ನಾವು ತಿನ್ನುವ ಆಹಾರ ನಮ್ಮ ದೇಹದಲ್ಲಿ ಚೆನ್ನಾಗಿ ಜೀರ್ಣವಾಗಿ ಸಹಜವಾಗಿ ತ್ಯಾಜ್ಯದ ರೂಪದಲ್ಲಿ ಹೊರ ಹೋದರೆ ನಮ್ಮ ಆರೋಗ್ಯ ಮುಕ್ಕಾಲು ಭಾಗ ಸರಿ ಇದ್ದಂತೆ. ಇನ್ನು ನಮ್ಮ ಆಹಾರದಲ್ಲಿ ಸಿಗುವ ಪೌಷ್ಟಿಕಾಂಶಗಳನ್ನು ನಮ್ಮ ದೇಹ ಹೀರಿಕೊಂಡರೆ ನಮ್ಮ ದೈಹಿಕ ಬೆಳವಣಿಗೆ, ಮಾನಸಿಕ ಬೆಳವಣಿಗೆ ಜೊತೆಗೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ.
ಇದಕ್ಕೆಲ್ಲ ಪ್ರಮುಖ ಕಾರಣ ಎಂದರೆ ಅದು ನಮ್ಮ ಆಹಾರ ಪದ್ಧತಿ ಮತ್ತು ನಾವು ಅನುಸರಿಸುವ ಜೀವನ ಶೈಲಿಯ ಕ್ರಮ.ಇತ್ತೀಚಿನ ದಿನಗಳಲ್ಲಿ ಜನರು ನೈಸರ್ಗಿಕ ಪದ್ಧತಿ ಗಳಿಗೆ ಹೆಚ್ಚು ಒಲವು ತೋರುವುದರಿಂದ ಮತ್ತು ಅವುಗಳಿಂದ ಹೆಚ್ಚು ಲಾಭಗಳನ್ನು ಸಹ ಪಡೆಯುತ್ತಿರುವುದರಿಂದ ಈ ವಿಚಾರಗಳು ಹೆಚ್ಚು ಸದ್ದು ಮಾಡುತ್ತಿವೆ. ಅದರಂತೆ ಸಾಮಾ ಜಿಕ ಜಾಲತಾಣಗಳಲ್ಲಿ ಕೂಡ ಸೋಂಪು ಕಾಳುಗಳ ಡ್ರಿಂಕ್ ಸೇವನೆಯ ಬಗ್ಗೆ ಅನೇಕರು ತಮ್ಮ ಯಶಸ್ವಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸೋಂಪು ಕಾಳುಗಳನ್ನು ನೆನೆ ಹಾಕಿ ಅದರ ನೀರು ಕುಡಿಯುವ ಕಾರಣ ಇದೇ!
ನಾರಿನ ಅಂಶ ಅಧಿಕವಾಗಿದೆ
ಸೋಂಪು ಕಾಳುಗಳಲ್ಲಿ ನಾರಿನ ಪ್ರಮಾಣ ಹೆಚ್ಚಾಗಿದ್ದು, ಅದು ನಮ್ಮ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಸಾಕಷ್ಟು ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ.ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಇದು ಒಂದು ರೀತಿಯ ಟಾನಿಕ್ ಇದ್ದಂತೆ ಎಂದು ಸಂಶೋಧನೆಯ ಮೂಲಗಳು ಹೇಳುತ್ತವೆ. ನಿಯಮಿತವಾಗಿ ಯಾರು ಸೋಂಪು ಕಾಳುಗಳ ನೀರನ್ನು ಕುಡಿಯು ತ್ತಾರೆ ಅವರಿಗೆ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಸಹಜ ವಾಗಿ ಕಡಿಮೆಯಾಗುತ್ತದೆ.
ಆಂಟಿ ಆಕ್ಸಿಡೆಂಟ್ ಹೆಚ್ಚಾಗಿದೆ
ಸೋಂಪು ಕಾಳುಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ತುಂಬಾ ಹೇರಳವಾಗಿದೆ. ಇದು ನಮ್ಮ ದೇಹದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಜೊತೆಗೆ ಆಕ್ಸಿಡೆಟೀವ್ ಒತ್ತಡ ವನ್ನು ಸಹ ದೂರ ಮಾಡುತ್ತದೆ.ಏಕೆಂದರೆ ಇವೆರಡೂ ಸಹ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವಂತೆ ಮಾಡುತ್ತವೆ ಎಂದು ಹೇಳುತ್ತಾರೆ. ಹಾಗಾಗಿ ಬೇಡದ ಕೊಲೆಸ್ಟ್ರಾಲ್ ಅನ್ನು ನಮ್ಮ ದೇಹದಿಂದ ಮುಕ್ತಿಗೊಳಿಸಿ ಕೊಳ್ಳಲು ನಾವು ನಂಬಿಕೆ ಇಟ್ಟು ಸೋಂಪು ಕಾಳುಗಳ ನೀರನ್ನು ಕುಡಿಯಬಹುದು.
ಮೂತ್ರವರ್ಧಕ ಕೂಡ ಆಗಿದೆ
ಸೋಂಪು ಕಾಳುಗಳಲ್ಲಿ ನೈಸರ್ಗಿಕವಾಗಿ ನಮ್ಮ ದೇಹದಲ್ಲಿ ಮೂತ್ರದ ಉತ್ಪತ್ತಿಯನ್ನು ಹೆಚ್ಚು ಮಾಡುವ ಗುಣವಿದೆ.ಇದರಿಂದ ನಮ್ಮ ದೇಹದಿಂದ ವಿಷಕಾರಿ ಅಂಶಗಳು ದೂರ ವಾಗಲು ತುಂಬಾ ಸಹಾಯ ವಾಗುತ್ತದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಕೂಡ ಹೊರಗೆ ಹೋಗುವುದ ರಿಂದ ನಮ್ಮ ಹೃದಯದ ಆರೋಗ್ಯ ದೀರ್ಘಕಾಲ ಚೆನ್ನಾಗಿರುತ್ತದೆ.
ಉರಿಯುತದ ವಿರುದ್ಧ ಹೋರಾಡುತ್ತದೆ
ಆಂಟಿ ಇಂಫ್ಲಾಮೇಟರಿ ಗುಣಲಕ್ಷಣಗಳು ಹೆಚ್ಚಾಗಿರುವ ಸೋಂಪು ಕಾಳುಗಳ ನೀರು ಕೇವಲ ನಮ್ಮ ಹೃದಯಕ್ಕೆ ಮಾತ್ರವಲ್ಲದೆ ಇನ್ನೂ ಬೇರೆ ಬೇರೆ ಅಂಗಾಂಗಗಳಿಗೆ ತೊಂದರೆದಾಯಕವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತಗ್ಗಿಸುವಲ್ಲಿ ನೆರವಾಗುತ್ತದೆ.ಮುಖ್ಯವಾಗಿ ಉರಿಯುತವನ್ನು ಕಡಿಮೆ ಮಾಡುವುದರಿಂದ ಇದು ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಹೇಳುತ್ತಾರೆ.
ಲಿವರ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ನಮ್ಮ ದೇಹದ ಕೊಲೆಸ್ಟ್ರಾಲ್ ನಿರ್ವಹಣೆಯಲ್ಲಿ ಪ್ರಮುಖವಾಗಿ ಕೆಲಸ ಮಾಡುವ ನಮ್ಮ ಲಿವರ್ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡುವ ಗುಣವನ್ನು ಸೋಂಪು ಕಾಳುಗಳು ಹೊಂದಿರುವುದರಿಂದ ನಮ್ಮ ದೇಹದ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಮ್ಮ ರಕ್ತದಿಂದ ಹೊರ ಹಾಕುತ್ತದೆ.
ಹೃದಯ ಸಹಕಾರಿ ಗಿಡಮೂಲಿಕೆ ಇದು
ಹೌದು, ಸೋಂಪು ಕಾಳುಗಳನ್ನು ಪ್ರತಿದಿನ ಯಾವುದಾದರೂ ಒಂದು ರೂಪದಲ್ಲಿ ಸೇವಿಸುವುದರಿಂದ ನಮ್ಮ ಹೃದಯಕ್ಕೆ ಬಹಳ ಅನುಕೂಲವಾಗುತ್ತದೆ.ಸೋಂಪು ಕಾಳುಗಳನ್ನು ನೆನೆ ಹಾಕಿದ ನೀರನ್ನು ಕುಡಿಯುವು ದರಿಂದ ಕೂಡ ನಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಸಾಕಷ್ಟು ಕಡಿಮೆಯಾಗಿ ಹೃದಯಕ್ಕೆ ರಕ್ಷಣಾತ್ಮಕವಾಗಿ ನಮ್ಮ ಆರೋಗ್ಯ ವನ್ನು ಕಾಪಾಡುತ್ತದೆ.
ತೂಕ ನಿರ್ವಹಣೆಯಲ್ಲಿ ಸಹಾಯಕ
ಸೋಂಪು ಕಾಳುಗಳಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಇವೆ ಎಂದು ಹೇಳುತ್ತಾರೆ. ಹಾಗಾಗಿ ಇದು ನಮ್ಮ ದೇಹದ ತೂಕವನ್ನು ನಿರ್ವಹಣೆ ಮಾಡುವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತದೆ.ಮುಖ್ಯವಾಗಿ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುವುದರಿಂದ ಜೊತೆಗೆ ನಮ್ಮ ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುವುದ ರಿಂದ ನಮ್ಮ ದೇಹದ ತೂಕ ಸಹಜವಾಗಿ ಕಡಿಮೆಯಾಗುತ್ತದೆ.