ಸಕ್ಕರೆ ಕಾಯಿಲೆ ಇದ್ದವರಿಗೆ ಅಮೃತಬಳ್ಳಿಯ ಔಷಧಿ ಅಮೃತಕ್ಕೆ ಸಮಾನ!

ಅಮೃತಬಳ್ಳಿ ಆಯುರ್ವೇದದ ಅದ್ಭುತವಾದ ಗಿಡಮೂಲಿಕೆ ಆಗಿದೆ. ಸಂಕ್ರಾಮಿಕ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದನ್ನು ಭಾರತೀಯ ವೈದ್ಯಕೀಯದಲ್ಲಿ ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಅಮೃತಬಳ್ಳಿಯನ್ನು ಅಮರತ್ವದ ಮೂಲವೆಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಹೇರಳವಾದ ಔಷಧೀಯ ಗುಣಗಳನ್ನು ಹೊಂದಿದ್ದು ಬಹುತೇಕರು ಅಮೃತಬಳ್ಳಿಯನ್ನು ಮಧುಮೇಹಕ್ಕೆ ಚಿಕಿತ್ಸೆಯನ್ನು ನೀಡುತ್ತದೆ ಎಂದು ತಿಳಿದಿದ್ದಾರೆ. ಇದು ಕೇವಲ ಮಧುಮೇಹಕ್ಕೆ ಮಾತ್ರವಲ್ಲ ಹಲವಾರು ರೋಗ ಲಕ್ಷಣಗಳನ್ನು ಮೊಳಕೆಯಲ್ಲಿ ಶಮನ ಮಾಡುವ ಶಕ್ತಿಯನ್ನು ಹೊಂದಿದೆ. ಅಮೃತಬಳ್ಳಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಸಿಕೊಡುತ್ತೇನೆ.

ಅಮೃತಬಳ್ಳಿ ಹಲವಾರು ರೋಗಗಳು ಬರದಂತೆ ಕಾಪಾಡುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇದರಲ್ಲಿರುವ ಉತ್ಕರ್ಷಕ ನಿರೋಧಕಗಳು ಶಕ್ತಿಯ ಕೇಂದ್ರವಾಗಿದ್ದು ಫ್ರೀ ರೆಡಿಕಲ್ ವಿರುದ್ಧ ಹೋರಾಡುತ್ತದೆ. ನಿಮ್ಮ ಕೋಶಗಳನ್ನು ಅರೋಗ್ಯವಾಗಿ ಇರಿಸಿ ರೋಗಗಳನ್ನು ತೊಡೆದು ಹಾಕುತ್ತದೆ. ಅಷ್ಟೇ ಅಲ್ಲದೇ ರಕ್ತವನ್ನು ಶುದ್ಧೀಕರಿಸಿ ಬ್ಯಾಕ್ಟೇರಿಯಾ ವಿರುದ್ಧ ಹೊರಡುತ್ತದೆ.

ಇನ್ನು ಅಮೃತಬಳ್ಳಿಯು ಅಪಾಯಕಾರಿ ಜ್ವರಗಳಾದ ಡೆಂಗ್ಯೂ ಮಲೇರಿಯಾ ಹಲವಾರು ಮರಣಾತಿಕಾ ಪರಿಸ್ಥಿತಿಗಳ ರೋಗ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.ಇನ್ನು ಸಾಕಷ್ಟು ಮಂದಿ ಜೀರ್ಣ ಕ್ರಿಯೆಯ ಸಮಸ್ಸೆಯನ್ನು ಹೊಂದಿರುತ್ತಾರೆ.ಅಂತವರು ಅಮೃತ ಬಳ್ಳಿಯನ್ನು ಆಗಾಗ ಸೇವನೆ ಮಾಡಬಹುದು.ಇದು ಜೀರ್ಣ ಕ್ರಿಯೆ ಸುಧಾರಿಸಲು ಅಮೃತಬಳ್ಳಿ ಸಹಾಯ ಮಾಡುತ್ತದೆ.

ಅಮೃತಬಳ್ಳಿಯ ಎಲೆಗಳನ್ನು ಬೆಲ್ಲದ ಜೊತೆ ಸೇರಿಸಿ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಇನ್ನು ಅಮೃತಬಳ್ಳಿಯು ಮಧುಮೇಹಕ್ಕೆ ಅತ್ಯುತ್ತಮವಾಗಿ ಚಿಕಿತ್ಸೆಯನ್ನು ನೀಡುತ್ತದೆ. ಇದರಲ್ಲಿರುವ ಗುಣಗಳು ಹೆಚ್ಚಿನ ಮಟ್ಟದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೆಹ ಹೊಂದಿರುವವರು ಆಗಾಗ ಅಮೃತ ಬಳ್ಳಿಯನ್ನು ಸೇವನೆ ಮಾಡುವುದು ಒಳ್ಳೆಯದು.

ಇನ್ನು ಅಮೃತಬಳ್ಳಿಯು ಉರಿಯುತದ ಸಮಸ್ಸೆಗೆ ತುಂಬಾನೇ ಒಳ್ಳೆಯದು.ಆಗಾಗ ಕೆಮ್ಮು ಶೀತ ಉಸಿರಾಟದ ಸಮಸ್ಯೆಗಳಿಂದ ಪಾರು ಮಾಡುತ್ತದೆ.ಇದು ಉರಿಯುತ ಮತ್ತು ಸಂಧಿವಾತ ವಿರೋಧಿ ಗುಣ ಲಕ್ಷಣಗಳನ್ನು ಹೊಂದಿದೆ. ಅಮೃತಬಳ್ಳಿ ಚರ್ಮವನ್ನು ಪೋಷಿಸಲು ವಯಸ್ಸಾದ ಚಿಹ್ನೆಗಳನ್ನು ಗೋಚರವನ್ನು ಕಡಿಮೆ ಮಾಡಲು ಕಲಂಜೆನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ.

Leave a Comment