ಮಾವಿನ ಹಣ್ಣು ತಿನ್ನುವ ಮುಂಚೆ ಇದನ್ನು ನೋಡಲೇಬೇಕು!

ಬೇಸಿಗೆಯಲ್ಲಿ ಮಾವು ತಿನ್ನದೆ ಇರುವವರು ತುಂಬಾ ಕಡಿಮೆ ಎನ್ನಬಹುದು. ಅದರಲ್ಲೂ ಗ್ರಾಮೀಣ ಭಾಗದ ಜನರು ಮರದಿಂದಲೇ ಮಾವು ಕಿತ್ತುಕೊಂಡು ತಿನ್ನುವ ಖುಷಿಯೇ ಬೇರೆ. ಮಾವನ್ನು ಹಾಗೆ ಸೇವನೆ ಮಾಡಬಹುದು ಅಥವಾ ಅದನ್ನು ಇನ್ನಿತರ ರೂಪಗಳಲ್ಲಿ ಕೂಡ ಸೇವಿಸಬಹುದು.

ಅದರಲ್ಲೂ ಇದನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಟ್ಟರೆ ಆಗ ಹಲವಾರು ಬಗೆಯ ಲಾಭಗಳು ಸಿಗುವುದು ಎಂದು ಹೇಳಲಾಗುತ್ತದೆ. ಅಂತಹ ಕೆಲವು ಆರೋಗ್ಯ ಲಾಭಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಹಾನಿಕಾರಕ ರಾಸಾಯನಿಕ ತೆಗೆಯುವುದು

ಮಾವಿನ ಹಣ್ಣಿನಲ್ಲಿ ಹಲವಾರು ಬಗೆಯ ವಿಟಮಿನ್ ಗಳಿವೆ. ಆದರೆ ಅದರ ತೊಟ್ಟಿನಲ್ಲಿ ಫೈಟಿಕ್ ಆಮ್ಲ ಎನ್ನುವ ರಾಸಾಯನಿಕವಿದ್ದು, ಇದು ಪ್ರಮುಖ ಪೋಷಕಾಂಶಗಳ ಹೀರುವಿಕೆಗೆ ತಡೆ ಉಂಟು ಮಾಡುವುದು.

ಇದಕ್ಕಾಗಿ ಮಾವಿನ ಹಣ್ಣನ್ನು ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟರೆ ಆಗ ಇದರಿಂದ ರಾಸಾಯನಿಕವು ದೂರವಾಗುವುದು ಮತ್ತು ಪೋಷಕಾಂಶಗಳು ಕೂಡ ದೇಹಕ್ಕೆ ಲಭ್ಯವಾಗುವುದು. ಎರಡು ಗಂಟೆಗೆ ಮೊದಲು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆ ಸಿಟ್ಟರೆ ಒಳ್ಳೆಯದು.​

ತೂಕ ಇಳಿಸಲು ಸಹಕಾರಿ

ಮಾವಿನ ಹಣ್ಣು ಸೇವನೆ ಮಾಡುವ ಪರಿಣಾಮವಾಗಿ ತೂಕ ಇಳಿಸಲು ಸಾಧ್ಯವಾಗುತ್ತಿಲ್ಲವೆಂದು ನೀವು ಭಾವಿಸಿದ್ದರೆ ಅದು ಖಂಡಿತವಾಗಿಯೂ ತಪ್ಪು.

ಮಾವಿನ ಹಣ್ಣಿನಲ್ಲಿ ಪೈಥೋಕೆಮಿಕಲ್ ಅತ್ಯಧಿಕ ಮಟ್ಟದಲ್ಲಿದ್ದು, ಇದನ್ನು ನೀರಿನಲ್ಲಿ ನೆನೆಯಲು ಹಾಕಿದರೆ, ಆಗ ಅದು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುವುದು. ಇದು ಕೊಬ್ಬಿನ ಅಂಗಾಂಶ ಗಳನ್ನು ವಿಘಟಿಸುವುದು ಮತ್ತು ತೂಕ ಇಳಿಸಲು ಸಹಕಾರಿ ಆಗುವುದು.​

ಉಷ್ಣತೆ ತಗ್ಗಿಸುವುದು

ಮಾವಿನ ಹಣ್ಣು ದೇಹದ ಉಷ್ಣತೆ ಹೆಚ್ಚು ಮಾಡುವುದು ಎಂದು ಹೇಳಲಾಗುತ್ತದೆ ಮತ್ತು ಇದರಿಮದ ಚರ್ಮದಲ್ಲಿ ದದ್ದು, ಮೊಡವೆ, ತಲೆನೋವು ಮತ್ತು ವಾಕರಿಕೆ ಉಂಟಾಗಬಹುದು.

ಮಾವಿನ ಹಣ್ಣನ್ನು ಒಂದು ಅರ್ಧಗಂಟೆ ಕಾಲ ನೀರಿನಲ್ಲಿ ನೆನೆಸಿಟ್ಟರೆ ಆಗ ಅದು ಉಷ್ಣತೆಯನ್ನು ಕಡಿಮೆ ಮಾಡುವುದು ಮತ್ತು ಇದರಿಂದ ಮಾವು ತಿಂದ ಬಳಿಕ ದೇಹದ ತಾಪಮಾನವು ಸರಿಯಾಗಿ ಇರುವುದು.​

ಕೃತಕವಾಗಿ ಹಣ್ಣಾಗಿಸಿದ್ದಾರೆಯಾ ಎಂದು ತಿಳಿಯಲು

ಮಾವಿನ ಹಣ್ಣನ್ನು ನೈಸರ್ಗಿಕವಾಗಿ ಅಥವಾ ಕೃತಕವಾಗಿ ಹಣ್ಣಾಗಿಸಿ ದ್ದಾರೆಯಾ ಎಂದು ನಿಮಗೆ ಚಿಂತೆಯಾಗುತ್ತಿದೆಯಾ? ಮಾವನ್ನು ಪಕ್ವಗೊಳಿಸಲು ಕ್ಯಾಲ್ಸಿಯಂ ಕಾರ್ಬೈಡ್ ನ್ನು ಬಳಸಲಾಗುತ್ತದೆ.

ಮಾವಿನ ಹಣ್ಣನ್ನು ನೀರಿನಲ್ಲಿ ಹಾಕಿದರೆ, ಆಗ ಅದು ನೈಸರ್ಗಿಕ ವಾಗಿ ಹಣ್ಣಾಗಿದ್ದರೆ ಮುಳುಗುವುದು. ಆದರೆ ಕೃತಕವಾಗಿ ಹಣ್ಣಾಗಿದ್ದರೆ ಅದು ತೇಲುವುದು.​

ಕೀಟನಾಶಕ ಮತ್ತು ಕೀಟಗಳನ್ನು ದೂರ ಮಾಡುವುದು

ಸಾವಯವವಾಗಿರುವ ಹಣ್ಣುಗಳನ್ನು ತಿನ್ನಲು ಬಯಸಿದರೂ ಅದು ಸಿಗುವುದು ಇಂದಿನ ದಿನಗಳಲ್ಲಿ ತುಂಬಾ ಕಡಿಮೆ. ಕೀಟನಾಶ ಕಗಳನ್ನು ಕೂಡ ಇದಕ್ಕಾಗಿ ಬಳಕೆ ಮಾಡಲಾಗುತ್ತದೆ. ಇದನ್ನು ಹಾಗೆ ತಿಂದರೆ ಆಗ ಆರೋಗ್ಯಕ್ಕೆ ಒಳ್ಳೆಯದಲ್ಲ.

ಕೀಟನಾಶಕಗಳಿಂದ ಸೋಂಕು ಮತ್ತು ಕ್ಯಾನ್ಸರ್ ನಂತಹ ಆರೋಗ್ಯ ಸಮಸ್ಯೆಗಳು ಬರಬಹುದು. ಹೀಗಾಗಿ ಮಾವನ್ನು ನೀರಿ ನಲ್ಲಿ ನೆನೆಸಿಟ್ಟರೆ ಆಗ ಅದು ಕೀಟನಾಶಕ ಹಾಗೂ ರಾಸಾಯನಿ ಕವನ್ನು ದೂರ ಮಾಡು ವುದು. ಅದೇ ರೀತಿಯಲ್ಲಿ ಏನಾದರೂ ಕೀಟಗಳು ಅದರಲ್ಲಿ ಇದ್ದರೆ ಅದನ್ನು ಕೂಡ ಹೊರಗೆ ಬರುವಂತೆ ಮಾಡುವುದು.​

Leave a Comment