೃಷ್ಟಿದೋಷಗಳು ಬಾಗಿಲಿನ ಹಿಂದೆ ತಡೆದು ನಿಲ್ಲಿಸುವಂತಹ ಶಕ್ತಿ ತುಳಸಿ ಗಿಡಕ್ಕೆ ಇರುತ್ತದೆ. ಹೆಂಗಸರು ಮುಟ್ಟಾದಂತಹ ದಿನಗಳಲ್ಲಿ ಯಾವುದೇ ಕಾರಣಕ್ಕೂ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು. ತುಳಸಿ ಗಿಡದ ಎಲೆಯನ್ನು ಸ್ಪರ್ಶ ಮಾಡಬಾರದು.
ಸೂತಕದ ಸಮಯದಲ್ಲಿ ತುಳಸಿ ಗಿಡವನ್ನು ಸ್ಪರ್ಶ ಮಾಡಬಾರದು.ಇನ್ನೊಬ್ಬರ ಮನೆಗೆ ಹೋದಾಗ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬಾರದು. ಮಾಂಸಾಹಾರ ಸೇವನೆ ಮಾಡಿದ ದಿನಗಳು ಹಾಗೂ ಎಂಜಲು ಕೈಯಲ್ಲಿ ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಮುಟ್ಟಬಾರದು. ಒಂದು ವೇಳೆ ಮುಟ್ಟಿದರೆ ಕಷ್ಟಗಳು ಎದುರಾಗುತ್ತದೆ ಮತ್ತು ತುಳಸಿ ಗಿಡ ಒಣಗಿ ಹೋಗುತ್ತದೆ.
ಒಂದು ವೇಳೆ ಪದೇಪದೇ ತುಳಸಿ ಗಿಡ ಒಣಗಿದರೆ ನಿಮಗೆ ಕಷ್ಟಗಳು ಎದುರಾಗುತ್ತವೆ ಎಂದು ಅರ್ಥ. ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕುವ ಮುಂಚೆ ಈ ಒಂದು ಕೆಲಸವನ್ನು ಮಾಡಬೇಕು. ತುಂಬಿದ ಬಿಂದಿಗೆ ನೀರನ್ನು ತೆಗೆದುಕೊಂಡು ತುಳಸಿ ಗಿಡಕ್ಕೆ ನೇರವಾಗಿ ಹಾಕಬೇಕು. ಯಾವುದೇ ಕಾರಣಕ್ಕೂ ಅರ್ಧ ಬಿಂದಿಗೆ ಅಥವಾ ಒಂದು ಬಕೆಟ್ ನೀರು ಇರುವಂತಹ ನೀರನ್ನು ಹಾಕಬಾರದು.
ಯಾವಾಗಲೂ ಮನೆಯಲ್ಲಿ ಒಂದು ಬಿಂದಿಗೆಯನ್ನು ಇಟ್ಟುಕೊಂಡಿರಬೇಕು. ಈ ಒಂದು ತುಂಬಿದ ಕೊಡದಿಂದ ನೀವು ನೀರನ್ನು ಹಾಕಬೇಕು.ನೀರು ಹಾಕುವ ಮೊದಲು ಚೊಂಬಿಗೆ ಒಂದು ಚಿಟಿಕೆ ಅರಿಶಿಣವನ್ನು ಹಾಕಿ. ಈ ರೀತಿ ತುಳಸಿ ಗಿಡಕ್ಕೆ ನೀರು ಹಾಕಿದರೆ ಈ ಒಂದು ನೀರು ತಾಜ ನೀರು ಆಗಿರುತ್ತದೆ ಮತ್ತು ಶುದ್ಧ ನೀರು ಆಗಿರುತ್ತದೆ.ಆ ನೀರನ್ನು ತುಳಸಿ ಗಿಡಕ್ಕೆ ಅರ್ಪಿಸುತ್ತಾ ವಿಶೇಷವಾಗಿ ತುಳಸಿ ಮಾತೆಗೆ ನಮಸ್ಕಾರವನ್ನು ಮಾಡಿಕೊಂಡರೆ ಫಲಗಳು ಪ್ರಾಪ್ತಿಯಾಗುತ್ತದೆ.ತುಳಸಿ ಗಿಡಕ್ಕೆ ಮಾಡುವ ಪೂಜೆ ಅದ್ಭುತವಾದ ಶಕ್ತಿಯನ್ನು ಮನೆಗೆ ನೀಡುತ್ತದೆ. ಎಲ್ಲಾ ರಂಗದಲ್ಲಿ ಯಶಸ್ಸು ಎನ್ನುವುದು ಪ್ರಾಪ್ತಿಯಾಗುತ್ತದೆ. ತುಳಸಿ ಗಿಡಕ್ಕೆ ನೀರು ಹಾಕುವುದಕ್ಕಿಂತ ಮುಂಚೆ ನೀವು ತುಂಬಿದ ಬಿಂದಿಗೆಯಿಂದ ನೀರನ್ನು ತೆಗೆದುಕೊಳ್ಳಬೇಕು ಮತ್ತು 3 ಚಿಟಿಕೆ ಅರಿಶಿಣವನ್ನು ಹಾಕಬೇಕು. ಸಂಕಲ್ಪವನ್ನು ಮಾಡಿಕೊಂಡು ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು. ವಾರದಲ್ಲಿ ಎರಡು ಬಾರಿಯಾದರೂ ಕೂಡ ನೀವು ಗಿಡಕ್ಕೆ ನೀರು ಹಾಕುವುದರಿಂದ ಜೊತೆಗೆ 3 ಚಿಟಿಕೆ ಅರಿಶಿಣ ಬೆರೆಸುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.