ಈ ಆಹಾರಗಳನ್ನು ಅಪ್ಪಿತಪ್ಪಿನೂ ಜೊತೆಯಲ್ಲಿ ಸೇವಿಸಬಾರದು ಯಾಕೆ ಗೊತ್ತಾ?ತಿಂದ್ರೆ ಏನಾಗತ್ತೆ?

ಕೆಲ ಆಹಾರಗಳನ್ನು ಏಕಕಾಲಕ್ಕೆ ತಿನ್ನುವುದರಿಂದ ಅನೇಕ ಸಮಸ್ಯೆಗಳು ಕಾಣಿಸುತ್ತದೆ. ಈ ಆಹಾರಗಳನ್ನು ಒಟ್ಟಿಗೆ ತಿನ್ನುವುದರಿಂದ ಅನಾರೋಗ್ಯಕ್ಕೆ ಇಡಾಗುವ ಸಾಧ್ಯತೆ ಇರುತ್ತದೆ. ಅಂತಹ ಕೆಲ ಆಹಾರಗಳ ಪಟ್ಟಿ ಇಲ್ಲಿದೆ.

ಮೀನು ಮತ್ತು ಹಾಲು – ಇವುಗಳನ್ನು ಜೊತೆಯಾಗಿ ಸೇವಿಸಿದರೆ ವಿಟಿಲಿಗೊ ರೀತಿಯ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ.

ಹಾಲು ಮತ್ತು ಮೊಸರು- ಈ ಆಹಾರ ಒಂದೇ ಸ್ವರೂಪವಾಗಿದ್ದರೂ, ಇದನ್ನು ಒಟ್ಟಿಗೆ ಸೇವಿಸುವಂತಿಲ್ಲ. ಹಾಲು ಮೊಸರನ್ನು ಒಂದೇ ಸಮಯದಲ್ಲಿ ಸೇವಿಸಿದರೆ ಗ್ಯಾಸ್ ಮತ್ತು ಅಜೀರ್ಣದ ಸಮಸ್ಯೆಗಳು ಉಂಟಾಗುತ್ತದೆ.

ಬರ್ಗರ್ ಮತ್ತು ತಂಪು ಪಾನೀಯ- ಕೂಲ್​ ಡ್ರಿಂಕ್ಸ್​ನೊಂದಿಗೆ ಬರ್ಗರ್ ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಕೂಲ್ ಡ್ರಿಂಕ್ಸ್- ಆಹಾರಗಳೊಂದಿಗೆ ತಂಪು ಪಾನೀಯಗಳನ್ನು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳು ಉಂಟಾಗುತ್ತದೆ. ಹೊಟ್ಟೆಯಲ್ಲಿ ಎಣ್ಣೆ ಪದಾರ್ಥಗಳು ತಂಪು ಪಾನೀಯದಿಂದ ಘನರೂಪಕ್ಕೆ ಮರಳುತ್ತದೆ. ಇದರಿಂದ ಜೀರ್ಣಕ್ರಿಯೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

Leave a Comment