Gall Bladder stone ಗೆ ಮುಖ್ಯ ಕಾರಣಗಳು ಎಂದರೆ ಹೆಚ್ಚು ಖಾರ ಮತ್ತು ಹುಳಿ ಸೇವನೆ ಮಾಡುವುದು, ತಡವಾಗಿ ಆಹಾರವನ್ನು ಸೇವನೆ ಮಾಡುವುದು, ತಡವಾಗಿ ಮಲಗುವುದು, ಆಜೀರ್ಣ, ಗ್ಯಾಸ್, ಮಲಬದ್ಧತೆ ಸಮಸ್ಸೆಯಿಂದ ಪಿತ್ತ ವೃದ್ಧಿಯಾಗಿ ಗಂಟುಗಳೇ ಸ್ಟೋನ್ ಆಗುತ್ತವೆ. ಇನ್ನು ಈ ರೀತಿ ಇದ್ದಾಗ ಎದೆಯಲ್ಲಿ ವಿಪರೀತ ನೋವು ಬರುತ್ತದೆ, ವಾಮಿಟ್, ಹುಳಿ ತೇಗು, ತಿಂದಿದ್ದು ಜೀರ್ಣ ಆಗುತ್ತಿರುವುದಿಲ್ಲ, ತಲೆ ಸುತ್ತು,ನಿದ್ದೆ ಚೆನ್ನಾಗಿ ಬರುತ್ತಿರುವುದಿಲ್ಲ. ಇದೆಲ್ಲಾ gall bladder ಲಕ್ಷಣ.
ಇದಕ್ಕೆ ಮನೆಮದ್ದು ಎಂದರೆ ಕಾಡು ಬಸಲೆ ಸೊಪ್ಪು 4-5 ಎಲೆ ತೆಗೆದುಕೊಳ್ಳಿ ಮತ್ತು ಇಂಗಳಾರದ ಹಣ್ಣು 2-3 ಗುಳಿಗೆ ತಗೋಳಿ. ಇವುಗಳನ್ನು ಸೇರಿಸಿ ಎಳೆನೀರಿನಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಸೇವನೆ ಮಾಡಬೇಕು. ರಾತ್ರಿ ಇದನ್ನು ನೀರಿನಲ್ಲಿ ಸೇವನೆ ಮಾಡಬೇಕು. ಇನ್ನು ರಾತ್ರಿ ಹರೆಳೆಣ್ಣೆ ಅನ್ನು ಬಿಸಿ ನೀರಿನಲ್ಲಿ ಸೇವನೆ ಮಾಡಬೇಕು. ಈ ರೀತಿ ಮಾಡಿದರೆ gall bladder ಸ್ಟೋನ್ ಕರಗುತ್ತದೆ.